ಡಿಕೆಶಿ, ಸಿದ್ದರಾಮಯ್ಯ ಕಾಂಗ್ರೆಸ್ ನ ಎರಡು ಕಣ್ಣುಗಳಿದ್ದಂತೆ -ಶೇಷಾದ್ರಿ

ಸುದ್ದಿಲೈವ್/ಶಿವಮೊಗ್ಗ

ಸಿದ್ದರಾಮಯ್ಯ ಅವರನ್ನ ವೇದಿಜೆ ಮೇಕೆ ಕೂರಿಸಿಕೊಂಡು ಡಿಕೆಶಿ ಅವರಿಗೆ ಅಧಿಕಾರ ನೀಡಬೇಕೆಂದು ಆಗ್ರಹಿಸಿದ ಒಕ್ಕಲಿ ಸಮಾಜದ ಚಂದ್ರಶೇಖರ ಸ್ವಾಮೀಜಿ ಅವರ ಹೇಳಿಕೆಗೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಉಪಾಧ್ಯಕ್ಷ ಪಿ ಶೇಷಾದ್ರಿ ಆಕ್ಷೇಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಹಿಂದ ವರ್ಗದ ಸೊಹೋದರ ಜನಾಂಗವಾದ ಕುರುಬ ಮತ್ತು ಒಕ್ಕಲಿಗ ವರ್ಗದ ಜನ ಸಾನಾರಸ್ಯದಿಂದ ಬಾಳುತ್ತಿದೆ. ಕಾಂಗ್ರೆಸ್ ಪಕ್ಷದ ಎರಡು ಕಣ್ಣುಗಳಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ಬೆಳೆದು ಬರುತ್ತಿದ್ದಾರೆ.

ಅವರ ನಡುವಿನ ಬಾಂಧವ್ಯ ಬೆಸೆಯಬೇಕೆ ವಿನಃದ್ವೇಷವನ್ನಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಉಳಿಯಬೇಕು ಎಂದರೆ ಇಬ್ಬರ ಶಕ್ತಿಯೂ ಮುಖ್ಯವಾಗಿದೆ. ಮನಸ್ತಾಪ ಬರುವ ರೀತಿಯಲ್ಲಿ ಹೇಳಿಕೆ ನೀಡಿರುವ ಸ್ವಾಮೀಜಿಗಳು ಹೇಳಿಕೆಯನ್ನ‌ ವಾಪಾಸ್ ಪಡೆಯುವಙತೆ ಆಗ್ರಹಿಸಿದರು.

ಇದನ್ನೂ ಓದಿ-https://suddilive.in/archives/18206

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close