ಸುದ್ದಿಲೈವ್/ಶಿವಮೊಗ್ಗ
ಹಾವೇರಿ ಜಿಲ್ಲೆಯಲ್ಲಿ ಹೈವೆ ಬಳಿ ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲ್ ಡಿಕ್ಕಿ ಹೊಡೆದ ಪರಿಣಾಮ ಜಿಲ್ಲೆಯ 13 ಜನ ಸಾವು ಕಂಡ ಘಟನೆ ಬೆನ್ನಲ್ಲೇ ಇಂದು ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ ಮೆರೆದಿದ್ದಾನೆ.
ತರಲಘಟ್ಟ ಬಳಿ ತಡ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಯುವಕರ ದುರ್ಮಣ.ಹೊಂದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಶುಕ್ರವಾರ ಮಧ್ಯರಾತ್ರಿ 12-30 ರ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಮೂರು ಯುವಕರು ಸಾವು ಕಂಡಿದ್ದಾರೆ. ಅಂಬ್ಯುಲೆನ್ಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ.
ಶಿವಮೊಗ್ಗ ಕಡೆಯಿಂದ ಸಂಚಾರಿಸುತ್ತಿದ್ದ ಮಾಸುರು ಸರ್ಕಾರಿ ಆಸ್ಪತ್ರೆ ಅಂಬ್ಯುಲೆನ್ಸ್ ಮತ್ತು ಶಿಕಾರಿಪುರ ಮಾರ್ಗದಿಂದ ಆಗಮಿಸುತ್ತಿದ್ದ ಬೈಕ್ ನಡುವೆ ಮುಖಮುಖಿ ಡಿಕ್ಕಿ ಉಂಟಾಗಿದೆ. ಬೈಕ್ ನಲ್ಲಿದ್ದ ಮೂರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ.
ಮೃತ ಯುವಕರು ದಾವಣಗೆರೆ ಜಿಲ್ಲೆಯ ಹಳೆಜೋಗ ಗ್ರಾಮದ ಪ್ರಸನ್ನ, ಕಾರ್ತಿಕ್ ,ಅರುಣ್ ಕುಮಾರ್ ಎಂದು ತಿಳಿದು ಬಂದಿದೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/18022