ಹಬ್ಬಕ್ಕೆ ಗೋಹತ್ಯೆ ತಡೆಯಲು‌ ಹಿಂದೂ ಸಂಘಟನೆಯಿಂದ ಪೊಲೀಸರಿಗೆ ಮನವಿ

ಸುದ್ದಿಲೈವ್/ಶಿವಮೊಗ್ಗ

ಮುಸ್ಲೀಂ ಬಾಹುಳ್ಯವಿರುವ ಕ್ಷೇತ್ರದಲ್ಲಿ ಬಕ್ರೀದ್ ಹಬ್ಬಕ್ಕೆ ಹೆಚ್ಚಿನ‌ ಗೋವುಗಳನ್ನ ತಂದು‌ ಸಾಕಲಾಗುತ್ತಿದ್ದು, ಗೋವುಗಳ ಮಾಲಿಕತ್ವ ಪರವಾನಗಿ ಪರಿಶೀಲಿಸುವಂತೆ ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.

ಪೊಲೀಸರು ಸ್ವಯಂ ಪ್ರೇರಿತರಾಗಿ ಮತ್ತು ಹೆಚ್ಚಾಗಿ ನಮ್ಮ ಹಿಂದೂ ಸಂಘಟನ ಕಾರ್ಯಕರ್ತರು ನೀಡಿದ ಮಾಹಿತಿಯನ್ನು ಆದರಿಸಿ ಗೋ ಹತ್ಯೆ ಮತ್ತು ಅಕ್ರಮ-ಸಾಗಾಟ ವಿಚಾರದಲ್ಲಿ ಹಲವಾರು ಪ್ರಕರಣಗಳನ್ನು ಕಾನೂನಾತ್ಮಕವಾಗಿ ದಾಖಲಿಸಲಾಗಿದೆ.ಇದಕ್ಕೆ ಧನ್ಯವಾದಗಳು ತಿಳಿಸಿದ ಸಂಘಟನೆ ಇಂದು‌ ಪೊಲೀಸ್ ಉಪವಿಭಾಗೀಯ ಉಪಾಧೀಕ್ಷಕರಿಗೆ ಸಂಘಟನೆಯ‌ ಮುಖಂಡ ದೇವರಾಜ್ ಅರಳಹಳ್ಳಿ ನೇತೃತ್ವದಲ್ಲಿ ಮನವಿ ಸಲಗಲಿಸಲಾಗಿದೆ.

ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆಯಿಂದ ಗೋ ಹತ್ಯೆ ವಿಚಾರದಲ್ಲಿ ಉತ್ತಮ ಕಾರ್ಯಾಚರಣೆ ನಡೆಯುತ್ತಿದ್ದು ಕೆಲವು ಸ್ಥಳಗಳಲ್ಲಿ ಗೋ ಹತ್ಯೆ ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದಿದೆ. ಇದೇ ತಿಂಗಳು 17ನೇ ತಾರೀಕು ಬಕ್ರೀದ್ ಹಬ್ಬ ಇದ್ದು ಕಳೆದ ವರ್ಷ ಬಕ್ರೀದ್ ಹಬ್ಬದ ಸಮಯದಲ್ಲಿ ಗೋ ಹತ್ಯೆ ಆಗಿರುವಂತಹ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದವು.

ಅದೇ ರೀತಿ ಈ ವರ್ಷವೂ ಶಿವಮೊಗ್ಗದ ಆಯನೂರು, ಹಾರನಹಳ್ಳಿ, ಚೋರಡಿ, ಹೊಳಲೂರು, ಅಗಸವಳ್ಳಿ, ಹೊನ್ನಾಪುರ, ಕಡೆಕಲ್ಲು, ಸಕ್ರೆಬೈಲು, ರಾಮನಗರ, ಹೊಸೂರು, ಮಲ್ಲಪುರ, ಹೊಸಳ್ಳಿ ಕೂಡ್ಲಿ, ಪಿಳ್ಳಂಗಿರಿ ಮುಂತಾದ ಮುಸ್ಲಿಂ ಬಾಹುಲ್ಯ ಇರುವ ಸ್ಥಳಗಳಲ್ಲಿ ನೂರಾರು ಸಂಖ್ಯೆಯ ಗೋವುಗಳನ್ನು ಬಕ್ರೀದ್ ಹಬ್ಬಕ್ಕೆ ಹತ್ಯೆ ಮಾಡಲೆಂದು ತಂದು ಕಟ್ಟಿರುವ ಬಗ್ಗೆ ಶಂಕೆ ಇದೆ ಎಂದು ಸಂಘಟನೆ ಆಕ್ಷೇಪಿಸಿದೆ.

ಗೋವಿನ ಮಾಲೀಕತ್ವದ ಪರವಾನಗಿಗಳು ಅವರ ಬಳಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ತಾವುಗಳು ವಿಶೇಷವಾಗಿ ಗಮನಹರಿಸಿ ಗೋ ಸಂತತಿಯ ಉಳಿವಿನ ವಿಚಾರವನ್ನು ಗಮನಿಸಿ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳ ಬೇಕಾಗಿ ಸಂಘನೆ ಮನವಿಯಲ್ಲಿ ಆಹ್ರಹಿಸಿದೆ.

ಗೋವುಗಳ ಮಾಲೀಕತ್ವದ ಪರವಾನಗಿ ಇಲ್ಲದೆ ಗೋವುಗಳನ್ನು ಕಟ್ಟಿರುವವರನ್ನು ಗಮನ ಹರಿಸಿ ಕಾನೂನು ಕ್ರಮ ತೆಗೆದುಕೊಂಡು ಪ್ರಕರಣ ದಾಖಲಿಸಿ ಗೋವುಗಳನ್ನು ರಕ್ಷಿಸಬೇಕಾಗಿ ವಿನಂತಿಸುತ್ತೇವೆ. ಮತ್ತು ಕಳೆದ ವರ್ಷ ಜಿಲ್ಲೆಯಲ್ಲಿ ಬಕ್ರೀದ್ ಹಬ್ಬದ ಸಮಯದಲ್ಲಿ ಗೋಬುಗಳ ಹತ್ಯೆ ನಡೆದಿದ್ದು, ಆ ಸಂಬಂಧ ಪ್ರಕರಣಗಳು ದಾಖಲಾಗಿದೆ.

ಈ ವರ್ಷ ಯಾವುದೇ ಪ್ರಕರಣಗಳು ನಡೆಯ ದಂತೆ ದಯವಿಟ್ಟು ವಿಶೇಷ ಕಾಳಜಿ ವಹಿಸಿ ಸಂಪೂರ್ಣ ಗೋ ಹತ್ಯೆ ನಿಲ್ಲಿಸಲು ಮುಂದಾಗ ಬೇಕೆಂದು ಮುಸ್ಲಿಂ ಬಾಹುಲ್ಯ ಇರುವ ಸ್ಥಳಗಳ ಪ್ರಮುಖ ರಸ್ತೆಗಳಲ್ಲೂ ಚೆಕ್ ಪೋಸ್ಟಗಳನ್ನು ನಿರ್ಮಿಸಬೇಕಾಗಿ ಸಂಘನೆ ಆಗ್ರಹಿಸಿದೆ.

ಇದನ್ನೂ ಓದಿ-https://suddilive.in/archives/16683

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close