ಸುದ್ದಿಲೈವ್/ಶಿವಮೊಗ್ಗ
ಯೋಗದ ಮೂಲಕ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಾಧ್ಯವಿದೆ ಎಂದು ರಾಜ್ಯದ ಮೊದಲ ಮಹಿಳಾ ಫೈಲೆಟ್ ದಿವ್ಯಾ ನಾರಾಯಣ್ ಹೇಳಿದರು.
ಅವರು ಫೇಸೆಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರರಾಷ್ಟಿçÃಯ ಯೋಗ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿ ಕ್ರಿಯಾ ಯೋಗದ ಜ್ಞಾನದ ಬಗ್ಗೆ ಮಾಹಿತಿ ನೀಡಿದರು.
ಇಂದು ಯೋಗ ಅತ್ಯವಶ್ಯಕವಾಗಿ ಬೇಕಾಗಿದೆ. ಅದರಲ್ಲೂ ವಿದ್ಯಾರ್ಥಿಗಳಲ್ಲಿ ಯೋಗ ಮಹತ್ವದ ಪಾತ್ರವನ್ನು ವಹಿಸುತ್ತದೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಬೇಕಾಗುತ್ತದೆ. ಯೋಗ ಮಾನಸಿಕ ಆರೋಗ್ಯ ನೀಡುವಲ್ಲಿ ಅತ್ಯಂತ ಸಹಕಾರಿಯಾಗಿದೆ ಎಂದರು.
ಸುಷುಮ್ನಾ ಕ್ರಿಯಾ ಯೋಗದ ಇತಿಹಾಸ ಮತ್ತು ಪ್ರಕ್ರಿಯೆಯ ಬಗ್ಗೆ ಒಳನೋಟಗಳ ಬಗ್ಗೆ ವಿವರಣೆ ನೀಡಿದ ಅವರು ಇದು ಸರಳವಾದ ಹಾಗೂ ಅತ್ಯಂತ ಪರಿಣಾಮಕಾರಿ ಧ್ಯಾನವಾಗಿದೆ ಎಂದು ತಿಳಿಸಿದರು.
ಸುಷುಮ್ನಾ ಕ್ರಿಯಾ ಯೋಗದ ನಿಯಮಿತ ಅಭ್ಯಾಸದಿಂದ ಆಧುನಿಕ ಜೀವನ ಶೈಲಿಯ ಒತ್ತಡಗಳಿಂದ ಹೊರಬರಲು ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡಲು ಹಾಗೂ ಶಾಶ್ವತ ಆನಂದವನ್ನು ಪಡೆಯಲು ಸಹಾಯಕಾರಿಯಾಗಿದೆ ಎಂದರು.
ಪ್ರೊ.ಯಜ್ಞ ದೀಪಕ್ ಮಾತನಾಡಿ, ದಿವ್ಯಾ ನಾರಾಯಣ್ ಅವರು ಇದುವರೆಗೂ ಶಿವಮೊಗ್ಗದಲ್ಲಿ ಸುಮಾರು 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯೋಗ ದೀಕ್ಷಾ ನೀಡಿದ್ದಾರೆ. ರಾಜ್ಯದ ಪ್ರಥಮ ಮಹಿಳಾ ಫೈಲೆಟ್ ಆಗಿರುವ ಅವರು ಬಾಬಾಜಿ ಸುಷುಮ್ನಾ ಕ್ರಿಯಾ ಯೋಗ ಪೌಂಡೇಷನ್‌ನ ಸ್ವಯಂ ಸೇವಕರಾಗಿದ್ದಾರೆ. ಅವರಿಂದ ಅನೇಕರು ಪ್ರೇರಣೆಗೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಡಾ.ನಾಗರಾಜ ಆರ್ ಸಿಸಿಎ ಪಿಇಎಸ್ ಟ್ರಸ್ಟ್, ಸಿಸ್ಟರ್ ಸಂಸ್ಥೆಗಳ ಪ್ರಾಂಶುಪಾಲರು ಮತ್ತು ಮಹಿಳಾ ಸಬಲೀಕರಣ ಕೋಶ-ಪೇಸೆಟ್ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/17695