ರೈಲು ಅಪಘಾತ-ರೈಲ್ವೆ ಸಚಿವ ರಾಜೀನಾಮೆಗೆ ಒತ್ತಾಯ

ಸುದ್ದಿಲೈವ್/ಶಿವಮೊಗ್ಗ

ಕೇಂದ್ರ ಸರ್ಕಾರದ ರೈಲ್ವೇ ಇಲಾಖೆ ವೈಫಲ್ಯ ಖಂಡಿಸಿ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿತು.

ನಂತರ ಮಾತನಾಡಿದ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಸ್.ಶಿವಕುಮಾರ್ ಮಾತನಾಡಿ, ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಜಿಲ್ಲೆಯಲ್ಲಿ ಕಾಂಚನ್ ಜುಂಗಾ ಎಕ್ಸ್ಪ್ರೆಸ್ ರೈಲಿಗೆ ಸರಕು ಸಾಗಾಣೆ ರೈಲು ಹಿಂದಿನಿಂದ ಢಿಕ್ಕಿ ಹೊಡೆದಿದೆ.

ಎಕ್ಸ್ಪ್ರೆಸ್ ರೈಲಿನ ನಾಲ್ಕು ಬೋಗಿಗಳು ಹಳಿ ತಪ್ಪಿದ ಪರಿಣಾಮವಾಗಿ ೯ ಜನ ಮೃತ ಪಟ್ಟಿರುತ್ತಾರೆ. ಸರಕು ಸಾಗಾಣೆ ರೈಲಿನ ಪೈಲೆಟ್ ಹಾಗೂ ಸಹ ಪೈಲೆಟ್ ಮತ್ತು ಪ್ರಯಾಣಿಕ ರೈಲಿನ ಗಾರ್ಡ್ ಕೂಡ ಮೃತ ಪಟ್ಟಿದ್ದಾರೆ. ಹಾಗೂ ಸುಮಾರು ೪೧ ಕ್ಕೂ ಹೆಚ್ಚಿನ ಜನಕ್ಕೆ ಗಾಯಗಳಾಗಿವೆ.

೨೦೧೪ರಲ್ಲಿ ದೇಶಕ್ಕೆ ಬುಲೆಟ್ ರೈಲು ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದು ಇರುವ ರೈಲುಗಳಿಗೆ ಸಿಗ್ನಲ್ ಕೊಡಲು ಇವರಲ್ಲಿ ಕಾರ್ಮಿಕರಿಲ್ಲ. ಕೇಂದ್ರ ಸರ್ಕಾರದವರು ರೈಲಿನ ಚೇರ್ ಮತ್ತು ಶೌಚಾಲಯದ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ತೋರಿಸಿಕೊಂಡು ಜನರಿಗೆ ಮೋಸ ಮಾಡುತ್ತಿದೆ.

ಪದೆ ಪದೆ ರೈಲು ಅಪಘಾತಗಳು ನಡೆಯುತ್ತಿರುವುದರಿಂದ ಇದರ ನೈತಿಕ ಹೊಣೆ ಹೊತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತಕ್ಷಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ-https://suddilive.in/archives/17178

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close