ಮೂವರು ಅಪರಿಚಿತರಿಂದ ಜಮೀನಿನಲ್ಲಿ ಮೇಯುತ್ತಿದ್ದ ಹಸುಗಳನ್ನ ಅಪಹರಿಸಲು ಯತ್ನ!

ಸುದ್ದಿಲೈವ್/ಶಿವಮೊಗ್ಗ

ತಮ್ಮ ಜಮೀನಿನನಲ್ಲಿ ಹಸುಗಳನ್ನ ಮೇಯಿಸುತ್ತಿದ್ದ ವೇಳೆ ಅಪರಿಚಿತ ಮೂವರು ವ್ಯಕ್ತಿಗಳು ಬಂದು ಹಲ್ಲೆ ನಡೆಸಿ ಹಸುಗಳನ್ನ ಅಪಹರಿಸಲು ಯತ್ನಿಸಿದ ಘಟನೆ ನಡೆದಿದೆ.

ಜಯರಾಮ್ ಎಂಬುವರು ಅನುಪಿನ ಕಟ್ಟೆಯಲ್ಲಿ ಸಹೋದರಿಯೊಂದಿಗೆ ಹಸುಗಳನ್ನ ತಮ್ಮ ಜಮೀನಿನಲ್ಲೇ ಮೇಯಿಸುತ್ತಿದ್ದಾಗ  ಅವರ ಜಮೀನಿಗೆ ಅತಿಕ್ರಮಣ ಪ್ರವೇಶ ಮಾಡಿದ ಮೂವರು ಹಸುಗಳನ್ನ ಎಳೆದುಕೊಂಡು ಹೋಗಲು ಆರಂಭಿಸಿದ್ದರು.

ಇದನ್ನ ಕಂಡ ಜಯರಾಮ್ ಇದು ನಮ್ಮ ಹಸು ಯಾಕೆ ಎಳೆದುಕೊಂಡು ಹೋಗುತ್ತಿದ್ದೀರ ಎಂದು ಕೇಳಿದ್ದಾರೆ. ಇದು ನಮ್ಮ ಹಸು ಎಂದು ಅಪರಿಚಿತ ಜನ ಮೂವರು ಉತ್ತರಿಸಿದ್ದಾರೆ.‌ ಇದು ನಮ್ಮ ದನಗಳು ಎಂದು ಹೇಳಿ ಜಯರಾಮ್ ಗೆ ಹೊಡೆದು ಸಹೋದರಿಯನ್ನ ಅವ್ಯಾಚ್ಯಶಬ್ದಗಳೊಂದಿಗೆ ಬೈದಿದ್ದಾರೆ.

ಇದರಿಂದ ಜಯರಾಮ್ ಸಹೋದರಿ ಕಿರುಚಿಕೊಂಡಾಗ ಜಮೀನಿನ ಸುತ್ತಮುತ್ತಲಿನ ಜನ ರಕ್ಷಣೆಗೆ ಧಾವಿಸಿದ್ದಾರೆ. ರಕ್ಷಣೆಗೆ ಬಂದ ರೈತರನ್ನ ಕಂಡ ಅಪರಿಚಿತ ಮೂವರು ಕಾಲುಕಿತ್ತಿದ್ದಾರೆ. ಇದರಲ್ಲಿ ಜಯರಾಮ್ ಮೇಲೆ ಹಲ್ಲೆ ಮಾಡಿದವರನ್ನ  ಅಮೀರ್ ಖಾನ್ ಎಂದು ಹೇಳಲಾಗುತ್ತಿದೆ. ಪ್ರಕರಣ ತುಂಗನಗರ ಠಾಣೆಯಲ್ಲಿ ದಾಖಲಾಗಿದೆ.ಜಯರಾಮ್ ಗೆ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ-https://suddilive.in/archives/16524

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close