ಸುದ್ದಿಲೈವ್/ಶಿವಮೊಗ್ಗ
ಗೋಪಾಲಗೌಡ ಬಡಾವಣೆ ಮಹಾನಗರ ಪಾಲಿಕೆಯ ಹಾಗೂ ಖಾಸಗಿ ನಿವೇಶನಗಳ
ಅತಿಕ್ರಮಣ ತೆರವುಗೊಳಿಸಲು ಒತ್ತಾಹಿಸಿ ಗೋಪಾಲಗೌಡ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಶಿವಮೊಗ್ಗದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯ 17 ನೇ ವಾರ್ಡ ಗೋಪಾಲಗೌಡ ಬಡಾವಣೆಯ ಭಾರ್ಗವಿ ಪೆಟ್ರೋಲ್ ಬಂಕ್ ಹಿಂಬಭಾಗ ಮಹಾನಗರ ಪಾಲಿಕೆ ಸೇರಿದ ಖಾಲಿ ನಿವೇಶನಗಳಿವೆ. ಇದಕ್ಕೆ ಹೊಂದಿಕೊಂಡಂತೆ ಈ ಹಿಂದೆ ಪಾಲಿಕೆ ಕಸ ವಿಲೇವಾರಿ ಘಟಕ ತೆರೆದಿದ್ದು. ಉಳಿದ ನಿವೇಶನದ ಜಾಗಕ್ಕೆ ಯಾವುದೇ ತಡೆಗೋಡೆ ನಿರ್ಮಿಸಿರುವುದಿಲ್ಲ.
ಇದನ್ನು ಗಮನಿಸಿದ ಮಾಜಿ ಜನಪ್ರತಿನಿಧಿಗಳು ಹಾಗೂ ಪ್ರಭಾವಿ ಮುಖಂಡರು ಹಾಲಿ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ ಮಹಾನಗರ ಪಾಲಿಕೆಯ ಆಸ್ಥಿ ಕಬಳಿಸಲು ಹೊಂಚು ಹಾಕಿದ್ದು, ಪಾಲಿಕೆಗೆ ಸೇರಿದ ಹಾಗೂ ಕೆಲವು ಖಾಸಗಿ ವ್ಯಕ್ತಿಗಳ ಖಾತೆ ಇರುವ ನಿವೇಶನಗಳಿಗೆ ಅಕ್ರಮವಾಗಿ ಬೇಲಿ ನಿರ್ಮಿಸಿಕೊಳ್ಳಲು ಯತ್ನಿಸಿರುತ್ತಾರೆ.
ಇದನ್ನು ಗಮನಿಸಿ ಸಾರ್ವಜನಿಕರು ಹಾಗೂ ಖಾಸಗಿ ನಿವೇಶನದ ಮಾಲಿಕರುಗಳು ಆಕ್ಷೇಪ ವ್ಯಕ್ತಪಡಿಸಿ ಮಾನ್ಯ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಈ ಮನವಿ ಮೇರೆಗೆ ಮಾನ್ಯ ರಕ್ಷಣಾಧಿಕಾರಿಗಳು ಸಂಬಂಧ ಪಟ್ಟ ಅಧಿಕಾರಿಗಳಿಗೆ ಅಕ್ರಮವಾಗಿ ಖಾಸಗಿ ನಿವೇಶನಗಳಿಗೆ ಬೇಲಿ ನಿರ್ಮಿಸಿರುವುದನ್ನು ತೆರವುಗೊಳಿಸಲಾಗಿದೆ,
ಉಳಿದ ಮಹಾನಗರ ಪಾಲಿಕೆಗೆ ಸೇರಿದ ಜಾಗದ ಒತ್ತುವರಿ ಇನ್ನೂ ತೆರವುಗೊಳಿಸಿರುವುದಿಲ್ಲ. ಆದ್ದರಿಂದ ತಾವುಗಳು ಖುದ್ದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಕ್ರಮವಾಗಿ ಮಹಾನಗರ ಪಾಲಿಕೆಯ ಅಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಿರುವ ಭೂ – ಕಬಳಿಕೆದಾರರ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಾಗಿ ಸಂಘ ಮನವಿಯಲ್ಲಿ ಆಗ್ರಹಿಸಿದೆ.
ಖಾಲಿ ಜಾಗದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಪಾರ್ಕ್/ ಉದ್ಯಾನವನ ಅಥವ ಕ್ರೀಡಾಂಗಣ ನಿರ್ಮಿಸಿ ಸ್ಥಳಿಯ ನಿವಾಸಿಗಳಿಗೆ ಅನುಕೂಲವಾಗುವಂತೆ ಬಹುದಿನದ ಬೇಡಿಕೆಗೆ ಸಹಕರಿಸಬೇಕಾಗಿ ಡಿಸಿಗೆ ಮನವಿ ಸಲ್ಲಿಸಲಾಗಿದೆ.
ಮನವಿ ಸಲ್ಲಿಸುವ ವೇಳೆ ಗೋಪಾಲಗೌಡ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ,
ಜಿ.ಡಿ ಮಂಜುನಾಥ್, ಟಿ.ಡಿ. ಗಿತೇಂದ್ರ ಗೌಡ, ಆರ್ ರಾಜಶೇಕರ್, ಬಿ.ಆರ್. ರವಿ, ಬಿ. ರುದ್ರಪ್ಪ, ಈ ಟಿ ಕಿರಣ್ ಕುಮಾರ್. ನಾಗೇಶ್, ಕೆ.ಪಿ ಸುಬ್ಬಣ್ಣ. ಎಂ ಬಿ ರವಿಕುಮಾರ್, ಪ್ರಜ್ವಲ್, ಸತೀಶ್ ಚಂದ್ರ ಅಜಯ್ ಜಿ.ಎಸ್ ಶಿವಕುಮಾರ್, ಹೆಚ್. ಬಸವರಾಜ್. ಎನ್.ಆರ್ ಮುರುಳಿ, ಸುಧಾಕರ್ ಶೆಟ್ಟಿ, ಅರವಿಂದ್ ಎ ಪಿ ಜಯಣ್ಣ ಶಿವಾನಂದ್ ಭಾಗಿಯಾಗಿದ್ದರು.
ಇದನ್ನೂ ಓದಿ-https://suddilive.in/archives/17834