ಸುದ್ದಿಲೈವ್/ಭದ್ರಾವತಿ
ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆಗೆ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರ ಸ್ವಾಮಿ ಮಾಧ್ಯಮಗಳಿಗೆ ಮಾಹಿತಿ ನೀಡದೆ ಜಾಗಖಾಲಿ ಮಾಡಿದ್ದಾರೆ. ವಿಐಎಸ್ಎಲ್ ಗೆಸ್ಟ್ ಹೌಸ್ ನಲ್ಲಿ ಕಾಯುತ್ತಿದ್ದ ಮಾಧ್ಯಮಗಳಿಗೂ ಮಾತನಾಡದೆ ಹೋಗಿ ಅವಮಾನಿಸಿದ್ದಾರೆ.
ಅಧಿಕಾರಿಗಳೊಂದಿಗಿನ ಮತ್ತು ಕಾರ್ಮಿಕದವರೊಂದಿಗೆ ಸಭೆ ನಡೆಸಿದ ಹೆಚ್ ಡಿಕೆ ಸಭೆಯಲ್ಲಿ ಮಾಧ್ಯಮಗಳನ್ನ ಹೊರಗಿಟ್ಟು ಸಭೆ ನಡೆಸಲಾಗಿತ್ತು. ಹಾಗೆ ಭದ್ರ ಗೆಸ್ಟ್ ಹೌಸ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಲಿದ್ದಾರೆ ಎಂದು ಕರೆದುಕೊಂಡು ಹೋಗಲಾಯಿತು.
ಅಧಿಕಾರಿಗಳ ಸಭೆ ನಡೆಸಿದ ಹೆಚ್ ಡಿಕೆ ಬಂದರೂ ಊಟ ಮುಗಿಸಿ ಸೀದಾ ಎಮ್ಮೆ ಹಟ್ಟಿ ಗ್ರಾಮಕ್ಕೆ ತೆರಳಿದರು. ಆದರೆ ಮಾಧ್ಯಮಗಳೊಂದಿಗೆ ಮಾತನಾಡದ ಸಚಿವರು ಪ್ರೆಸ್ ನವರನ್ನ ಕಾಯಿಸಿ ಅವಮಾನಿಸಿದಂತು ಸತ್ಯ.
Tags:
ರಾಜಕೀಯ ಸುದ್ದಿಗಳು