ಸುದ್ದಿಲೈವ್/ಶಿವಮೊಗ್ಗ
ಸಮೀಕ್ಷೆ ಅವಶ್ಯಕತೆ ಇರಲಿಲ್ಲ. ಮೋದಿ ಮತ್ತೆ ಪ್ರಧಾನಿಯಾಗ ಬೇಕೆಂಬುದು 140 ಕೋಟಿ ಜನರ ಅಭಿಪ್ರಾಯವಾಗಿದೆ. ಸಮೀಕ್ಷೆ ಇಂಬುಕೊಟ್ಟಿವೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದವರು ನಾಳೆ ಮಧ್ಯಾಹ್ನ ತನಕ ಹೇಳಬೇಕು.ಮಧ್ಯಾಹ್ನದ ನಂತರ ಇವಿಎಂ ಬಗ್ಗೆ ದೂರಲಿದ್ದಾರೆ ಎಂದು ಭವಿಷ್ಯ ನಡೆದರು.
ಕಳೆದಬಾರಿ ರಾಜ್ಯದಲ್ಲಿ ಬಿಜೆಪಿ 25 ಗೆದ್ದಿತ್ತು. ಆದರೂ ಸಮೀಕ್ಷೆಯಲ್ಲಿ ಕಾಂಗ್ರೆಸ್ 8 ಸ್ಥಾನ ಪಡೆದಿದೆ. ಬಿಜೆಪಿ ದೊಡ್ಡ ಮಟ್ಟದಲ್ಲಿ ಸ್ಥಾನಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ. ಇದು ಅಚ್ಚರಿ ತರುವಂತದ್ದು. ಕಾಂಗ್ರೆಸ್ ಹೀಗೆ ಗೆಲ್ಲಲಿದೆಯಾ? ಬಿಜೆಪಿ ಕಳೆದ ಬಾರಿಗಿಂತ ಈ ಬಾರಿ ಸ್ಥಾನ ಕಳೆದುಕೊಳ್ಳಲಿದೆಯಾ? ಸ್ಥಾನ ಕಳೆದುಕೊಳ್ಳುವುದು ಏನುಕ್ಕೆ ಎಂಬುದು ಚರ್ಚೆ ಆಗಬೇಕಿದೆ. ಬಿಜೆಪಿಯಲ್ಲಿ ಶುದ್ದೀಕರಣ ಆಗಬೇಕಿದೆ ಎಂದು ಈ ಹಿಂದೆ ಹೇಳಿದ್ದೆ. ನಾಳೆ ಫಲಿತಾಂಶ ಬರಲಿ ನೋಡೋಣ ಎಂದರು.
ಚುನಾವಣೆ ಆಯೋಗಕ್ಕೆ ಫೇಕ್ ಆಡಿಯೀ, ಪತ್ರಿಕಾಗೋಷ್ಠೊಯ ಸುದ್ದಿ ಪ್ರಚಾರಿಸಲಾಗಿದೆ. ಇದರ ಬಗ್ಗೆ ರಾಜ್ಯ ಚುನಾವಣೆಗೆ ದೂರಿದ್ದೆ. ರಾಜ್ಯ ಚುಬಾವಣೆ ಉತ್ತರ ಬಂದಿದೆ ಕೇಂದ್ರ ಚುನಾವಣೆಗೆ ಕಳುಹಿಸಲಾಗಿದೆ. ಆದರೆ ಉತ್ತರ ಬಂದಿಲ್ಲ. ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದಾಗಿ ಹೇಳಿದರು.
ಚುನಾವಣೆ ಆಯೋಗ ಪೋಸ್ಟ್ ಮ್ಯಾನ್ ಕೆಲಸ ಮಾಡಬಾರದು. ದಾಖಲಾತಿ ನೀಡಿರುವೆ. ಆದರೆ ಇಂಡಿಯಾ ಒಕ್ಕೂಟ ಸಮೀಕ್ಷೆಯನ್ಬೂ ತಿರುಚಲಾಗಿದೆ ಎಂದು ಚುನಾವಣೆ ಆಯೋಗಕ್ಕೆ ನೀಡಿರುವುದು ನಗೆಪಾಟಲಾಗಿದೆ. ಚುನಾವಣೆ ಆಯೋಗದ ವಿರುದ್ಧ ನ್ಯಾಯಾಲಯಕ್ಜೆ ಹೋಗುವೆ ಎಂದು ತಿಳಿಸಿದರು.
ಕೇವಲ ಶಿವಮೊಗ್ಗ ನಗರ ಪೊಲೀಸರ ಆಡಳಿತ ವೈಫಲ್ಯ ಮಾತ್ರವಲ್ಲ ಇಡೀ ಕರ್ನಾಟಕದಲ್ಲಿ ವೈಫಲ್ಯವಾಗಿದೆ.ಗೃಹಸಚಿವರು ನಾಗರೀಕರಿಗೆ ವಿಶ್ವಾಸ ಬರುವ ಹಾಗೆ ಮಾತನಾಡುತ್ತಿಲ್ಲ. ಚನ್ನಗಿರಿಯಲ್ಲಿ ಠಾಣೆಗೆ ರಕ್ಷಣೆ ನೀಡುವಂತಾಗಿದೆ. ಮಂಗಳೂರಿನಲ್ಲಿ ಇನ್ ಸ್ಪೆಕ್ಟರ್ ನ್ನ ದೂರು ದಾಖಲಿಸಿಕೊಂಡರೆ ರಜೆ ಮೇಲೆ ಕಳುಹಿಸಲಾಗಿದೆ ಇದರ ವಿರುದ್ಧ ಹೋರಾಟ ಮಾಡುವ ಅನಿವಾರ್ಯವಾಗಿದೆ ಎಂದರು.
ಹಿಂದೂ ಸಮಾಜದ ಹೆಣ್ಣಮಕ್ಕಳ ರಕ್ಷಣೆಯನ್ನ ನಾವೇ ರಕ್ಷಿಸಿಕೊಳ್ಳಬೇಕಿದೆ. ರಾಜ್ಯ ಸರ್ಕಾರ ಮಾಡುವ ನಿರೀಕ್ಷೆ ಇದೆ. ಮುಸ್ಲೀಂ ಹೆಣ್ಣುಮಕ್ಕಳ ರಕ್ಷಣೆಯನ್ನ ಸರ್ಕಾರ ಮತ್ತು ಪೊಲೀಸರು ಮಾಡ್ತಾರೆ. ಆದರೆ ಹಿಂದೂ ಮಹಿಳೆಯನ್ನ ನಾವೇ ರಕ್ಷಿಸಬೇಕಿದೆ ಎಂದರು.
ಇದನ್ನೂ ಓದಿ-https://suddilive.in/archives/16130