ಬಕ್ರೀದ್ ಹಬ್ಬದ ಪ್ರಯುಕ್ತ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ

ಸುದ್ದಿಲೈವ್/ಶಿವಮೊಗ್ಗ

ಬಲಿದಾನ ಮತ್ತು ತ್ಯಾಗದ ಪ್ರತೀಕವಾದ ಬಕ್ರೀದ್ ಹಬ್ಬವನ್ನ ಶಿವಮೊಗ್ಗದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ಕುರಾನ್‌ನಲ್ಲಿ ಹೇಳಿದಂತೆ ಅಲ್ಲಾ (ದೇವರು) ಗೆ ವಿಧೇಯತೆಯ ಕ್ರಿಯೆಯನ್ನು ನೆನಪಿಸುತ್ತದೆ.
ದೇವರ ಸೂಚನೆಗಳನ್ನು ಅನುಸರಿಸಿ, ಪ್ರವಾದಿ ಇಬ್ರಾಹಿಂ (ಅಬ್ರಹಾಂ) ತನ್ನ ಪ್ರೀತಿಯ ಮಗನಾದ ಇಸ್ಮಾಯಿಲ್ (ಇಸ್ಮಾಯಿಲ್) ಅನ್ನು ಕೊಲ್ಲಲು ಸಿದ್ಧನಿದ್ದಾನೆ ಎಂದು ತೋರಿಸುತ್ತಾನೆ. ಇಬ್ರಾಹಿಂ ತ್ಯಾಗ ಮಾಡುವ ಮೊದಲು, ದೇವರು ಇಸ್ಮಾಯಿಲ್ ಅನ್ನು ಅವನ ಬದಲಾಗಿ ಕೊಲ್ಲಲು ಮೇಕೆಯೊಂದಿಗೆ ವಿನಿಮಯ ಮಾಡಿಕೊಳ್ಳುತ್ತಾನೆ. ಇದು ಹಬ್ಬದ ಮೂಲವಾಗಿದೆ.

ಪ್ರಾರ್ಥನೆಯನ್ನ ಶಿವಮೊಗ್ಗ ಜಿಲ್ಲೆಯಲ್ಲಿ 213 ಕಡೆ ಸಲ್ಲಿಸಲಾಯಿತು. ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಮೈದಾನವೂ ಸೇರಿದಂತೆ 13 ಕಡೆ ಪ್ರಾರ್ಥನೆ ಸಲ್ಲಿಸಲಾಗಿದೆ. ಈದ್ಗಾ ಮೈದಾನದಲ್ಲಿ ಸುಮಾರು 5-6 ಸಾವಿರ ಜನ ಏಕಕಾಲದಲ್ಲಿ ಪ್ರಾರ್ಧನೆ ಸಲ್ಲಿಸಿ ಹಬ್ಬದ ಶುಭಾಶಯಗಳನ್ನ ಸಲ್ಲಿಸಲಾಯಿತು.

ಬೆಳಿಗ್ಗೆ 6-30 ರಿಂದ ವಿವಿಧ ಪ್ರಾರ್ಥನ ಸ್ಥಳಗಳಲ್ಲಿ ಪ್ರಾರ್ಥನೆಗಳು ಆರಂಭವಾಗಿದೆ. ವಿವಿಧ ಸಮಯದಲ್ಲಿ ವಿವಿಧ ಸ್ಥಳದಲ್ಲಿ ಪ್ರಾರ್ಥನೆಗಳನ್ನ ಮುಸ್ಲೀಂ ಬಾಂಧವರು ಸಲ್ಲಿಸಿದರು.

ಇದನ್ನೂ ಓದಿ-https://suddilive.in/archives/17044

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close