ಸುದ್ದಿಲೈವ್/ಶಿವಮೊಗ್ಗ
ಜಿಲ್ಲೆಯ ರಿಪ್ಪನ್ ಪೇಟೆಯ ಹುಂಚ ನಾಗರಹಳ್ಳಿಯಲ್ಲಿ ಕಾಡುಕೋಣದ ಕಳೆಬರಹ ಪತ್ತೆಯಾಗಿದ್ದು ಇದು ಸಹ ಸಚಿವಾಲಯದ ಕದತಟ್ಟಿದೆ.
ಜೂ.16 ರಂದು ನಾಗರಹಳ್ಳಿ ಅರಣ್ಯದಲ್ಲಿ ನಾಲ್ಕು ಕಾಡುಕೋಣ ಮತ್ತು ನಾಡ ಬಂದೂಕೊಂದು ಪತ್ತೆಯಾಗಿರುವುದು ಕುತೂಹಲ ಮೂಡಿಸಿತ್ತು. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ಈ ಬಗ್ಗೆ ವರದಿ ಸಹ ಮಾಡಿದ್ದವು.
ಕಾಡುಕೋಣ ಅಥವ ಕಾಡೆಮ್ಮೆಗಳ ಕಳೇಬರಹಗಳು ಪತ್ತೆಯಾಗಿರುವುದು ಈಗ ಎಫ್ ಎಸ್ ಎಲ್ ಗೆ ಕಳುಹಿಸಲಾಗಿದೆ. ತಲೆ ಬುರಡೆ ಮತ್ತು ಇತರೆ ಕಳೆಬರಹಗಳು ಪತ್ತೆಯಾಗಿರುವುದು ಗೋವಿನ ಕಳೆಬರಹವೇ ಎಂಬ ಅನುಮಾನಕ್ಕೂ ಎಡೆ ಮಾಡಿಕೊಟ್ಟಿತ್ತು.
ಆದರೆ ಈ ಬಗ್ಗೆ ಕಾಡುಕೋಣ ಅಥವಾ ಕಾಡೆಮ್ಮೆಗಳ ಕಳೇಬರಹ ದೊರೆತ ಹಿನ್ನಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಹ ಖಡಕ್ ಆಕ್ಷನ್ ಜಾರಿ ಮಾಡಿದ್ದಾರೆ. ನಾಗರಹಳ್ಳಿ ಮತ್ತು ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ಅನೇಚೌಕೂರು ಬಳಿ ಕಾಡುಕೋಣಗಳ ಕಳ್ಳಬೇಟೆ ಆಡಿರುವುದು ಪತ್ತೆಯಾಗಿರುವುದರಿಂದ ಜೂ.25 ರ ಒಳಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.
ಹೆಚ್ಚಿನ ಗಸ್ತು ಹೆಚ್ಚಿಸುವಂತೆ ಆಯಾ ಅರಣ್ಯ ವಲಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಈ ಪ್ರಕರಣ ಬಹಳ ಕುತೂಹಲಕಾರಿಯಾಗಿದ್ದು ಆರೋಪಿಗಳನ್ನ ಹೇಗೆ ಇಲಾಖೆ ಪತ್ತೆಹಚ್ಚುತ್ತಾರೆ ಕಾದುನೋಡಬೇಕಿದೆ.
ಇದನ್ನೂ ಓದಿ-https://suddilive.in/archives/17442