ಸುದ್ದಿಲೈವ್/ಶಿವಮೊಗ್ಗ
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಸಬೀತು ಪಟ್ಟ ಬೆನ್ನಲ್ಲೇ ಸಾಗೆದ ನ್ಯಾಯಾಲಯ ಯುವಕನಿಗೆ ಕಾರಾಗೃಹ ಶಿಕ್ಷೆ ಹಾಗೂ 65 ಸಾವಿರ ರೂ. ದಂಡ ಮತ್ತು ಸಂತ್ರಸ್ತೆಗೆ ಸರ್ಕಾರ 7 ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಿದೆ.
2023ನೇ ಸಾಲಿನಲ್ಲಿ ಸಾಗರ ತಾಲ್ಲೂಕಿನ ವಾಸಿ 22 ವರ್ಷದ ಯುವಕನು 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುತ್ತಾನೆಂದು ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖಾಧಿಕಾರಿಗಳಾದ ಸಾಗರ ಗ್ರಾಮಾಙತರ ಪೊಕೀಸ್ ಠಾಣೆಯ ಪಿಐ ಮಹಾಬಲೇಶ್ವರ್ ಎಸ್ ಎನ್, ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತನ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಎಸ್. ಹರಿಪ್ರಸಾದ್, ಸರ್ಕಾರಿ ಅಭಿಯೋಜಕರವರು, ವಾದ ಮಂಡಿಸಿದ್ದು, ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1 ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತನ ವಿರುದ್ಧ ಆರೋಪ ದೃಡ ಪಟ್ಟ ಹಿನ್ನೆಲೆಯಲ್ಲಿ,
ನ್ಯಾಯಾಧೀಶರಾದ ಲತಾರವರು ನಿನ್ನೆ ಪ್ರಕರಣದ ಆರೋಪಿ 22 ವರ್ಷದ ಯುವಕನಿಗೆ 20 ವರ್ಷ ಕಠಿಣ ಕಾರಾವಾಸ ಶಿಕ್ಷೆ, ರೂ 65,000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ 4 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ನೊಂದ ಬಾಲಕಿಗೆ ಪರಿಹಾರವಾಗಿ ದಂಡದ ಮೊತ್ತದಲ್ಲಿ 55,000/- ಮತ್ತು ಸರ್ಕಾರದ ವತಿಯಿಂದ ರೂ 7,00,000/- ನೀಡುವಂತೆ ಆದೇಶಿಸಿರುತ್ತಾರೆ.
ಇದನ್ನೂ ಓದಿ-https://suddilive.in/archives/17911