ಸುದ್ದಿಲೈವ್/ಶಿವಮೊಗ್ಗ
ಪೆಟ್ರೋಲ್, ಡೀಸೇಲ್ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಗೆ ಇಳಿದಿದೆ. ಅದರಂತೆ ಶಿವಮೊಗ್ಗದಲ್ಲೂ ಬಿಜೆಪಿ ಕಾರ್ಯಕರ್ತರು ಶಾಸಕ ಚೆನ್ನಬಸಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜ್ಯಾದ್ಯಂತ ಇಂದು ಬಿಜೆಪಿ ಪ್ರತಿಭಟನೆ ನಡೆಸಿದೆ. ಬೆಂಗಳೂರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜೇಂದ್ರ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲೂ ಪಕ್ಷದ ನಾಯಕರನ್ನ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗದಲ್ಲಿ ಅಶೋಕ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದವರನ್ನ ಬಂಧಿಸಲಾಗಿದೆ.
ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ತೆರಿಗೆ ಬರದ ವಿರುದ್ಧ ಟಯರ್ ಗೆ ಬೆಂಕಿ ಹಚ್ಚಿದ್ದಾರೆ. ಟಯರ್ ಗೆ ಬೆಂಕಿ ಹಾಕಿ ಪ್ರತಿಭಟನಾಕಾರರು ಧರಣಿ ಕುಳಿತಿದ್ದಾರೆ. ಪ್ರತಿಭಟನಾಕಾರರು ಬೆಂಕಿ ಹಚ್ಚಿದ ಟಯರ್ ಗೆ ಪೊಲೀಸರು ನೀರು ತಂದು ಸುರಿದಿದ್ದಾರೆ.
ಇದರಿಂದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ಯುದ್ದ ನಡೆದಿದೆ. ವಾಗ್ವಾದ ಹೆಚ್ಚಾದ ಪರಿಣಾಮ ಪ್ರತಿಭಟನಾಕರರನ್ನ ಅರೆಸ್ಟ್ ಮಾಡಲಾಗಿದೆ. ಈ ರೀತಿ ಪ್ರತಿಭಟನೆ ನಡೆದಿದೆ. ಯಾವುದೇ ಪಕ್ಷ ಅಧಿಕಾರವಿದ್ದಾಗಲೂ ಬೆಲೆ ಏರಿಕೆ ಎಂಬುದು ಮಾಮೂಲಿಯಾಗಿದೆ. ಅದರಂತೆ ವಿಪಕ್ಷಗಳ ಪ್ರತಿಭಟನೆಯೂ ಸಹ ಮಾಮೂಲಿಯಾಗಿದೆ.
ಇದನ್ನೂ ಓದಿ-https://suddilive.in/archives/17316