ಸುದ್ದಿಲೈವ್/ಶಿವಮೊಗ್ಗ
ಕೇಸಿಗಾಗಿ ಕೋರ್ಟ್ ಗೆ ಬಂದ ವೇಳೆ ಆವರಣದಲ್ಲಿ ಶಿಕ್ಷಕಿ ಹಸೀನ ಪರ್ವೀನ್ ಮೇಲೆ ಪತಿ ಸಯ್ಯದ್ ಪರ್ವೇಜ್ ಹಲ್ಲೆ ನಡೆದಿದ್ದು ಜಯನಗರ ಠಾಣೆಯಲ್ಲಿ ನನ್ನ ವಿರುದ್ಧವೇ ದೂರು ದಾಖಲಾಗಿದೆ. ಈ ಬಗ್ಗೆ ನ್ಯಾಯಕೊಡಿಸಬೇಕೆಂದು ಹಸೀನಾ ಪರ್ವೀನ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
2001 ರಲ್ಲಿ ಸಯ್ಯದ್ ಪರ್ವೇಜ್ ಅವರನ್ನ ಹಸೀನಾ ಪರ್ವೀನ್ ಕೆ ಅವರು ಮದುವೆಯಾಗಿದ್ದು, ಮೊನ್ನೆ ಮೇ.28 ರಲ್ಲಿ ಶಿವಮೊಗ್ಗದ ನ್ಯಾಯಾಲಯದಲ್ಲಿ ಕೇಸ್ ಇದ್ದ ಕಾರಣ ಬಂದಾಗ ಪತಿ ಸಯ್ಯದ್ ಪರ್ವೇಜ್ ಬಂದಿದ್ದರು. ಆ ವೇಳೆ ಕೇಸ್ ಮುಗಿದು ಕೋರ್ಟ್ ಹೊರಗಡೆ ಹೋದಾಗ ಪತಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಗಾಬರಿಯಾಗಿ ಮೇಜಿಸ್ಟ್ರೇಟ್ ಎದುರು ಹೋಗಿ ಹೇಳಿಕೊಂಡಿರುವೆ.
ಆಗ ಪೊಲೀಸರಿಗೆ ಕರೆಯಿಸಿ ಆತನನ್ನ ತಪಾಸಣೆ ನಡೆಸಿದಾಗ ಚಾಕು ಪತ್ತೆಯಾಗಿದೆ. ನಾನು ಆಸ್ಪತ್ರೆಗೆ ದಾಖಲಾಗಿದ್ದೆ. ಆದರೆ ಜಯನಗರ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧವೇ ದೂರು ದಾಖಲಾಗಿದೆ.
ನಂತರ ಆಸ್ಪತ್ರೆಗೆ ದಾಖಲಾದೆವು. ಚಿಕಿತ್ಸೆ ಪಡೆಯಲಾಯಿತು. ಹೆಚ್ ಎಂ ಆರ್ ಆದರೂ ಪೊಲೀಸರು ಪತಿಯ ವಿರುದ್ಧ 307 ಪ್ರಕರಣ ದಾಖಲಾಗಿಲ್ಲ. ನನ್ನ ವಿರುದ್ಧವೇ ಎಫ್ಐಆರ್ ಆಗಿದೆ. ನಾನು ಕೊಲೆ ಮಾಡುವ ಪ್ರಯತ್ನ ನಡೆದಿದೆ ಎಂದು ಮಾಧ್ಯಮಗಳಲ್ಲಿ ದಾಖಲಾಗಿದೆ.
ಸುಳ್ಳು ಪ್ರಕರಣ ದಾಖಲಾಗಿದೆ. ಸಯ್ಯದ್ ಪರ್ವೆಜ್ ವಿರುದ್ಧ ದೂರು ದಾಖಲಾಗಬೇಕು. ಬಂಧಿಸಬೇಕು. ಇಲ್ಲವಾದಲ್ಲಿ ನಾವು ಆತನಿಂದ ಜೀವಬೆದರಿಕೆಯಿದೆ. ಈ ಹಿಂದೆ ನನ್ನ ಕೊಲೆಗೆ ಪತಿಯೇ ಸುಫಾರಿ ಕೊಟ್ಟಿರುವ ಉದಾಹರಣೆ ಇದೆ. ಶಿಕ್ಷಣ ಇಲಾಖೆಯಲ್ಲಿಯೂ ಪರ್ವೇಜ್ ವಿರುದ್ಧ ದೂರಿದ್ದರು ಕ್ರಮ ಜರುಗಿಲ್ಲ ಎಂದು ದೂರಿದರು.
ಮಕ್ಕಳು ತಂದೆಗೆ ಮಾತನಾಡಿಸಲು ಹೋದರೆ ಒಡೆದು ಬಡಿದು ಮಾಡಿದ್ದಾರೆ. ಹೈಕೋರ್ಟ್ ನಲ್ಲಿ ವಿಚ್ಚೇದನ ವಿಚಾರಣೆ ಇದ್ದರೂ ಮತ್ತೊಂದು ಮಹಿಳೆಯರೊಂದಿಗೆ ಇದ್ದಾರೆ.ಮಹಿಳೆಯ ಮೊದಲನೆ ಪತಿಯ ಜೊತೆ ವಿಚ್ಚೇದನೆ ಪಡೆದಿಲ್ಲ ಇಬ್ವರೂ ಅನೈತಿಕ ಸಂಬಂಧ ಹೊಂದಿರುವುದಾಗಿ ದೂರಿದರು.
ಇದನ್ನೂ ಓದಿ-https://suddilive.in/archives/16119