ಸಂಭ್ರಮಾಚರಣೆಯ ಸಭೆಯಲ್ಲಿ ಗಮನಸೆಳೆದ ಭಾನುಜೀ ಭಾಷಣ?

ಸುದ್ದಿಲೈವ್/ಶಿವಮೊಗ್ಗ

ನೂತನ ಶಾಸಕರಾಗಿ ಆಯ್ಕೆಯಾದ ಡಾ.ಧನಂಜಯ ಸರ್ಜಿ ಅವರ ಗೆಲುವಿನ ಸಂಭ್ರಮಾಚರಣೆಯ ಭಾಷಣದಲ್ಲಿ ಗಮನ ಸೆಳೆದಿದ್ದು ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಎಂಎಲ್ ಸಿ ಭಾನುಪ್ರಕಾಶ್ ಅವರ ಮಾತು.‌

ಇವರ ಭಾಷದಲ್ಲಿ ಪಕ್ಷ ಬಿಟ್ಟು ಹೋದವರ ಬಗ್ಗೆ ಉಲ್ಲೇಖಿಸಿರುವುದು. ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಅವರ ನಿರಾಯಸ ಮತಪಡೆದಿರುವುದು, ಕಾರ್ಯಕರ್ತರಿಗೆ ಕಣ್ಣೀರು ಹಾಕಿಸಬೇಡಿ ಎಂದಿದ್ದು, ಇವುಗಳ ಮಧ್ಯೆ ಭಾಷಣದ ವೇಳೆ ಬ್ಯಾಗ್ ಹೊತ್ತುಕೊಂಡು ಬಂದ ವ್ಯಕ್ತಿಯನ್ನ ವೇದಿಜೆಯ ಮೇಲೆ ಗುರುತಿಸಿ ಮಾತನಾಡಿರುವುದು ಗಮನಸೆಳೆದಿದೆ.

ಭಾನುಪ್ರಕಾಶ್ ಅವರ ಭಾಷಣದ ಮಧ್ಯೆ ಅಪ್ಪಾಜಿ ಎಂದು ಹಿಂಬದಿಯಲ್ಲಿ ವ್ಯಕ್ಯಿಯೋರ್ವ ಬ್ಯಾಗ್ ಹೊತ್ತುಕೊಂಡು ಬಂದು ನಿಂತಿದ್ದ. ಆತ ಬ್ಯಾಗ್ ಹೊತ್ತುಕೊಂಡು ಬಂದಾಗ ಗೆಲುವಿನ ಅಭ್ಯರ್ಥಿ ಡಾ.ಸರ್ಜಿ ಅವರಿಗೆ ಏನೋ ತಂದಿರ ಬೇಕೆಂದು‌ ವೇದಿಜೆಯ ಮೇಲೆ ಏನಪ್ಪ ಅದು ಬ್ಯಾಗು ಎಂದು ಹೇಳಿಯೇ ಬಿಟ್ಟರು.

ಅದಕ್ಕೆ ಅವನು ಅಪ್ಪಾಜಿ ಎಂದು ಬ್ಯಾಗ್ ಹೊತ್ತುಕೊಂಡು ನಿಂತಿದ್ದನು. ಬಾಂಬ್ ಅಲ್ಲ ತಾನೆ ಎಂದು ಭಾನುಜೀ ಕೇಳಿಯೇ ಬಿಟ್ಟರು. ಆತನು ಅದನ್ನ ದೊಪ್ಪ್… ಎಂದು ಹೊತ್ತಾಕಿಬಿಟ್ಟನು. ಆತನ ಸಿಟ್ಟು ಸಡ ಎಲ್ಲಾ ನೋಡಿದ ಕಾರ್ಯಕರ್ತರು ಹೊರಗೆ ಕರೆದುಕೊಂಡು ಬಂದರು. ಈತ ಯಾರು ಏನೂ ಗೊತ್ತಿಲ್ಲದೆ ಭಾನು ಪ್ರಕಾಶ್ ಮಾತನಾಡಿಸಿದ್ದೇ ತಪ್ಪಾದಂತಾಗಿತ್ತು.

ಇದಾದ ನಂತರ ಮುಂದು ವರೆದ ಭಾಷಣದಲ್ಲಿ ಉಡುಪಿ ಪೇಜಾವರ ಶ್ರೀಗಳೆ ಡಾ.ಸರ್ಜಿಗೆ ಆಶೀರ್ವಾದ ಮಾಡಿರುವಾಗ ಆ ಕ್ಷೇತ್ರದ ಮತ್ತೊಬ್ಬರು ಪಕ್ಷ ಬಿಟ್ಟು ಸ್ಪರ್ಧಿಸಿರುವುದು ಆಕ್ಷೇಪಾರ್ಹ ಎಂದ ಭಾನುಜೀ, ನಗೆಯ ಚಟಾಕಿಯನ್ನೂ ಹಾರಿಸಿದ್ದಾರೆ.

ಶಾಸಕ ಚೆನ್ನಿ ಎಸ್ ಎಸ್ ಎಲ್ ಸಿ ಓದಿದ್ದಾರೆ. ಹಾಗಾಗಿ ಕನ್ನಡದಲ್ಲಿ ಹೇಳಿದ್ದಾರೆ. ನಾನು ಇಂಗ್ಲೀಷ್ ನಲ್ಲಿ ಹೇಳುವೆ ಎಂದು ಒಟ್ಟಿಗೆ ಬರುವುದು, ಒಟ್ಟಿಗೆ ಸೇರುವುದು, ಒಟ್ಟಿಗೆ ಕೆಲಸ ಮಾಡುವುದನ್ನ ಈ ಮೊದಲು ಶಾಸಕ ಚೆನ್ನಬಸಪ್ಪ ಹೇಳಿ ಕಾರ್ಯಕರ್ತರ ಕೆಲಸವನ್ನ‌ ಶ್ಲಾಘಿಸಿದ್ದರು. ಇದನ್ನ ಭಾನುಜೀ ಇಂಗ್ಲಿಷ್ ನಲ್ಲಿ ಹೇಳಿ ಸಭೆಯನ‌್ನ ನಗೆಯಲ್ಲಿ ತೇಲಿಸಿದರು.

ಎನ್ ಡಿಎ ಸರ್ಕಾರ ರಚನೆ ಬಗ್ಗೆ, ಮೋದಿ 3.O ಪ್ರಧಾನಿ ಸ್ಥಾನಕ್ಕೆ ಏರುವುದು‌ ಖಚಿತವಾಗಿದೆ. ಆದರೆ ಮೈತ್ರಿಗಳ ಬಗ್ಗೆ ಅನುಮಾನ‌ ವ್ಯಕ್ತವಾಗುತ್ತಿದೆ.‌ ಆದರೆ ಮೆಕಾನಿಸಂ ವಿಚಾರ ಬಂದರೆ ಈ ಗೊಂದಲ ಉಂಟಾಗಬಹುದು. ಇಲ್ಲವಾದರೆ ಯಾವ ಗೊಂದಲವಿಲ್ಲ. ಮೆಕಾನಿಸಂನಲ್ಲಿ ನಾನು ಎಂಬುದು ಉದ್ಭವಿಸಿದಾಗ ಸಮಸ್ಯೆ ಆರಂಭವಾಗುತ್ತದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಏನೂ ಶ್ರಮ ವಹಿಸದೆ 13 ಸಾವಿರ ಮತ ಪಡೆಯುತ್ತಾರೆ ಎಂದರೆ ಬಿಜೆಪಿ ಯಾಮಾರಿದರೆ ಆ‌ ಸ್ಥಾನವನ್ನ‌ಕಾಂಗ್ರೆಸ್ ನೀರಸವಾಗಿ ಪಡೆಯಲಿದೆ. ಇದರ ಬಗ್ಗೆ ಎಚ್ಚರಿಕೆ ಇರಬೇಕು ಎಂಬುದು ಗಮನ ಸೆಳೆದಿದೆ.

ಇವತ್ತು ಪಕ್ಷದ ಅಭ್ಯರ್ಥಿ ಮತ್ತು ಕುಟುಂಬಸ್ಥರ ಕಣ್ಣಲ್ಲಿ ಕಣ್ಣೀರು ತುಂಬಿರುತ್ತದೆ. ಆದರೆ ಅದು ಆನಂದ ಭಾಷ್ಪದ ಕಣ್ಣೀರಾಗಿರುತ್ತದೆ. ಆದರೆ ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಕಣ್ಣೀರು ಹಾಕಿಸದಂತೆ ಎಚ್ಚರದ ಆಡಿರುವುದು ಗಮನಸೆಳೆದಿದೆ.

ಪಕ್ಷ ಬಿಟ್ಟವರ ಬಗ್ಗೆ ಭಾನುಪ್ರಕಾಶ್ ಮಾತನಾಡುವ ವೇಳೆ ಮತ್ತೆ ಯಾರನ್ನೂ ಪಕ್ಷಕ್ಕೆ ಕರೆದುಕೊಳ್ಳಬೇಡಿ ಎಂಬ ಕಾರ್ಯಕರ್ತರೊಬ್ಬರು ಒತ್ತಿ ಹೇಳಿದ್ದು ಉಂಟು. ಆದರೆ ಸಾರಾ ಸಗಟಾಗಿ ಭಾನುಜಿಗೆ ತಿರಸ್ಕರಿಸಲು ಸಾಧ್ಯವಾಗದೆ ಇದ್ದ ಘಟನೆ ಸಹ‌ನಡೆದಿದೆ. ಹೀಗೆ ಹಲವು ಪ್ರಸಂಗಗಳು ಭಾನೂಜಿ ಅವರ ಭಾಷಣದಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ-https://suddilive.in/archives/16453

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close