ಮೊಬೈಲ್ ಮಾರಿಸಿಕೊಟ್ಟಿಲ್ಲ ಎಂದು ಹಲ್ಲೆ, ಹಲ್ಲೆ ಮಾಡಿದವನೆ ಆಸ್ಪತ್ರೆಗೆ ದಾಖಲು?!

ಸುದ್ದಿಲೈವ್/ಶಿವಮೊಗ್ಗ

ಮೊಬೈಲ್ ಮಾರಿಸಿಕೊಡಲ್ಲ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆದಿದೆ. ಈತ ನಮ್ಮ ಏರಿಯಾ ಹುಡುಗ ಹೊಡಿಯ ಬೇಡ ಎಂದು ಹೇಳಿದರೂ ಥಳಿಸಿ ಮಧ್ಯ ರಾತ್ರಿಯ ವೇಳೆ ಆತನ ಮೇಲೆ ಕಲ್ಲು ಎತ್ತಾಕಲು ಹೋಗಿ ಆತನ ಕಟ್ಟಡದಿಂದ ಬಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ವಿನಾಯಕ ನಗರದಲ್ಲಿ ಫೈಂಟಿಂಗ್ ಕೆಲಸ ಮಾಡಿಕೊಂಡಿರುವ ಲೋಕೇಶ್ ಈಗ್ಗೆ 05 ತಿಂಗಳ ಹಿಂದೆ ತಮ್ಮ ಏರಿಯಾದ ವಾಸಿಯಾದ ಆಸೀಪ್ ಎಂಬುವನೊಂದಿಗೆ ಗಲಾಟೆ ಮಾಡಿದ್ದನು. ಅಂದಿನಿಂದ ಲೋಕೇಶ್ ಮೇಲೆ ಆಸೀಫ್ ದ್ವೇಷ ಸಾಧನೆ ಮಾಡಿಕೊಂಡು ಬಂದಿದ್ದಾನೆ.

ಜೂ.2 ರಂದು ಮದ್ಯಾಹ್ನ ಸುಮಾರು 2-30 ಗಂಟೆಯ ಸಮಯದಲ್ಲಿ ಲೋಕೇಶ್ ಮನೆಯಲ್ಲಿದ್ದಾಗ ಸುಹೇಲ್ ಎಂಬುವನು ಆಸೀಪ್ ನನ್ನ ಕರೆದುಕೊಂಡು ಬಂದು ಎರಡು ಮೊಬೈಲ್ ತಂದು ಕೊಡುತ್ತೇನೆ ಆವುಗಳನ್ನು ಯಾರಿಗಾದರು ಮಾರಿಸಿ ಕೊಡು ಅಂತ ಹೇಳಿದ್ದಾರೆ.‌

ಅದಕ್ಕೆ ಲೋಕೇಶ್ ಈ ಕೆಲಸ ನಾನು ಮಾಡುವುದಿಲ್ಲ ಅಂತ ಹೇಳಿ ಕಳುಹಿಸಿದ್ದಾನೆ. ನಿನ್ನೆ ಸಂಜೆ 4-30 ಗಂಟೆಗೆ ಆಸೀಪ್ ಹಾಗೂ ಸುಹೇಲ್ ಲೋಕೇಶ್ ಮನೆಯ ಹತ್ತಿರ ಬಂದು ಆಸೀಫ್ ನಿನ್ನ ಹತ್ತಿರ ಸ್ವಲ್ಪ ಮಾತನಾಡಬೇಕು ಬಾ ಅಂತ ಕರೆದಿದ್ದಾನೆ. ಆಗ ಲೋಕೇಶ್ ಕೊಟ್ರೇಶ್ವರ ಆಸ್ಪತ್ರೆಯ ಹತ್ತಿರ ನೆಡೆದುಕೊಂಡು ಹೋಗುತ್ತಿರುವಾಗ ಆಸೀಪ್ ನು ಅವ್ಯಚ್ಯಶಬ್ದಗಳಿಂದ ಬೈದು ಮೊಬೈಲ್ ಮಾರಿಸಿಕೊಡು ಅಂದರೆ ಆಗಲ್ಲ ಅಂತ ಹೇಳುತ್ತಿಯಾ ನಿನಗೆ ಎಷ್ಟು ಗಾಂಚಲಿನೋ ಎಂದು ಹೇಳಿದ್ದಾನೆ.

ಲೋಕೇಶ್ ಮೊಬೈಲ್ ಗಳನ್ನು ಮಾರಿಸಿಕೊಡುವುದಿಲ್ಲ ಅಂತ ಹೇಳಿ ವಾಪಾಸ್ ಮನೆಯ ಕಡೆಗೆ ಬರುವಾಗ ಸಂಜೆ 5-00 ಗಂಟೆಗೆ ಅಡ್ಡಗಟ್ಟಿ ನಾನು ಕೊಡುವ ಮೊಬೈಲ್ ಗಳನ್ನು ಮಾರಿಸಿ ಕೊಡು ಇಲ್ಲ ಅಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಕೂಗಾಡುತ್ತ ಕೊರಳ ಪಟ್ಟಿ ಹಿಡಿದು ಎಳೆದಾಡಿ ಕೈಗಳಿಂದ ಹೊಡೆದಿದ್ದಾನೆ.

ಈ ವೇಳೆ ಸುಹೇಲ್ ಲೋಕೇಶ್ ನಮ್ಮ ಏರಿಯಾದ ಹುಡುಗ ಹೊಡೆಯಬೇಡ ಅಂತ ಹೇಳಿದರೂ ಕೈಗಳಿಂದ ಹೊಡೆದಿದ್ದಾನೆ. ಅಷ್ಟರಲ್ಲಿ ಏರಿಯಾದ ಜನರು ಬಂದು ಗಲಾಟೆ ಬಿಡಿಸಿದ್ದಾರೆ. ಆಸೀಪ್ ನು ಲೋಕೇಶ್ ಗೆ ಬೈದು ಬೆದರಿಕೆ ಹಾಕಿರುವುದು ದೂರು ದಾಖಲಾಗಿದೆ.

ಆದರೆ ರಾತ್ರಿಯ ವೇಳೆ ಲೋಕೇಶ್ ಮನೆಯ ಮೇಲೆ ಕಲ್ಲು ಎತ್ತಿಹಾಕಲು ಹೋಗಿ ಆತನೇ ಬಿದ್ದು ಬೆನ್ನು ಮೂಳೆ ಮತ್ತು ಕಾಲು ಮುರಿದಿರುವುದು ತಿಳಿದು ಬಂದಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಲಾಗುತ್ತಿದೆ. ಕುಡಿದ ನಶೆಯಲ್ಲಿ ಈ ಘಟನೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ-https://suddilive.in/archives/16183

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close