ಸುದ್ದಿಲೈವ್/ಶಿವಮೊಗ್ಗ
ವಾಲ್ಮೀಕಿ ಅಭಿವೃದ್ಧಿ ನಿಗಮದದಲ್ಲಿ ಬ್ರಹ್ಮಾಂಡ ಭ್ರಷ್ಠಾಚಾರ ಖಂಡಿಸಿ ಮತ್ತು ಸಚಿವ ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ.
ವಾಲ್ಮೀಕಿ ಅಭಿವೃಧ್ಧಿ ನಿಗಮದಲ್ಲಿ ಬ್ರಹ್ಮಾಂಡ ಭ್ರಷ್ಠಾಚಾರದ ಬಗ್ಗೆ ಡೆತ್ ನೋಟ್ ಬರೆದು ಅಧೀಕ್ಷಕ ಚಂದೃಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಯಮ್ಹತ್ಯೆ ಮಾಡಿಕೊಂಡು ವಾರ ಕಳೆದರೂ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯದೆ ಸಚಿವರನ್ನ ರಕ್ಷಿಸುವ ಪ್ರಯತವನ ನಡೆಯುತ್ತಿದೆ ಎಂದು ಯುವ ಮೋರ್ಚಾ ಪ್ರತಿಭಟಿಸಿದೆ.
187 ಕೋಟಿ ಅವ್ಯವಹಾರ ನಡೆದಿದೆ. ಪ್ರಕರಣವನ್ನ ಸಿಬಿಐಗೆ ವಹಿಸದೆ ಸಿಐಡಿ ಮತ್ತು ಎಸ್ಐಟಿಗೆ ವಹಿಸಲಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸಲು ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಲಾಯಿತು.
ಯುವ ಮೋರ್ಚಾದ ಪ್ರಶಾಂತ್ ಕುಕ್ಕೆ, ರಾಹುಲ್ ಬಿದರೆ, ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/15973