ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಹೊರವಲಯದಲ್ಲಿರುವ ವೀರಭದ್ರಪ್ಪ ಎಂಬುವರ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಸಂಪೂರ್ಣ ಆಹುತಿಯಾಗಿದೆ. ಈ ಬೆಂಕಿ ಆಕಸ್ಮಿಕ ಎಂದು ಅಂಗಡಿ ಮಾಲೀಕ ಹೇಳಿದರು, ಸ್ಥಳೀಯರ ಪ್ರಕಾರ ಬೇರೆನೇ ಹೇಳುತ್ತಿದ್ದಾರೆ.
ಶಿವಮೊಗ್ಗದ ಜಾವಳ್ಳಿಯಲ್ಲಿ ವೀರಭದ್ರಪ್ಪ ಎಂಬುವರಿಗೆ ಸೇರಿದ ಎಲೆಕ್ಟ್ರಿಕ್ ಐಟಂಮ್ಸ್, ವಯರ್ ಗಳು ದಿನಸಿ, ತಂಪು ಪಾನೀಯ ಮಾರಾಟ ಮಾಡುವ ಅಂಗಡಿ ಇದಾಗಿದ್ದು ಇಂದು ಮಧ್ಯಾಹ್ನ ವೀರಭದ್ರಪ್ಪನವರು ಅಂಗಡಿ ಬಾಗಿಲು ಹಾಕಿಕೊಂಡು ಶಿವಮೊಗ್ಗಕಡೆ ಬಂದಿದ್ದರು.
ಶಿವಮೊಗ್ಗ ಕಡೆ ಬಂದಿದ್ದ ವೀರಭದ್ರಪ್ಪನವರಿಗೆ ಒಂದು ಕರೆಬಂದಿದ್ದು ಮನೆಗೆ ಬೇಗ ಬರಲು ತಿಳಿಸಲಾಗಿತ್ತು. ಸ್ಥಳಕ್ಕೆ ಬಂದು ನೋಡಿದ ವೀರಭದ್ರಪ್ಪನವರಿಗೆ ಶಾಕ್ ಆಗಿದೆ. ಬಾಗಿಲು ಹಾಕಿಕೊಂಡು ಹೋಗಿದ್ದ ವೇಳೆ ಎಲ್ಲವೂ ನೆಟ್ಟಗಿದ್ದ ಅಂಗಡಿ ಬೆಂಕಿಗೆ ಆಹುತಿ ಆಗಿದೆ.
ಬೆಂಕಿದೆ 12 ಲಕ್ಷ ಮಾಲು ಆಹುತಿಯಾಗಿದೆ ಎಂದು ಅಂದಾಜಿಸಲಾಗಿದೆ. ವ್ಯಾಪಾರದ ಹಣ ಹಾಗೂ ಹಳೆಯ ಹಣ ಸೇರಿ ಒಟ್ಟು 30 ಸಾವಿರ ರೂ. ಬೆಂಕಿಗೆ ಆಹುತಿಯಾಗಿದೆ. ವೀರಭದ್ರಪ್ಪನವರು ಈ ಆಕಸ್ಮಿಕ ಬೆಂಕಿ ಹೇಗೆ ಬಿತ್ತುಗೊತ್ತಿಲ್ಲ. ನಾನು ಶಿವಮೊಗ್ಗದ ಕಡೆ ಬಂದಾಗ ಆದ ಅನಾಹುತ ಎಂದು ತಿಳಿಸಿದ್ದಾರೆ.
ಆದರೆ ಸ್ಥಳೀಯರ ಪ್ರಕಾರ ಇಂದು ಮಧ್ಯಾಹ್ನ ಬಿದ್ದ ಸಿಡಲು ಮತ್ತು ಗುಡುಗಿಗೆ ಆದ ಅನಾಹುತವೆಂದು ಅಂದಾಜಿಸುತ್ತಿದ್ದಾರೆ. ಹಂಚಿನ ಮಳಿಗೆಯಾಗಿದ್ದು ಹಂಚಿನ ಮಹಡುಗಳು ಹಾರಿಹೋಗಿದ್ದು ಸಿಡಿಲು ಬಡಿದಂತೆ ಭಾಸವಾಗುತ್ತಿದೆ. ಗ್ರಾಮಾಂತರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ-https://suddilive.in/archives/16305