ಸುದ್ದಿಲೈವ್/ಆನಂದಪುರ
ಸಾಗರ ತಾಲೂಕು ಆನಂದಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಮುಂಬಾಳು ಬಳಿ ಮೊನ್ನೆ ಓಮ್ನಿ ಮತ್ತು ಟಾಟಾ ಕಂಪನಿಯ ಕಾರಿನ ನಡುವೆ ಡಿಕ್ಕಿ ಉಂಟಾಗಿ ಓರ್ವ ಮೃತಪಟ್ಟ ಪ್ರಕರಣ ಇನ್ನೂ ಜೀವಂತವಾಗಿರುವಾಗಲೇ ಇದೇ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಇಂದು ಮತ್ತೊಂದು ಅಪಘಾತ ಸಂಭವಿಸಿದೆ.
ಶಿವಮೊಗ್ಗದಿಂದ ಸಾಗರ ಕಡೆ ಹೊರಟಿದ್ದ ಕಾರಿಗೆ ಎದುರಿನಿಂದ ಬಂದ ಖಾಸಗಿ ಬಸ್ ಒಂದು ಕಾಸ್ಪಾಡಿಯ ಬಳಿ ಡಿಕ್ಕಿಹೊಡೆದಿದೆ. ಅದೃಷ್ಟವಶಾತ್ ಎರಡೂ ವಾಹನದ ಸವಾರರಿಗೆ ಯಾವ ಪ್ರಾಣಾಪಾಯವಾಗಿಲ್ಲವೆಂದು ತಿಳಿದು ಬಂದಿದೆ.
ಬಸ್ ನಲ್ಲಿ 20 ಜನ ಪ್ರಯಾಣಿಕರಿದ್ದರು. ಕಾರಿನಲ್ಲಿ ಒಬ್ವರೇ ಇದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಯಾರಿಗೂ ಜೀವಹಾನಿ ಉಂಟಾಗಿಲ್ಲ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಆನಂದಪುರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಎರಡೂ ವಾಹನಗಳು ನುಜ್ಜುಗುಜ್ಜಾಗಿವೆ. ಬಸ್ ನ ಮುಂಭಾಗದ ಟಯರ್ ಟ್ವಿಸ್ಟ್ ಆಗಿದೆ. ಕಾರಿನಮುಂಭಾಗ ನುಜ್ಜುಗುಜ್ಜಾಗಿ ದಾವಣಗೆರೆ ಆರ್ ಟಿಒ ಪಾಸಿಂಗ್ ನಂಬರ್ ನ್ನ ಹೊಂದಿದೆ.
ಇದನ್ನೂ ಓದಿ-https://suddilive.in/archives/16647