ಸುದ್ದಿಲೈವ್/ಶಿವಮೊಗ್ಗ
ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದು ಬೀಗಿದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರ ಸಂಭ್ರಮಾಚರಣೆ ಇಂದು ಅವರ ತವರು ಕ್ಷೇತ್ರ ಶಿವಮೊಗ್ಗದಲ್ಲಿ ನಡೆದಿದೆ.
ಡೋಳ್ಳು, ಕುಣಿತ, ಹುಲಿ ವೇಷ ಹಾಗೂ ಜಾನಪದ ಕಲಾತಂಡದ ವತಿಯಿಂದ ಹೊರಟ ಮೆರವಣಿಗೆ ಬೆಕ್ಕಿನ ಕಲ್ಮಠದಿಂದ ಬಿಜೆಪಿ ಕಚೇರಿಯವರೆಗೆ ಬಂದಿದೆ. ಈ ವೇಳೆ ಪಟಾಕಿ ಸಿಡಿಸಲಾಗಿದೆ. ಬಿಜೆಪಿ ಕಚೇರಿಯಲ್ಲಿ ಕಿಕ್ಕಿರಿದ ಕಾರ್ಯಕರ್ತರ ನಡುವೆ ಸಂಭ್ರಮಾಚರಣೆ ನಡೆದಿದೆ. ಕಚೇರಿಯಲ್ಲಿ ಕಾರ್ಯಕರ್ತರು ನಿಂತು ನೂತನ ಎಂಎಲ್ ಸಿ ಡಾ.ಸರ್ಜಿ ಅವರ ಸನ್ಮಾನ ಕಾರ್ಯಕ್ರಮವನ್ನ ನೋಡುವಂತಾಗಿದೆ.
ಈ ವೇಳೆ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕ ಚೆನ್ನಬಸಪ್ಪ, ಎಂಎಲ್ ಸಿ ಡಿ.ಎಸ್ ಅರುಣ್, ಹಿರಿಯ ಮುಖಂಡ ಭಾನುಪ್ರಕಾಶ್, ಆರ್ ಕೆ ಸಿದ್ದರಾಮಣ್ಣ, ಕೆ.ಜಿ ಕುಮಾರ ಸ್ವಾಮಿ, ಜೆಡಿಎಸ್ ನ ಸತೀಶ್ ಮೊದಲಾದವರು ಉಪಸ್ಥಿತರಿದ್ದರು.
ಟಿ.ಡಿ.ಮೇಘರಾಜ್ ಮಾತು…
ಕಚೇರಿಯಲ್ಲಿ ನಡೆದ ಸನ್ಮಾನ ಸಭೆಯಲ್ಲಿ ಮಾತನಾಡಿದ ಟಿ.ಡಿ ಮೇಘರಾಜ್ ಇದೊಂದು ಕಾಲಘಟ್ಟದ ಚುನಾವಣೆಯಾಗಿತ್ತು. ವ್ಯಕ್ತಿನೋ ಪಕ್ಷನೋ ಎಂಬ ಚರ್ಚೆಗೆ ಈ ಚುನಾವಣೆ ನಡೆದಿತ್ತು.ಆದರೆ ಮತದಾರರು ಸಂಘಟನೆಗೆ ಮನ್ನಣೆ ನೀಡಿದ್ದಾರೆ. ಹಾಗಾಗಿ ಬಿಜೆಪಿ ಕಾರ್ಯಕರ್ತರೇ ನಿಜವಾದ ದೇಶಭಕ್ತರುಎಂದರು.
ಮಾಜಿ ಡಿಸಿಎಂ ಈಶ್ವರಪ್ಪನವರ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಮೇಘರಾಜ್ ಚುನಾವಣೆಯಲ್ಲಿ ಸ್ಪಷ್ಟವಾದ ದೇಶಭಕ್ತರು ಯಾರು ಎಂದು ಕಾರ್ಯಕರ್ತರು ತೋರಿಸಿದ್ದಾರೆ. ಯಾಂತ್ರಿಕವಾಗಿ ಮತ್ತು ತಾಂತ್ರಿಕವಾಗಿ ಗೆಲ್ಲುವ ಚುನಾವಣೆ ಇದಲ್ಲ. ಕರ ಪತ್ರ, ವಿಳಾಸಕ್ಕೆ ಪತ್ರ ಬರೆಯೋದರ ಮೇಲೆ ಅಥವಾ ಅತಿಥಿ ಉಪನ್ಯಾಸಕರ ಬಗ್ಗೆ ಮಾತನಾಡುವ ಚುನಾವಣೆ ನಡೆದಿದ್ದರೆ ಎದುರಾಳಿಗಳೆ ಗೆಲ್ಲುತ್ತಿದ್ದರು ಎಂದು ಹೇಳಿದರು.
ನೈರುತ್ಯ ಪದವೀಧರ ಕ್ಷೇತ್ರದಲ್ಲಿ ತಿರಸ್ಕೃತ ಮತಗಳು 5115. ಈ ಮತಗಳೆಲ್ಲವೂ ಬಿಜೆಪಿಗೆ ಬಂದಿವೆ. ಆದರೆ ತಿರಸ್ಕೃತಗೊಂಡಿವೆ. ಇದನ್ನೂ ಸೇರಿಸಿದರೆ 42 ಸಾವಿರ ಮತಗಳು ಡಾ.ಸರ್ಜಿಗೆ ಬಿದ್ದಂತಾಗುತ್ತವೆ. ಶಿವಮೊಗ್ಗ ನಗರದಲ್ಲಿ 10 ಸಾವಿರಕ್ಕೂ ಹೆಚ್ಚುಮತಗಳಲ್ಲಿ ಡಾ.ಸರ್ಜಿಗೆ ಶೇ80 ರಷ್ಟು ಮತ ಬಿದ್ದಿದೆ. ಅದರ ಹಿಂದೆ ಶಾಸಕ ಚೆನ್ನಿ, ಎಂಎಲ್ ಸಿ ಡಿ.ಎಸ್ ಅರುಣ್ ನಡೆಸಿದ್ದಾರೆ ಎಂದರು.
ಡಾ.ಸರ್ಜಿ ಮಾತು
ನೂತನ ಶಾಸಕರಾದ ಡಾ.ಸರ್ಜಿ ಮಾತನಾಡಿ, ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬುದನ್ನ ಬಿಜೆಪಿ ಸಾರುತ್ತದೆ. ಇದನ್ನ ವಿಧಾನ ಸಭೆ, ಲೋಕಸಭೆ ಮತ್ತು ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನಡೆದಿದೆ ಎಂದರು.
5½ ಜಿಲ್ಲೆ 30 ವಿಧಾನ ಸಭೆ ಕ್ಷೇತ್ರ ಇದರಲ್ಲಿ ಬಿಜೆಪಿ ಗೆದ್ದಿದ್ದು 14 ವಿಧಾನ ಸಭ ಕ್ಷೇತ್ರವನ್ನ ಮತ್ತು ಒಂದು ಕ್ಷೇತ್ರ ಜೆಡಿಎಸ್ ಗೆದ್ದಿದೆ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ . ಈ ಕ್ಷೇತ್ರದ ಮತದಾರರನ್ನ ಸಂಪರ್ಕಿಸಲು ಕಡಿನೆ ಅವಧಿ ಇದೆ. ಇದರ ಜೊತೆ ಅಪಪ್ರಚಾರಗಳು, ಸವಾಲುಗಳು ಎದುರಾಗಿದ್ದವು. ಇವುಗಳನ್ನ ಮೀರಿ ಜಯಭೇರಿ ಬಾರಿಸಿದ್ದು ಕಾರ್ಯಕರ್ತರು. ಅದರಲ್ಲಿ ಘಟನಾಯಕನ ವ್ಯವಸ್ಥೆಯಿಂದ ಗೆಲ್ಲುವ ಸಾಧ್ಯತೆಯನ್ನ ಹೆಚ್ಚಿಸಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿಗಿಂತ ನನ್ನಮತದ ಲೀಡು 26 ಸಾವಿರ ಮತಗಳಾಗಿದ್ದವು. ಈ ಜಯ ಕಾರ್ಯಕರ್ತರದ್ದು ಎಂದರು.
ಇದನ್ನೂ ಓದಿ-https://suddilive.in/archives/16446