ಡಾ.ಸರ್ಜಿ ತವರುಕ್ಷೇತ್ರದಲ್ಲಿ ಸಂಭ್ರಮಾಚರಣೆ

ಸುದ್ದಿಲೈವ್/ಶಿವಮೊಗ್ಗ

ನೈರುತ್ಯ ಪದವೀಧರ ಕ್ಷೇತ್ರದ ಶಾಸಕರಾಗಿ ಮೊದಲಬಾರಿ ಆಯ್ಕೆಯಾದ ಬಿಜೆಪಿ ಮತ್ತು ಜೆಡಿಎಸ್ ನ ಮೈತ್ರಿ ಅಭ್ಯರ್ಥಿ ಡಾ.ಸರ್ಜಿ ಗೆದ್ದ ಬೆನ್ನಲ್ಲೇ ಸಂಭ್ರಮಾಚರಣೆ ಆಚರಿಸಲಾಗಿದೆ. ಭುಜದ ಮೇಲೆ ಹೊತ್ತ ಕಾರ್ಯಕರ್ತರು ಸಂಭ್ರಮಿಸಿದ ದೃಶ್ಯ ಲಭ್ಯವಾಗಿದೆ.

ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ಧನಂಜಯ ಸರ್ಜಿ ಅವರು ಪ್ರಚಂಡ ಗೆಲುವು ಸಾಧಿಸುತ್ತಿದ್ದಂತೆ ಮೈಸೂರಿನ ಮಹಾರಾಣಿ ಕಾಲೇಜು ಎದುರು ನಿನ್ನೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭುಜದ ಮೇಲೆ ಹೊತ್ತು ಸಂಭ್ರಮಿಸಿದರು.

ಈ ವೇಳೆ ನೂರಾರು ಕಾರ್ಯಕರ್ತರು ಜಮಾಯಿಸಿ ಜಯಘೋಷ ಮೊಳಗಿಸಿದರು. ಬಿಜೆಪಿ, ಜೆಡಿಎಸ್ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು ಪಾಲ್ಗೊಂಡಿದ್ದರು.

ತವರು ಕ್ಷೇತ್ರವಾದ ಶಿವಮೊಗ್ಗದಲ್ಲಿ ಇಂದು‌ಸಂಜೆ 5-30 ಕ್ಕೆ ನಗರದಲ್ಲಿ ಡಾ.ಸರ್ಜಿಯ ಸಂಭ್ರಮಾಚರಣೆ ನಡೆಯಲುದೆ. ಬೆಕ್ಕಿನಕಲ್ಮಠದಿಂದ ಬಿಜೆಪಿ ಕಚೇರಿಯ ವರೆಗೆ ಮೆರವಣಿಗೆ ನಡೆಯಲಿದೆ. ಬೈಕ್ ಕಾರು ಮತ್ತು ಜಾನಪದ ಕಲಾ ತಂಡ ಭಾಗಿಯಾಗಲಿವೆ.

ಇದನ್ನೂ ಓದಿ-https://suddilive.in/archives/16419

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close