ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಕೋಟೆ ಗೆಳೆಯರ ಬಳಗ ಡಿಸಿಗೆ ಮನವಿ

ಸುದ್ದಿಲೈವ್/ಶಿವಮೊಗ್ಗ

ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಕೋಟೆ ಗೆಳೆಯರ ಬಳಗ ಜಿಲ್ಲಾಧಿಕಾರಿಗೆ ದೂರು ನೀಡಿದೆ.

ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ, ಸ್ಥಾಪನೆಯಾಗಿ ಹತ್ತು ವರ್ಷ ಸಂದಿದರೂ ಈ ವರೆಗೂ ಯಾವ್ದೇ ಲೆಕ್ಕ ಪತ್ರಗಳ ವಾರ್ಷಿಕ ಲೆಕ್ಕ ಪರಿಶೋಧನೆ ನಡೆದಿರುವುದಿಲ್ಲ, ಡಿಸಿಯವರು ಪ್ರಾಧಿಕಾರದ ಸದಸ್ಯರಾಗಿರುವುದರಿಂದ ಸಂಬಂಧಪಟ್ಟ ಇಲಾಖೆಯಿಂದ ಲೆಕ್ಕ ಪರಿಶೋಧನೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಹಾಗೂ ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ – 2005ರ ಅಡಿಯಲ್ಲಿ 4(1)(a) ಮತ್ತು 4(1)(b) ಪ್ರಕಾರ ,ಸಾರ್ವಜನಿಕರ ಮಾಹಿತಿ ಹಾಗೂ ಅರಿವಿಗಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಥಮ ಮೇಲ್ಮನೆ ಪ್ರಾಧಿಕಾರಿಗಳ ಬೋರ್ಡ್ ಅಳವಡಿಸಲು ಕ್ರಮ ಕೈಗೊಳ್ಳಬೇಕು ಮತ್ತು ಆಧಾರ್ ಸಕ್ರಿಯ ಬಯೋ ಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ಅಳವಡಿಸಲು ಸೂಚಿಸಿ ಕಾರ್ಯಾಂಗ ಸೂಕ್ತ ರೀತಿಂದ ನಡೆಯುವಂತೆ ಕ್ರಮ ಗೊಳ್ಳಬೇಕಾದೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ,

ಈ ಸಂದರ್ಭದಲ್ಲಿ ಕೋಟೆ ಬಳಗದ ರೇವಣ್ಣ, ಮಿಥುನ್,ಮಂಜುನಾಥ್, ಪರಮೇಶ್ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/17936

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close