ಸುದ್ದಿಲೈವ್/ಶಿವಮೊಗ್ಗ
ಬಿಎಸ್ ವೈ ಪೋಕ್ಸೋ ಪ್ರಕರಣ ಬಿ ರಿಪೋರ್ಟ್ ಹಾಕುವ ವಿಚಾರದಲ್ಲಿ ರಾಜಕಾರಣ ಬೆರೆಸಲಾಗಿದೆ ಎಂದು ನೂತನ ಸಂಸದರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಇದರಲ್ಲಿ ಏನೂ ಹುರುಳಿಲ್ಲವೆಂದು ಬಿ ರಿಪೋರ್ಟ್ ಹಾಕುವ ಪ್ರಕರಣದಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಪೋಕ್ಸೋ ಪ್ರಕರಣದಾಖಲಿಸಿದ ಅಪ್ರಾಪ್ತೆ ಬಾಲಕಿ 50-60 ಜನ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಸಿಐಡಿ ತನಿಖೆ ಮುಗಿದಿದೆ. ಪೂಜ್ಯ ತಂದೆಯವರ ಹೇಳಿಕೆ ಪಡೆಯಲಾಗಿದೆ. ಎರಡು ಮೂರು ದಿನಗಳ ಹಿಂದೆ ರಾಹುಲ್ ಗಾಂಧಿಯವರನ್ನ ವೆಂಗಳೂರಿಗೆ ಕರೆಯಿಸಿದಾಗ ಈ ಬೆಳವಣಿಗೆ ನಡೆದಿದೆ ಎಂದು ಸಂಸದರು ಆರೋಪಿಸಿದ್ದಾರೆ.
ಸರ್ಕಾರದ ವಿರುದ್ಧ ವಾಲ್ಮೀಖಿ ಪ್ರಕರಣವನ್ನ ಮರೆ ಮಾಚಲು ಪೂಜ್ಯ ತಂದೆಯವರ ವಿರುದ್ಧದ ದೂರನ್ನ ಗಟ್ಟಿಗೊಳಿಸಲಾಗುತ್ತಿದೆ. ನಮ್ಮ ಕುಟುಂಬ ವನ್ನ ಹಿಂದೆಯೂ ವಾಲಿ ಬಾಲ್ ಪುಟ್ಬಾಲ್ ಆಗಿ ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ನಮ್ಮ ಸಂಘಟನೆಯನ್ನ ಬಳಸಿಕೊಂಡು ರಾಜಕಾರಣ ಮಾಡಲಾಗುತ್ತಿದೆ. ನ್ಯಾಯಾಲಯ ಉತ್ತರ ಕೊಡಲಿದೆ ಎಂದರು.
ಹೆಣ್ಮಗು ಸರಿಯಿಲ್ಲ ಎಙದು ಗೃಹ ಸಚಿವರೇ ಹೇಳಿದ್ದಾರೆ. ಆದರೂ ಪ್ರಕರಣವನ್ನ ಗಟ್ಟಿ ಮಾಡಿ ಬಿಎಸ್ ವೈ ಬಂಧಿಸಲು ಮುಂದಾಗಿರುವುದು ನ್ಯಾಯಾಲಯದಲ್ಲಿ ನ್ಯಾಯ ದೊರಕಲಿದೆ ಎಂದರು.
ಇದನ್ನೂ ಓದಿ-https://suddilive.in/archives/16858