ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ ಪಾಲಿಕೆ?

ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸಹ ಶಿವಮೊಗ್ಗ ಮಹಾನಗರ ವ್ಯಾಪ್ತಿಯಲ್ಲಿ ಸಂಗ್ರಹವಾದ ಮಾಂಸದ ತ್ಯಾಜ್ಯಗಳನ್ನ ನಗರ ಪಾಲಿಕೆ ವಾಹನಗಳಲ್ಲೇ ಸಂಗ್ರಹಿಸಿ ವಿಲೇ ಘಟಕಕ್ಕೆ ತಂದಿರುವ ದೃಶ್ಯಗಳು ಲಭ್ಯವಾಗಿದೆ.

ಹತ್ಯೆ ಆದಂತಹ ಗೋತ್ಯಾಜ್ಯಗಳನ್ನ ಪಾಲಿಕೆಯ ಕಸ ವಿಲೇವಾರಿಯಲ್ಲಿ ವಿಲೇ ಮಾಡಲು ತಂದಿದ್ದು ಇದನ್ನ ಹಿಂದೂ ಸಂಘಟನೆಗಳು ಖಂಡಿಸಿವೆ. ಗೋವು ತಲೆ ಬುರುಡೆ ಕಾಲುಗಳು ಕರಳು ಪಚ್ಚಿ ಎಲ್ಲಾ ಅಳಿದುಳಿದ ಭಾಗಗಳನ್ನು ಶಿಮೊಗ್ಗ ನಗರದ ಬೃಹತ್ ಮಹಾನಗರ ಪಾಲಿಕೆ ಕಸ ವಿಲೇವಾರಿ ಗಾಡಿಗಳಲ್ಲಿ ಸಾಗಿಸಿ ಕಸ ವಿಲೇವಾರಿ ಘಟಕದಲ್ಲಿ ತಂದು ಹಾಕಲಾಗಿದೆ.

ಗೋಹತ್ಯೆ ನಿಷೇಧವಿದ್ದರೂ, ಹತ್ಯೆಯಾದ ಗೋವುಗಳ ತ್ಯಾಜ್ಯಗಳ ವಿಲೇವಾರಿಯನ್ನ ಮಹಾನಗರ ಪಾಲಿಕೆ ವಾಹನದಲ್ಲಿ ಮಾಡಿರುವುದು ಅಪರಾಧವಾಗಿದೆ. ಜಿಲ್ಲಾಡಳಿತ ಮತ್ತು ಕಾಂಗ್ರೆಸ್ ಸರ್ಕಾರ, ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ರಾಜೇಶ್ ಗೌಡ ಬಜರಂಗದಳ ಶಿವಮೊಗ್ಗ ವಿಭಾಗ ಸಂಯೋಜಕ ಆಗ್ರಹಿಸಿದ್ದಾರೆ.‌

ಇದನ್ನೂ ಓದಿ-https://suddilive.in/archives/17182

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close