ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಮಾಜಿ ಜಿಪಂ ಅಧ್ಯಕ್ಷೆ ಬಲ್ಕಿಸ್ ಭಾನು ಅವರನ್ನ ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ಗೆ ಆಯ್ಕೆಯಾಗಲು ಟಿಕೇಟ್ ನೀಡಲಾಗಿದೆ.
ಶಿವಮೊಗ್ಗದಲ್ಲಿ ರುದ್ರೇಗೌಡರ ಅವರ ಅವಧಿ ಮುಗಿಯಲು ಬಂದಿದೆ. ಶಾಸಕರಿಂದ ಮೇಲ್ಮನೆಗೆ ಆಯ್ಕೆ ಮಾಡುವ ಈ ಪ್ರಕ್ರಿಯೆಯಲ್ಲಿ ಒಮ್ಮೆ ಆಯ್ಕೆಯಾದರೆ ಸಾಕು ಬಹುತೇಕ ಎಂಎಲ್ ಸಿ ಆಗುವುದು ಪಕ್ಕವಾದಂತೆ ಎಂದು ಹೇಳಲಾಗುತ್ತಿದೆ.
ಬಲ್ಕೀಸ್ ಭಾನು ಅವರು ಜನತಾದಳದಲ್ಲಿ ಮೊದಲು ಗುರುತಿಸಿಕೊಂಡಿದ್ದರು. ಜನತಾದಳದಲ್ಲಿಯೇ ಇದ್ದಾಗಲೇ ಶಿವಮೊಗ್ಗ ಜಿಲ್ಲಾ ಪಂಚಾಯತ್ ಗೆ 1994-95 ರಲ್ಲಿ ಜಿಪಂ ಅಧ್ಯಕ್ಷರಾಗಿದ್ದರು.
2014 ರಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿದ್ದರು. ಈ ಬಾರಿ ಎಂ ಎಲ್ ಸಿ ಆಗಿ ಆಯಗಕೆಯಾಗಿದ್ದಾರೆ. ಶಿಕ್ಷಕಿಯಾಗಿ ಆರಂಭಗೊಂಡಿದ್ದ ಬಲ್ಕಿಸ್ ಭಾನು ಬಙತರ ರಾಜಕೀಯವಾಗಿ ತೊಡಗಿಸಿಕೊಂಡು ಪಕ್ಷದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು.
ಮೇಲ್ಮನೆಗೆ ಸಿಎಂ ಪುತ್ರ ಯತೀಂದ್ರ, ಬಸವರಾಜು ಬಾದರ್ಲಿ, ಭೋಸ್ ರಾಜ್, ವಸಂತ್ ಕುಮಾರ್, ಗೋವದ ರಾಜು,ಐವಾನ್ ಡಿಸೋಜಾ, ಜಗದೇವ್ ಗುತ್ತೇದಾರ್ ಸೇರಿ 8 ಜನರಿಗೆ ಟಿಕೇಟ್ ಹಂಚಲಾಗಿದೆ. ಬಿಜೆಪಿಯಿಂದ, ಸಿಟಿ ರವಿ, ಎಂಜಿ ಮೂಲಿ, ಎನ್ ರವಿಕುಮಾರ್ ಆಯ್ಕೆ ಬಹುತೇಕ ಖಚಿತವಾಗಲಿದೆ.
ಇದನ್ನೂ ಓದಿ-https://suddilive.in/archives/16073