ಸುದ್ದಿಲೈವ್/ಶಿವಮೊಗ್ಗ
ಬಿಜಾಪುರ್ ಗೆ ಹೋಗಿ ಬರುತ್ತೇನೆ ಎಂದು ಹೇಳಿ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆಯಾಗಿದ್ದು, ಆಕೆಯನ್ನ ಕೊಲೆ ಮಾಡಲಾಗಿದೆ.
ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರ 4ನೇ ಕ್ರಾಸ್ ವಾಸಿ ಟೈಲರ್ ಕೆಲಸ ಮಾಡಿಕೊಂಡಿದ್ದ ಮಮತಾ ಶ್ರೀಧರ್ ಎಂಬ 48 ವರ್ಷದ ಮಹಿಳೆ ಜೂ.02 ರಿಂದ ಕಾಣೆಯಾಗಿದ್ದರು.
ತನ್ನ ಮನೆಯಿಂದ ಜೂನ್ 02 ರಂದು ಬಿಜಾಪುರಕ್ಕೆ ಹೋಗುತ್ತಿರುವುದಾಗಿ ತಂಗಿಯೊಂದಿಗೆ ಹೇಳಿ ಹೋದವರು ಮಮತಾ ವಾಪಾಸ್ ಆಗಿರಲಿಲ್ಲ. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು.ಲ ಈಕೆಯ ಫೋನ್ ಸ್ವಿಚ್‍ಆಪ್ ಆಗಿರುತ್ತದೆ. ಈ ಪ್ರಕರಣವನ್ನ ಬೇಧಿಸಿದ ಕೋಟೆ ಪೊಲೀಸರಿಗೆ ಆರೋಪಿಯೇ ಬಾಯಿ ಬಿಟ್ಟಿದ್ದಾನೆ.
ಪ್ರಕರಣವನ್ನ ಬೇಧಿಸಿದ್ದು ಹೇಗೆ?
ನಾಪತ್ತೆಯಾಗಿದ್ದ ಮಹಿಳೆ ಕುರಿತು ಕೋಟೆ ಪಿಐ ಗುರುಬಸಪ್ಪನವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಈ ತಂಡ ಮಹಿಳೆಯ ಫೋನ್ ಲೊಕೇಷನ್ ನನ್ನ ಟ್ರ್ಯಾಕ್ ಮಾಡಿದ್ದಾರೆ.
ಲೋಕೇಷನ್ ಬೀಳಗಿ ಬಳಿ ತೋರಿಸಿದೆ. ಕೊನೆಗೆ ಫೋನ್ ಟ್ರ್ಯಾಕ್ ಮಾಡಿದಾಗ ರೇವಣ ಸಿದ್ದಯ್ಯ (27) ವರ್ಷದ ಯುವಕನನ್ನ ತೋರಿಸಿದೆ. ಆಕೆಯ ಕೊನೆಯ ಫೋನ್ ಕಾಲು ಈತನಿಗೆ ಆದುದರಿಂದ ಪೊಲೀಸರು ಬೀಳಗಿಯಿಂದ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಯಾವುದೇ ಕಾರಣಕ್ಕೂ ಪೊಲೀಸರ ಮುಂದೆ ಬಾಯಿ ಬಿಡದ ರೇವಣ ಸಿದ್ದಯ್ಯ ಕೋಟೆ ಪೊಲೀಸರ ಖಡಕ್ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾನೆ. ಬೀಳಗಿಯಲ್ಲಿ ಕೊಲೆ ಮಾಡಿ ಕೃಷ್ಣ ನದಿಗೆ ಬಿಸಾಕಿರುವುದಾಗಿ ಬಾಯಿ ಬಿಟ್ಟಿದ್ದಾನೆ.
ಕೊಲೆಯಾಗಿದ್ದು ಯಾಕೆ
ಈ ಯುವಕ ಮಮತಾರಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದನೋ ಅಥವಾ ಬೇರೆ ರೀತಿ ಫೋನ್ ಸಂಪರ್ಕಕ್ಕೆ ಬಂದಿದ್ದ ರೇವಣ ಸಿದ್ದಯ್ಯನಿಗೆ ಮಮತಾ ಆನ್ ಲೈನ್ ನಲ್ಲಿ ಹಣ ವರ್ಗಾವಣೆ ಮಾಡಿದ್ದಳು. ಹಣ ವರ್ಗಾವಣೆ ಮಾಡಿದ್ದ ಮಮತಾ ಹಣ ವಾಪಾಸ್ ಪಡೆಯುವುದಾಗಿ ಬಿಜಾಪುರಕ್ಕೆ ಜೂ.02 ರಂದು ಬಂದಿರ್ತಾಳೆ.
ಜೂನ್.04 ರಂದು ಆಕೆಯನ್ನ ಕೊಲೆ ಮಾಡಿ ಕೃಷ್ಣ ನದಿಗೆ ಬಿಸಾಕಿದ್ದಾನೆ. ಬೀಳಗಿ ಪೊಲೀಸರಿಗೆ ಈ ಮೃತದೇಹ ಪತ್ತೆಯಾದರು ಗುರುತು ಸಿಗದ ಕಾರಣ ಅಪರಿಚಿತ ಶವ ಪತ್ತೆ ಎಂದು ದೂರು ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ-https://suddilive.in/archives/17007