ಸುದ್ದಿಲೈವ್/ಶಿವಮೊಗ್ಗ
ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಶಾಲಾ ಮಕ್ಕಳಿಗೆ ಕಾನೂನಿನ ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಸಹ್ಯಾದ್ರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಜೇಂದ್ರ ನಗರ ಶಿವಮೊಗ್ಗದಲ್ಲಿ ನಡೆಸಿ ಕೊಡಲಾಯಿತು,
ಈ ಸಂದರ್ಭದಲ್ಲಿ ಹೆಚ್ ಆರ್ ಎ ಸಿ ಎಫ್ ನಾ(HRACF) ರಾಜ್ಯ ಉಪಾಧ್ಯಕ್ಷರಾದ ವಿಶ್ವನಾಥ್ ನಾಯಕ್ ರವರು ಮತ್ತು ಹೆಚ್ಆರ್ ಎಸಿ ಎಫ್ ನಾ ಜಿಲ್ಲಾ ಅಧ್ಯಕ್ಷರಾದ ಆದಿತ್ಯ ಅರುಣ್ ಕುಮಾರ್ ರವರು ಹಾಗೂ ಪದಾಧಿಕಾರಿಗಳಾದ, ಸಾಗರ್ , ಪವನ್, ಮಹೇಶ್ ,ಅತಿತ್ ಶ್ರೇಯಸ್ ತೇಲ್ಕರ್, ಮತ್ತು ಶಾಲೆಯ ಪ್ರಾಂಶುಪಾಲರಾದ ಕುಮಾರಸ್ವಾಮಿ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಹಾಗೂ ಹಿರಿಯ ಶಿಕ್ಷಕರಾದ ಗುರುಮೂರ್ತಿ ಗೌಡರು ಮತ್ತು ಶಿಕ್ಷಕ ವೃಂದದವರು ಹಾಗೂ ಶಾಲಾ ಮಕ್ಕಳುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಾನೂನಿನ ಅರಿವನ್ನು ಮೂಡಿಸುವುದರ ಮೂಲಕ ಅತಿಥಿಗಳಾದ ವಿಶ್ವನಾಥ್ ನಾಯಕ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಈ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
ಇದನ್ನೂ ಓದಿ-https://suddilive.in/archives/17721