ಜಿಲ್ಲೆಯ ಜಲಾಶಯದ ಮಟ್ಟಗಳು ಇಂದು ಏನಾಗಿವೆ?

ಸುದ್ದಿಲೈವ್/ಶಿವಮೊಗ್ಗ

ಮಲೆನಾಡಿನಲ್ಲಿ ಮಳೆ ಆರ್ಭಟ ಕಡಿಮೆಯಾಗಿದೆ. ಭದ್ರಾ ಮತ್ತು ತುಂಗೆಯ ಜಲಾಶಯಗಳಲ್ಲಿ ಮಳೆಯ ಒಳಹರಿವು ನಿನ್ನೆ ಗೆ ಹೋಲಿಸಿದರೆ ಕೊಂಚ ಕಡಿಮೆಯಾಗಿದೆ.

ನಿನ್ನೆ ತುಂಗೆಯ ಒಳಹರಿವು ಹೆಚ್ಚಿರುವುದರಿಂದ 6 ಗೇಟನ್ನ ತೆರೆದು ನದಿಗೆ ಜಲಾಶಯದಿಂದ ನೀರು ಹರಿಸಲಾಗುತ್ತಿತ್ತು. ಆದರೆ ಇಂದು 9157 ಕ್ಯೂ ಸೆಕ್ ನಿರು ಹರಿದು ಬರುತ್ತಿದ್ದು, ಅಷ್ಟೆ ಪ್ರಮಾಣದ ನೀರನ್ನ ನದಿಗೆ ಹರಿಸಲಾಗುತ್ತಿದೆ. ಇಂದು ಮೂರು ಗೇಟಿನಿಂದ ನದಿಗೆ ನೀರು ಹರಿಸಲಾಗಿದೆ. ನಿನ್ನೆ 11 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದು ಬಂದಿದ್ದರಿಂದ ಜಲಾಶಯದ 6 ಗೇಟ್ ಒಪನ್ ಮಾಡಲಾಗಿತ್ತು.

ಭದ್ರ ನದಿಗೂ ನಿನ್ನೆಗೆ ಹೋಲಿಸಿಕೊಂಡರೆ ಒಳಹರಿವು ಕಡಿಮೆಯಾಗಿದೆ. 8655 ಕ್ಯೂಸೆಕ್ ನೀರು ನಿನ್ನೆ ಹರಿದು ಬಂದರೆ ಇಂದು 6367 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 186 ಅಡಿಯ ಎತ್ತರದ ಜಲಾಶಯದಲ್ಲಿ ಭದ್ರ ನೀರು 123.4 ಅಡಿ ಸಂಗ್ರಹವಾಗಿದೆ.

ಇನ್ನು 1818 ಅಡಿ ಎತ್ತರವಿರುವ ಲಿಂಗನಮಕ್ಕಿ ಜಲಾಶಯದಲ್ಲಿ 1749 ಅಡಿ ನೀರು ಸಂಗ್ರಹವಾಗಿದೆ. 9184 ಕ್ಯೂಸೆಕ್ ನೀರು ಹರಿದು ಬಂದಿದೆ. 2348.5 ಕ್ಯೂಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಈ ದಿನಾಂಕದಂದು 1740 ಅಡಿ ನೀರು ಸಂಗ್ರಹವಾಗಿತ್ತು.

ಇದನ್ನೂ ಓದಿ-https://suddilive.in/archives/18030

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close