ಸುದ್ದಿಲೈವ್/ಶಿವಮೊಗ್ಗ
ನಾಲ್ಕನೇ ಬಾರಿ 2.43 ಸಾ ವಿರ ಮತಗಳ ಅಂತರದಿಂದ ಗೆದ್ದ ಬಿವೈ ರಾಘವೇಂದ್ರರಿಗೆ ಜೆಡಿಎಸ್ ಅಭಿನಂದಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಗೋಪಾಲ ಕಡಿದಾಳ್ ಮಾತನಾಡಿ, ಮೋದಿ ಅಲೆ ಕಡಿಮೆಯಿದ್ದರೂ ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನ ಗೆದ್ದಿದ್ದಾರೆ. ಇದಕ್ಕೆಕಾರಣ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮೈತ್ರಿ ಕಾರಣ ಎಂದು ತಿಳಿಸಿದರು.
ಈ ಬಾರಿ ಎನ್ ಡಿಎ ಮತ್ತೆ ಕೇಂದ್ರದಲ್ಲಿ ಸರ್ಕಾರವನ್ನ ಮಾಡಿಯೇ ಮಾಡುತ್ತಾರೆ. ಸಂಸದರು ರೈಲ್ವೆ, ಏರ್ ವೇ ಹಾಗೂ ಹೈವೆ, ಆಸ್ಪತ್ರೆ, ಸಮುದಾಯ ಭವನಗಳು ಸೇತುವೆಗಳ ನಿರ್ಮಾಣದಂತಹ ಅಭಿವೃದ್ಧಿ ಮಾಡಿದ್ದರಿಂದ ಗೆಲುವಾಗಿದೆ ಎಂದರು.
ಈ ಬಾರಿ ಮತಗಟ್ಟೆಗಳ ಸಮೀಕ್ಷೆ ತಪ್ಪಾಗಿದೆ. ಬಹಳ ನಿರೀಕ್ಷೆ ಇದ್ದ ಮತಗಟ್ಟೆ ಸಮೀಕ್ಷೆ ತಪ್ಪಾಗಿದೆ. ಜೆಡಿಎಸ್ ಪ್ರಾಬಲ್ಯ ಇದ್ದ ಕ್ಷೇತ್ರದಲ್ಲಿ ಬಿಜೆಪಿ ಸುಲಭ ಗೆಲುವಾಗಿದೆ. ಇಲ್ಲವಾದಲ್ಲಿ ಕಾಂಗ್ರೆಸ್ 15-6 ಸೀಟನ್ನ ಪಡೆಯುತ್ತಿದ್ದರು ಎಂದರು.
ಹಾಸನ ಸೀಟು ಸೋತಬಗ್ಗೆ ಮಾತನಾಡಲು ಹಿಂದೇಟು ಹಾಕಿದ ಗೋಪಾಲ ಕಡಿದಾಳ್ ಪ್ರಕರಣ ಕೋರ್ಟ್ ನಲ್ಲಿರುವ ಕಾರಣ ಮಾತನಾಡುವುದಿಲ್ಲ. ಕಳೆದ ಲೋಕಸಭ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನ ಪಡೆದಿತ್ತು. ಈ ಬಾರಿ ಕಡಿಮೆಯಾಗಿದೆ ಇದಕ್ಕೆ ಮೋದಿ ಅಲೆ ಕಡಿಮೆಯಾಗಿದ್ದೇ ಕಾರಣ ಎಂದರು.
ನಂತರ ಮಾತನಾಡಿದ ಶಾಸಕಿ ಶಾರದ ಪೂರ್ಯನಾಯ್ಕ್, ಇಡೀ ದೇಶದ ಎನ್ ಡಿಎ ಭಾಗದಲ್ಲಿ ಜೆಡಿಎಸ್ ಇದೆ. ಈ ಬಾರಿ ಗ್ಯಾರೆಂಟಿ ಹೊಡೆತಕೊಡುತ್ತಾ ಎಂಬ ಭಯವಿತ್ತು. ಆದರೆ ಮೋದಿ ಅಲೆ ಕಡಿಮೆಯಾದರೂ ಕರ್ನಾಟಕದಲ್ಲಿ ಬಿಜೆಪಿ ಕಡಿಮೆ ಸ್ಥಾನ ಪಡೆದಿದೆ ಎಂದರು.
ಅಭಿವೃದ್ಧಿ ಕೆಲಸಕ್ಕಾಗಿ ಶಿವಮೊಗ್ಗದ ಜನ ರಾಘವೇಂದ್ರರನ್ನ ಗೆಲ್ಲಿಸಿದ್ದಾರೆ. ಮತದಾರ ದೇಶದಲ್ಲಿ ಯಾವುದೇ ಪಕ್ಷಕ್ಕೂ ಬೇಜಾರು ಮಾಡಿಲ್ಲ. ಈ ಬಾರಿ ಮಾಜಿ ಸಿಎಂ ಕುಮಾರ ಸ್ವಾಮಿ ಅವರಿಗೂ ಉತ್ತಮ ಜವಬ್ದಾರಿ ನೀಡಲಿದ್ದಾರೆ ಎಂದು ಸಚಿವ ಸ್ಥಾನ ಪಡೆಯಲಿದ್ದಾರೆ ಎಂಬುದನ್ನ ಬೇಡಿಕೆ ಇಟ್ಟಿದ್ದಾರೆ.
ಹಾಸನದ ಮಾಜಿ ಸಂಸದರ ನಡುವಳಿಕೆ ವಿರುದ್ಧ ಜನರ ಆಕ್ರೋಶವಿತ್ತು ಎಂದು ದೂರಿದರು. ನಂತರ ಮಾತನಾಡಿದ ಜೆಡಿಎಸ್ ಕೋರ್ ಕಮಿಟಿಯ ಕೆಬಿ ಪ್ರಸನ್ನ ಕುಮಾರ್ ಮೈತ್ರಿ ಯಶಸ್ವಿಯಾಗಿದೆ. ಸರ್ಕಾರದ ಕಾರ್ಯವೈಖರಿ ಬಗ್ಗೆ ಭ್ರಮನಿರಸನ ಗೊಂಡಿದ್ದರು. ಹಾಗಾಗಿ ಇದರ ಫಲಿತಾಂಶ ಹೊರಬಿದ್ದಿದೆ.
ಡಬ್ಬಲ್ ಡಿಜಿಟ್ ಬರುತ್ತೆ ಎಂಬ ನಿರೀಕ್ಷೆಯಲಿದ್ದ ಕಾಂಗ್ರೆಸ್ ನಾಯಕರಿಗೆ ಫಲಿತಾಂಶ ನಿರಾಸೆ ಮೂಡಿಸಿದೆ. ಸರ್ಕಾರ ಎಚ್ಚೆತ್ತುಕೊಂಡು ಸ್ಥಳೀಯ ಚುನಾವಣೆ ಮಾಡಬೇಕು. ಗ್ಯಾರೆಂಟಿಗಳನ್ನ ಕೊಟ್ಟು ಅಭಿವೃದ್ಧಿ ಹೆಚ್ಚಿಸುವಂತೆ ಆಗ್ರಹಿಸಿದರು