ಮಟನ್ ನಲ್ಲಿ ಬರೀ ಮೂಳೆ ಇದೆ ಎಂದಿದ್ದಕ್ಕೆ ಚಾಕುವಿನಿಂದ ದಾಳಿ

ಸುದ್ದಿಲೈವ್/ಶಿವಮೊಗ್ಗ

ಟಿಪ್ಪುನಗರದ 7 ನೇ ತಿರುವಿನಲ್ಲಿ ಮಟನ್ ವಿಚಾರದಲ್ಲಿ ಗಲಾಟೆಯಾಗಿದ್ದು, ಗ್ರಾಹಕನ ಮೇಲೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.

ಟಿಪ್ಪುನಗರದ 7 ನೇ ತಿರುವಿನಲ್ಲಿ   ಮಲ್ಲಪ್ಪ ಎಂಬುವರು ಮಟನ್ ಖರೀದಿಸಿದ್ದು, ಮಟನ್ ನಲ್ಲಿ ಬರೀ ಮೂಳೆ ದೊರೆತಿದೆ ಎಂದು ವಾಪಾಸ್ ತಂದಿದ್ದಾರೆ. ಮಟನ್ ಮಾಲೀಕರಿಗೆ ಮೊಬೈಲ್ ನಲ್ಲಿ ವಿಷಯ ತಿಳಿಸಿದ್ದಾರೆ

ಮಟನ್ ನಲ್ಲಿ ಬರೀ ಮೂಳೆ ಇದೆ ವಾಪಾಸ್ ತೆಗೆದುಕೋ ಬೇಡ ಎಂದು ಮಲ್ಲಪ್ಪ ಆರೋಪಿಸಿದ್ದಾರೆ. ನನ್ನ‌ಮೇಲೆ ತಂದೆ ಬಳಿ ದೂರು ಹೇಳ್ತೀಯ ಎಂದು  ಮಟನ್ ಅಂಗಡಿಯ ಮಾಲೀಕನ ಮಗ ಚಾಕುವಿನಿಂದ ಇರಿದಿದ್ದಾನೆ.

ಮಲ್ಲಪ್ಪನ ಕಿವಿ ಮೇಲೆ ಗಂಭೀರ ಗಾಯವಾಗಿದೆ. ಮೆಗ್ಗಾನ್ ನಲ್ಲಿ ಮಲ್ಲಪ್ಪನವರಿಗೆ ಕಳೆದ ಎರಡು ಗಂಟೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ. ಇ ಅಂಡ್ ಟಿ ತಜ್ಞರು ಚಿಕಿತ್ಸೆಯಲ್ಲಿ ನುರಿತರಾಗಿದ್ದಾರೆ.‌ ತುಂಗನಗರ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್ ಭೇಟಿ ನೀಡಿದ್ದಾರೆ. ಇಮ್ತಿಯಾಜ್ ಎಂಬುವರ ಅಂಗಡಿಯಲ್ಲಿ ಮಲ್ಲಪ್ಪ ಮಟನ್ ಖರೀದಿಸಿದ್ದರು.

ಹೆಚ್ಚಿನ ಚಿಕಿತ್ಸೆಗಾಗಿ ಮಲ್ಲಪ್ಪನವರನ್ನ‌ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಮಲ್ಲ್ಪ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದರು.‌

ಇದನ್ನೂ ಓದಿ-https://suddilive.in/archives/16126

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close