ಸುದ್ದಿಲೈವ್/ಶಿವಮೊಗ್ಗ
ಮಾಜಿ ಸಿಎಂ ಬಿಎಸ್ ವೈಗೆ ಸಂಕಷ್ಟ ಎದುರಾಗಿದೆ. ಲೋಕಸಭಾ ಚುನಾವಣೆಗೂ ಮುನ್ನಾ ದಾಖಲಾಗಿದ್ದ ಈ ಪ್ರಕರಣದಲ್ಲಿ ಬೆಂಗಳೂರಿನ 1 ನೇ ಫಸ್ಟ್ ಟ್ರ್ಯಾಕ್ ಕೋರ್ಟ್ ಜಾಮೀನು ರಹಿತ ಬಂಧನಕ್ಕೆ ಆದೇಶ ಹೊರಡಿಸಿದ ಕಾರಣ ಅವರಿಗೆ ಸಂಕಷ್ಟ ಎದುರಾಗಿದೆ.
ಯಡಿಯೂರಪ್ಪನವರ ವಿರುದ್ಧ ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಎಫ್ಐಆರ್ ದಾಖಲಾಗಿತ್ತು. ಈ ಬಗ್ಗೆ ಸರ್ಕಾರ ಸಿಐಡಿಗೆ ತನಿಖೆಗೆ ನೀಡಿತ್ತು. ಸಿಐಡಿ ಇಂದು ವಿಚಾರಣಗೆ ಬರುವಂತೆ ನೋಟೀಸ್ ನೀಡಿದ್ದರು.
ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿದ್ದ ಯಡಿಯೂರಪ್ಪನವರ ವಿರುದ್ಧ ಸಿಐಡಿ 1 ಫಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ಜಾಮೀನು ರಹಿತ ಬಂಧನಕ್ಕೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯ ಅರ್ಜಿಯನ್ನ ಪುರಸ್ಕರಿಸಿ ಜಾಮೀನು ರಹಿತ ಬಂಧನಕ್ಕೆ ಆದೇಶಿಸಿದೆ.
ಪ್ರಕರಣದಲ್ಲಿ ಯಡಿಯೂರಪ್ಪನವರು ಸಾಕ್ಷಿನಾಶ, ಅನುಚಿತ ವರ್ತನೆಯ ವಿಡಿಯೋದ ಸಾಕ್ಷಿ, ಹಣ ನೀಡಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನದ ಬಗ್ಗೆ ಬಿಎಸ್ ವೈ ಯತ್ನಿಸುವ ಬಗ್ಗೆಯೂ ಸಿಐಡಿ ಸಾಕ್ಷಿಗಳಿರುವುದಾಗಿ ವಾದ ಮಂಡಿಸಿದೆ. ಈ ಎಲ್ಲಾ ವಿಷಯಗಳನ್ನ ಒಳಗೊಂಡಂತೆ ನ್ಯಾಯಾಲಯ ಜಾಮೀನು ರಹಿತ ಬಂಧನಕ್ಕೆ ಆದೇಶಿಸಿದೆ.
ಈ ಬಂಧನದ ಹಿನ್ನೆಲೆಯಲ್ಲಿ ಪೊಲೀಸರು ಯಡಿಯೂರಪ್ಪನವರನ್ನ ಬಂಧಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ನಾಳೆ ಹೈಕೋರ್ಟ್ ನಲ್ಲಿ ಬಿಎಸ್ ವೈ ವಿರುದ್ಧ ದಾಖಲಾದ ಎಫೈಆರ್ ರದ್ದತಿ ಕೋರಿ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ-https://suddilive.in/archives/16843