ಸುದ್ದಿಲೈವ್/ಶಿವಮೊಗ್ಗ
ತಡರಾತ್ರಿ ಠಾಣೆ ಮುಂದೆ ಬಂದು ಅಪ್ರಾಪ್ತಳನ್ನ ಹಿಂಬಾಲಿಸಿ ಚುಡಾಯಿಸುತ್ತಿದ್ದ ಅಪ್ಪ ಪೋಲಿಯೊಬ್ಬ ಬ್ಲೇಡ್ ನಲ್ಲಿ ಕೈ ಕೋಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಠಾಣೆಯಲ್ಲಿ ದೂರು ದಾಖಲಾಗಿದೆ.
ತಡರಾತ್ರಿ 21 ವರ್ಷದ ಯುವಕ ತಾನು ಅಪ್ರಾಪ್ತ ಬಾಲಕಿಯನ್ನ ಚುಡಾಯಿಸಿದ್ದಕ್ಕೆ ಆಕೆಯ ಪೋಷಕರು ಎಚ್ಚರಿಕೆ ನೀಡುತ್ತಿದ್ದಾರೆ. ಆಕೆಯನ್ನ ಫಾಲೋ ಮಾಡಿ ಚುಡಾಯಿಸುವುದನ್ನ ಬಿಡು ಇಲ್ಲವಾದಲ್ಲಿ ಪೊಲೀಸರಿಗೆ ದೂರು ಕೊಡುವುದಾಗಿ ಹೆದರಿಸಿರುವುದಾಗಿ ಆರೋಪಿಸಿ ಕೋಟೆ ಪೊಲೀಸ್ ಠಾಣೆ ಎದುರು ಎರಡೂ ಕೈಗಳಿಂದ ಕೊಯ್ದು ಕೊಂಡು ಬಂದಿದ್ದಾನೆ.
ನಾನು ಎಲ್ಲೂ ಹೋಗುವುದಿಲ್ಲ ಠಾಣೆಯ ಎದರೇ ಹೀಗೆ ರಕ್ತ ಕಾರಿಕೊಂಡು ಸಾಯುತ್ತೇನೆ ಎಂದು ಮತ್ತೆ ಎರಡೂ ಕೈಗಳನ್ನ ಬ್ಲೇಡ್ ನಿಂದ ಕೊಯ್ದುಕೊಂಡಿದ್ದಾನೆ. ಠಾಣೆಯಲ್ಲಿದ್ದ ಸಿಬ್ವಂದಿಗಳು ರಕ್ಷಿಸಲು ಮುಂದೆ ಹೋದಾಗ ಠಾಣೆಯ ಕಾಪೌಂಡ್ ನಿಂದಹೊರಗಡೆ ಓಡಿ ಹೋಗಿ ಬೈಕ್ ಹತ್ತಿಕೊಂಡು ಪರಾರಿಯಾಗಿದ್ದಾನೆ.
ಹೀಗೆ ಠಾಣೆಯ ಮುಂದೆ ಬಂದು ಕೈಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿ ಪರಾರಿಯಾದ ಬಗ್ಗೆ ಪೊಲೀಸರು ಸು ಮೋಟೋ ದೂರು ದಾಖಲಿಸಿಕೊಂಡಿದ್ದಾರೆ. ಅಪ್ರಪ್ತೆಯನ್ನ ಹಿಂಬಾಲಿಸಿಕೊಂಡು ಹೋಗಿ ಚುಡಾಯಿಸುತ್ತಿದ್ದ ಪೋಲಿಗೆ ಈ ರೀತಿಯ ಸಿನಿಮಾ ಐಡಿಯಾ ಹೊಳೆದಿದ್ದು ಸಹ ರೋಚಕವಾಗಿದೆ.
ಡ್ರಾಮಾ ನಡೆಸಿ ಪರಾರಿಯಾದ ಯುವನನ್ನ ಆರ್ಎಂ ಎಲ್ ನಗರದ ಗೌತಮ್ ಅಲಿಯಾಸ್ ಸಂಜು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ-https://suddilive.in/archives/17482