ಸುದ್ದಿಲೈವ್/ಶಿವಮೊಗ್ಗ
ಅನಿಮೇಷನ್, ಗ್ರಾಫಿಕ್ ಡಿಸೈನ್ ಮೊದಲಾದ ಡಿಜಿಟಲ್ ಮಾಧ್ಯಮದ ಕೋರ್ಸ್ ಕಲಿಕೆಗಾಗಿ ಬ್ಯಾಚುಲರ್ ಆಫ್ ಫೈನ್ ಆರ್ಟ್ ಪ್ರವೇಶಾತಿ ಆರಂಭವಾಗಿದೆ. ಇದನ್ನ ದೃಶ್ಯಕಲಾ ಪದವಿ ಎಂದು ಕರೆಯಲಾಗುತ್ತದೆ ಎಂದು ಚಿಕ್ಕಮಗಳೂರಿನ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ವಿಶ್ವಕರ್ಮ ಆಚಾರ್ಯ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ಚಿಕ್ಕಮಗಳೂರಿನಲ್ಲಿ ಈ ಕಾಲೇಜು ಆರಂಭವಾಗುತ್ತಿದೆ. 2 ವರ್ಷದ ಫೌಂಡೇಷನ್ ಕೋರ್ಸ್, ಎನ್ ಇಪಿ ಪ್ರಕಾರದ ಕಲಾ ಶಿಕ್ಷಣ ಇದಾಗಿದೆ. ಇದರಲ್ಲಿ ತರಬೇತಿ ಪಡೆದರೆ, ರಂಗಭೂಮಿ, ಗ್ರಾಫಿಕ್ ಡಿಸೈನ್, ಶಿಲ್ಪಕಲೆ ಸೇರಿದಂತೆ 150 ಕ್ಷೇತ್ರದಲ್ಲಿ ಕೆಲಸ ಮಾಡಲು ಈ ಪದವಿ ಅನುಕೂಲವಾಗಲಿದೆ ಎಂದರು.
ಎಸ್ ಎಸ್ ಎಲ್ ಸಿ, ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಆರ್ಟಿಸ್ಟ್ ಆಗಲು ಈ ಕ್ಷೇತ್ರ ವಿದ್ಯಾರ್ಥಿಗಳು ಹೆಚ್ಚಿನ ಸ್ಟ್ರೆಸ್ ಹಾಕಿ ಓದುವ ಅವಕಾಶವಿಲ್ಲ. ಅನಿಮೇಶನ್, ಗ್ರಾಫಿಕ್ ಡಿಸೈನ್, ಕಲೆಯನ್ನ ಕಲಿತು ಆ ಮೂಲಕ ಬದುಕನ್ನ ಕಟ್ಟಿಕೊಳ್ಳ ಬಹುದಾಗಿದೆ ಎಂದರು.
ಅನಿಮೇಷನ್ ತರಬೇತಿ ನೀಡಿ ಉದ್ಯೋಗ ಅವಕಾಶವನ್ನೂ ಕಲ್ಪಿಸಲಾಗುತ್ತಿದೆ. ಕನ್ನಡ ಮತ್ರು ಹಂಪಿ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆಯಲಾಗಿದೆ. 50 ಜನ ವಿದ್ಯಾರ್ಥಿಗಳಿದ್ದಾರೆ. ಲರ್ನ್ ಅಂಡ್ ಅರ್ನ್ ಪದವಿ ಇದಾಗಿದೆ. ಸ್ಕಾಲರ್ಶಿಪ್ ನಲ್ಲಿ ಓದುವ ಅವಕಾಶ ಕಲ್ಪಿಸಲಾಗಿದೆ. ಮೊದಲಿಗೆ 22500 ರೂ ವರ್ಷಕ್ಕೆ ಶುಲ್ಕ ನಿಗದಿಯಾಗಿದೆ ಎಂದರು.
ಆಸಕ್ತರು 6360448844/7760835317/08262-295136 ಸಂಖ್ಯೆಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದರು.
ಇದನ್ನೂ ಓದಿ-https://suddilive.in/archives/16741