ಸುದ್ದಿಲೈವ್/ಶಿವಮೊಗ್ಗ
ಬಂಧನದ ಭೀತಿ ಎದುರಿಸುತ್ತಿದ್ದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರಿಗೆ ಬಿಗ್ ರಿಲಿಫ್ ಸಿಕ್ಕಿದೆ. ಹೈಕೋರ್ಟ್ ಬಿಎಸ್ ವೈಗೆ ಷರತ್ತು ಬದ್ದ ನಿರೀಕ್ಷಣ ಜಾಮೀನು ನೀಡಿ ಆದೇಶಿಸಿದೆ.
ಪೋಕ್ಸೋ ಕಾಯ್ದೆ ಅಡಿ ಬಿ.ಎಸ್ ಯಡಿಯೂರಪ್ಪನವರಿಗೆ ಬಂಧನದ ಭೀತಿ ಎದುರಾಗಿತ್ತು. ಸಿಐಡಿ ನೋಟೀಸ್ ಗೆ ಪತ್ರ ಬರೆದುದ್ದ ಯಡಿಯೈರಪ್ಪನವರ ವಿರುದ್ಧ ಸಿಐಡಿ ಪೊಲೀಸರು ಫಾಸ್ಟ್ ಟ್ರ್ಯಾಕ್ ಕೋರ್ಟ್ ಬಂಧನದ ವಾರೆಂಟ್ ಪಡೆದುಕಡಿತ್ತು.
ಸಿಐಡಿ ತಂಡ ಇಂದು ಬಿಎಸ್ ಯಡಿಯೂರಪ್ಪನವರು ದೆಹಲಿಯಲ್ಲಿದ್ದಾರೆ ಎಂದು ದೆಹಲಿಗೂ ತೆರಳಿದ್ದರು. ಒಂದು ವೇಳೆ ಬಿಎಸ್ ವೈ ಬಂಧನವಾಗಿದ್ದರೆ ಈ ಆದೇಶ ಅಸ್ಥಿತ್ವವನ್ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಆದರೆ ಯಾರಿಗೂ ಸಿಗದ ಬಿಎಸ್ ವೈಗೆ ಬಿಗ್ ರಿಲೀಫ್ ದೊರೆತಿದೆ.
ಯಡಿಯೂರಪ್ಪನವರ ಪರ ಸಿವಿ ನಾಗೇಶ್ ವಾದಿಸಿದ್ದರು. ಎಜಿ ಶಶಿಕಿರಣ್ ಶೆಟ್ಟಿ ಸಹ ಹೈಕೋರ್ಟ್ ನಲ್ಲಿ ಹಾಜರಿದ್ದು ಬಂಧನದ ಬಗ್ಗೆ ವಾದ ಮಂಡಿಸಿದ್ದರು. ಬಲವಂತದ ಬಂಧನ ಬೇಡ ಎಂದು ವಾದ ಮಂಡಿಸಲಾಗಿತ್ತು. ಇದನ್ನ ಪುರಸ್ಕರಿಸಿದ ನ್ಯಾಯಾಲಯ ಬಿಎಸ್ ವೈಗೆ ರಿಲೀಫ್ ದೊರೆತಿದೆ.
ಇದನ್ನೂ ಓದಿ-https://suddilive.in/archives/16947