ಸುದ್ದಿಲೈವ್/ಬೆಂಗಳೂರು
ಬೆಂಗಳೂರಿನ ಸದಾಶಿವ ನಗರದಲ್ಲಿರುವ ಕುಮಾರ್ ಬಂಗಾರಪ್ಪನವರ ಮನೆಗೆ ರಾಜ್ ವಂಶದ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ. ಮನೆಗೆ ನುಗ್ಗಿದ ಸಂಘಟನೆಯವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಸೋಲುಂಡಿದ್ದಾರೆ. ಸೋಲುಕಂಡ ಅಭ್ಯರ್ಥಿ, ಅಭ್ಯರ್ಥಿಯ ಪತಿ ಡಾ.ಶಿವರಾಜ್ ಕುಮಾರ್ ಅವರನ್ನ ಕುಮಾರ್ ಬಂಗಾರಪ್ಪ ಟೀಕಿಸಿದ್ದರು.
ಚುನಾವಣೆ ಸೋತ ತಂಗಿ ಮತ್ತು ಭಾವ ಚಿಂತಿಸುವ ಅಗತ್ಯವಿಲ್ಲ. ಅಕ್ಕ ಸಿನಿಮಾದಲ್ಲಿ ಡಾನ್ ಆಗಿದ್ದಾರೆ. ನಟ ಶಿವರಾಜ್ ಕುಮಾರ್ ಕೆಲಸವಿಲ್ಲವೆಂದು ಚಿಂತಿಸೋದು ಬೇಡ. ನಮ್ಮೂರ ಜಾತ್ರೆಯಲ್ಲಿ ಡ್ಯಾನ್ಸ್ ಮಾಡುವ ಕೆಲಸ ಖಾಲಿ ಇದೆ ಎಂದು ಸಾಮಾಜಿಕ ಜಾಲತಾಣಗಳಾದ ಎಕ್ಸ್ ಖಾತೆ ಮತ್ತು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು.
ಪೋಸ್ಟ್ ಹಾಕಿದ ಬೆನ್ನಲ್ಲೇ ನಾಲ್ಕು ದಿನಗಳ ನಂತರ ಬೆಂಗಳೈರಿನ ಸದಾಶಿವ ನಗರದಲ್ಲಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪನವರ ಮನೆಯ ಮುಂದೆ ರಾಜ್ ವಂಶದ ಅಭಿಮಾನಿಗಳಿಂದ ಪ್ರತಿಭಟನೆ ನಡೆಸಿದ್ದಾರೆ.
ಮನೆ ಒಳಗೆ ನುಗ್ಗಿದವರನ್ನ ಪೊಲೀಸರು ಬಂಧಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಪ್ಲಕಾರ್ಡ್ ಹಿಡಿದು, ಕುಮಾರ್ ಬಂಗಾರಪ್ಪನವರ ವಿರುದ್ಧ ಘೋಷಣೆಯನ್ನ ಅಭಿಮಾನಿಗಳು ಕೂಗುತ್ತಿದ್ದರು.
ಇದನ್ನೂ ಓದಿ-https://suddilive.in/archives/16495