ಹೊಳೆಹೊನ್ನೂರಿನ ಬಳಿ ಡೆಡ್ಲಿ ರಸ್ತೆ ಅಪಘಾತ

ಸುದ್ದಿಲೈವ್/ಭದ್ರಾವತಿ

ಹೊಳೆ ಹೊನ್ನೂರು ಫೊಲೀಸ್ ಠಾಣೆ ವ್ಯಾಪ್ತಿಯ ಯಡೇಹಳ್ಳಿ ಬಳಿ ಬಸ್ ನ್ನ ಹಿಂದು ಹಾಕುವ ಅವಸರದಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳ ನಡುವೆ ಡಿಕ್ಲಿ ಉಂಟಾಗಿದ್ದು, ಈ ರಸ್ತೆ ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಯಡೇಹಳ್ಳಿಯಿಂದ ಹೊಳೆಹೊನ್ನೂರು ಕಡೆ ಹೊರಟಿದ್ದ ಬೈಕೊಂದು, ಖಾಸಗಿ ಬಸ್ ನ್ನ ಹಿಂದಾಕಲು ಬೈಕ್ ಸವಾರ ಮುನ್ನುಗ್ಗಿದ್ದಾನೆ. ಅದೇ ವೇಳೆ ಎದುರು ಗಡೆಯಿಂದ ಬರುತ್ತಿದ್ದ ಕಾರು, ಅದರ ಮುಂದೆ ಸಾಗುತ್ತಿದ್ದ ಬಸ್ ಗೆ ಹಿಂದಿಕ್ಕಲು  ಮುಂದಾದಾಗ ಡಿಕ್ಕಿ ಸಂಭವಿಸಿದೆ.

ಡಿಕ್ಕಿಯಲ್ಲಿ ಮೂವರು ಬೈಕ್ ಸವಾರರು ಗಙಭೀರ ಗಾಯಗೊಂಡಿದ್ದಾರೆ.  ರಾಕೇಶ್ ರಾಜೇಶ್ ಮತ್ತು ಕೀರ್ತಿ ಅವರಿಗೆ ತೀವ್ರ ಸ್ವರೂಪದ  ಗಾಯಗಳಾಗಿವೆ. ಇದೊಂದು ಹಿಟ್ ಅಂಡ್ ರನ್ ಎಂದು ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಈ‌ಮೂವರು ಯಡೇಹಳ್ಳಿ ನಿವಾಸಿಗಳೆಂದು ಹೇಳಲಾಗುತ್ತಿದೆ. ಶಿವಮೊಗ್ಗದ ಹೊರವಲಯದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಳೆಹೊನ್ಬೂರು ಪೊಲೀಸರು‌ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/16820

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close