ಯಡಿಯೂರಪ್ಪನವರನ್ನೇ ಗೆಲ್ಲಿಸಿಕೊಂಡು ಬಂದಂತಹವರಿಗೆ ತಂಗಿಯನ್ನ ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ-ಭಾನುಪ್ರಕಾಶ್

ಸುದ್ದಿಲೈವ್/ಶಿವಮೊಗ್ಗ

ರಾಷ್ಟ್ರೀಯತೆ, ಹಿಂದುತ್ವ ಮತ್ತು ಅಭಿವೃದ್ಅದಿಯ ಹೆಸರಿಲ್ಲಿ ಚುನಾವಣೆಯನ್ನ ಎದುರಿಸಿ ಶಿವಮೊಗ್ಗ ಲೋಕಸಭೆ ಮತ್ತು ಎಂಎಲ್ ಸಿ ಚುನಾವಣೆಯಲ್ಲಿ ಗೆಲ್ಲಲಾಯಿತು ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು.

ಇಂದು ಸಂಜೆ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ನೂತನ ಎಂಎಲ್ ಸಿ ಯಾಗಿ ಚುನಾಯಿತರಾದ ಡಾ.ಧನಂಜಯ ಸರ್ಜಿ, ಭೋಜೇಗೌಡ, ಸಂಸದರಾಗಿ ಆಯ್ಕೆಯಾದ ರಾಘವೇಂದ್ರರಿಗೆ ಅಭಿನಂದನೆ ಮತ್ತು ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು.

ರಾಂಂದಿರ ಕಟ್ಟುತ್ತೀವಿ ಎಂದಿದ್ವಿ, ಈಡೇರಿಸಿದ್ವಿ, ಬಲಿದಾನಗಳು ನಡೆದು ನಂತರ ರಾಮ ಮಂದಿರ ಕಟ್ಟುದ್ವಿ, ಶಿವಮೊಗ್ಗದಲ್ಲಿ ಅಭಿವೃದ್ಧಿ ಮಾಡಲಾಯಿತು. ಪರಿಣಾಮವಾಗಿ ಡಾ.ಸರ್ಜಿ, ಮೈತ್ರಿ ಅಭ್ಯರ್ಥಿ ಭೋಜೇಗೌಡ ಹಾಗೂ ಸಂಸದರನ್ನ ಗೆಲ್ಲಿಸಿಕೊಳ್ಳಲಾಯಿತು ಎಂದರು.

ಭಾನುಪ್ರಕಾಶ್ ಮಾತು

ಬಿಜೆಪಿಯ ಹಿರಿಯ ಮುಖಂಡ ಭಾನುಪ್ರಕಾಶ್ ಮಾತನಾಡಿ, ವ್ಯಕ್ತಿನೋ ಅಥವಾ‌ಪಕ್ಷನೋ ಎಂಬುದರ ಬಗ್ಗೆ ಚುನಾವಣೆ ನಡೆದಿದೆ. ಎಂಎಲ್ ಸಿ ಚುನಾವಣೆಯಲ್ಪಿ ಪಕ್ಷ ಸೋಲದಂತೆ ನೋಡಿಕೊಂಡ ಕಾರ್ಯಕರ್ತರಿಗೆ ಧನ್ಯವಾದಗಳು. ಚುನಾವಣೆಯಲ್ಲಿ ಅಹಂಕಾರದಲ್ಲಿ ಇದ್ದವರು ಗೆದ್ದರೋ ಸಂಯಮದಿಂದ ಇದ್ದವರ ಗೆಲವಾಯಿತೋ ತೀರ್ಮಾನವಾಯಿತು.

ಯಡಿಯೂರಪ್ಪನವರನ್ನ ಗೆಲ್ಲಿಸಿದವರು ನಾನು‌ಎಂದವರಿಗೆ ತಂಗಿಯನ್ನ ಗೆಲ್ಲಿಸಿಕೊಳ್ಳಲಾಗಿಲ್ಲ ಎಂದು ಸಚಿವ ಮಧು ಬಂಗಾರಪ್ಪನವರ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

3 ಲಕ್ಷದ 30 ಸಾವಿರ ಜನ ಈ ಬಾರಿಯ ಲೋಕಸಭ ಚುನಾವಣೆಯಲ್ಲಿ ಮತಹಾಕಿಲ್ಲ ಅವರು ಯಾರ ಪರ ಇದ್ದಾರೆ ಗೊತ್ತಾಗಿಲ್ಲ. ಕಾರ್ಯಕರ್ತರು ಸಂಭ್ರಮ ಪಡುವ ವಿಷಯವೇ ಆದರೆ ಈ ಮತಗಳು ಎಲ್ಲಿ ಹೋದವು. ಇವರನ್ನ ಬಿಜೆಪಿಗೆ ಮತಹಾಕುವಂತೆ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

ನಮಗೆ ಮೈತ್ರಿಯೊಂದಿಗೆ ಯಶಸ್ಸು ದೊರೆತಿದೆ. ಈ ಹಿಂದೆ ನಾವು ಪರಸ್ಪರ ಕಿತ್ತಾಡಿಕೊಂಡಿದ್ದು ಹೌದು. ಆದರೆ ನಾವು ಯಾವತ್ತೂ ಡೈವೋರ್ಸ್ ಕೊಟ್ಟಿರಲಿಲ್ಲ. ಈ ಬಾರಿ ಜನ ಮೈತ್ರಿಗೆ ಆಶೀರ್ವಾದ ನೀಡಿದ್ದಾರೆ. ಮುಂದಿನ ಐದು ವರ್ಷ ಚೆನ್ನಾಗಿ ಆಡಳಿತ ನೀಡೋಣ ಎಂದರು.

ಡಾ.ಸರ್ಜಿ ಮಾತು

ನೂತನ ಶಾಸಕರಾಗಿ ಆಯ್ಕೆಯಾದ ಡಾ.ಧನಂಜಯ್ ಸರ್ಜಿ ಮಾತನಾಡಿ, ಕಾಂಗ್ರೆಸ್ ಪೊಳ್ಳು ಭರವಸೆ ನೀಡಿ ಅಧಿಕಾರ ಹಿಡಿದಿದ್ದಾರೆ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವ, ನಾಲ್ಕು ಮನೆಗಳ ಸದಸ್ಯರಾದವರು ಸಂಸದರ‌ಮೇಲೆ ಆರೋಪಿಸಿದರು. ‌ಆದರೆ ಸಂಸದರು ಯಾವ ಪ್ರತಿಕ್ರಿಯೆ ನೀಡದೆ ಕೆಲಸ ಮಾಡಿ ತೋರಿಸಿದರು ಎಂದರು.

ಸಂಸದರು ಹಾಕಿದ ಹೆಜ್ಜೆಯಲ್ಲೇ ನಡೆಯುತ್ತೇನೆ. ಮುಂಬರುವ ಸ್ಥಳೀಯ ಸಂಸ್ಣೆಗಳ ಚುನಾವಣೆಯಲ್ಲಿ ಮೈತ್ರಿ ಗೆಲವಾಗಲಿದೆ ಎಂದರು.

ಇದನ್ನೂ ಓದಿ-https://suddilive.in/archives/16867

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close