ಆರ್ ಎಸ್ ಎಸ್ ಮತ್ತು ಎಬಿವಿಪಿ ಎರಡೂ ಸಂಘಟನೆ ನನ್ನ ಬದುಕಿನ ದಿಕ್ಕನ್ನ ಬದಲಾಯಿಸಿತು-ಡಾ.ಎಂ.ಕೆ.ಶ್ರೀಧರ್

ಸುದ್ದಿಲೈವ್/ಶಿವಮೊಗ್ಗ

ಅಭಿನಂದನೆ ಕಾರ್ಯಕ್ರಮದಲ್ಲಿ ತಮಗೆ ಒಬ್ಬರಿಗೆ ಸನ್ಮಾನಿಸುತ್ತಿರುವುದು ನೋವಾಗುತ್ತಿದೆ ಎಂದು ಪದ್ಮಶ್ರೀ ಡಾ.ಎಂ.ಕೆ.ಶ್ರೀಧರ್ ಅಭಿಪ್ರಾಯ ಪಟ್ಟರು.

ಅಂಬೇಡ್ಕರ್ ಭವನದಲ್ಲಿ ಪೀಪಲ್ಸ್ ಫೋರಂ ಕರ್ನಾಟಕ ಎಜುಕೇಷನ್ ವತಿಯಿಂದ ಪದ್ಮಶ್ರೀ ಡಾ.ಎಂ.ಕೆ.ಶ್ರೀಧರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಶಸ್ತಿ ಎಂಬುದು ಕೇವಲ ವ್ಯಕ್ತಿಗೆ ಸಿಗ್ತಾ ಇದೆ. ಪ್ರಶಸ್ತಿ ಕೇವಲ ಒಬ್ಬನಿಗೆ ಸಿಗುವ ವಸ್ತುವಲ್ಲ. ಅದೊಂದು ಟೀಂ ವರ್ಕ್ ಹಾಗಾಗಿ ನೋವಾಗುತ್ತಿದೆ. ಪ್ರಶಸ್ತಿ ಕೇವಲ ಕೆಲವು ವ್ಯಕ್ತಿಗಳಿಗೆ ಸಿಗುತ್ತಿದೆ. ಇತರೆ ಪ್ರಶಸ್ತಿ ವಿಜೇತರಿಗೆ ನನ್ನನ್ನ ಹೋಲಿಸಿಕೊಂಡರೆ ನಾನು ಏನೂ ಕೆಲಸ ಮಾಡಿಲ್ಲ ಅನಿಸುತ್ತದೆ. ಇದು ದೆಹಲಿಯಲ್ಲಿ ಪ್ರಶಸ್ತಿ ಪಡೆಯಲು ಹೋದಾಗ ಅನಿಸಿದ ಅನುಭವವಾಗಿದೆ ಎಂದರು.

ಭಾಷಣದ ವೇಳೆ ಭಾವುಕರಾದ ಡಾ.ಎಂ.ಕೆ.ಶ್ರೀಧರ್, ಪತ್ರಕರ್ತರೊಬ್ವರು ಪ್ರಶಸ್ತಿ ಪಡೆದಾಗ ಪ್ರಶ್ನಿಸಿದರು. ನಿಮಗೆ ಏನಾದರೂ ಅನಿಸುತ್ತಿದೆಯಾ ಪ್ರಶಸ್ತಿ ಪಡೆದು ಎಂದು ಕೇಳಿದರು. ಮೂರು ನಾಲ್ಕು ಬಾರಿ ಇಲ್ಲವೆಂದ ಮೇಲೆ ಉತ್ತರಿಸಿದೆ.

ಸಮಾಜದ ಪರಿಚಯಸ್ತರು, ಬೆಂಬಲಿಗರು, ನನಗೆ ಸಹಕರಿಸಿದವರಿಂದ ಈ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ ಎಂದು ಅನಿಸಿತು. ಬಾಲ್ಯದಲ್ಲಿ ಬಡತನವಿತ್ತು ಮನೆಯಿಂದ ತಿಂಗಳಿಗೆ 5 ರೂ. ಕೊಡ್ತಾ ಇದ್ದರು. ಬಾಲಕರ ವಸತಿ ಶಾಲೆಯಲ್ಲಿ ಓದಿದ್ದನನಗೆ ಐದು ರೂ. ಕೂಡಿಸುವ ಕಲೆ ಕಲಿಸಿಕೊಟ್ಟಿತ್ತು. ಇದು ಪ್ರಬುದ್ಧಮಾನಕ್ಕೆ ಬಂದ ನಂತರವೂ ಅನುಕೂಲವಾಯಿತು.

ಬಾಲಕರಾಗಿ ಶಾಲೆಗೆ ಒಟ್ಟಿಗೆ 60 ಜನ ಶಾಲೆಗೆ ಹೋಗ್ತಾ ಇದ್ವಿ. ಅವರ ಪ್ರೀತಿ ಸಹ ಪ್ರಶಸ್ತಿ ಪಡೆಯಲು ಸಹಕಾರವಾಯಿತು. ನನಗೆ ಕೊರತೆ ಇಲ್ಲದಂತೆ ಸಹಚರರು ಕುಟುಂಬಸ್ಥರು ನೋಡಿಕೊಂಡ ಪರಿಣಾಮ ಪ್ರಶಸ್ತಿ ಬಂದಿದೆ. ಈ ಅಭಿನಂದನೆ ಕಾರ್ಯಕ್ರಮದಲ್ಲಿ ನನಗೆ ಒಬ್ಬನನ್ನೇ ಕರೆದು ಅಭಿನಂದಿಸಿರುವುದು ಬೇಸರವಾಗುತ್ತದೆ. ಅರ್ಥಪೂರ್ಣ ಜೀವನ ಮಾಡಲು ಆದರ್ಶ ಬೇಕು. ಅದಕ್ಕೊಂದು ಗುರಿಬೇಕು ಎಂದರು

ನಾನು ಮೊದಲು ಆರ್ ಎಸ್ ಎಸ್ ಗೆ ಹೋಗಲು ತಿರಸ್ಕರಿಸಿದ್ದೆ. ಆದರೆ ಆರ್ ಎಸ್ ಎಸ್ ನವರು ನನಗೆ ಕಥೆ ಹೇಳಲು ಕರೆದರು. ಕಥೆ ಮಾತ್ರ ಹೇಳುವೆ ಎನ್ನುತ್ತಿದ್ದೆ. ಕಥೆ ಹೇಳ್ತಾ ಹೇಳ್ತನೇ ಆರ್ ಎಸ್ ಎಸ್ ಒಳಗೆ ಹೋಗಿ ಸಂಘಟನೆಯ ಭಾವಾದೆ. ಎಬಿವಿಪಿಯಲ್ಲೂ ಹೋರಾಡ್ತಾ, ಹೋರಾಡ್ತ ಸಂಘಟನೆಯ ಒಳಗೆ ಹೋದೆ. ಆರ್ ಎಸ್ ಎಸ್ ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಂತರ ಗುರಿ ತೋರಿಸಿದೆ. ಬದುಕಿನ ದಿಕ್ಕು ತೋರಿಸಿತು ಎಂದರು.

ಎಂಎಲ್ ಸಿಗಳಾದ ರುದ್ರೇಗೌಡ, ಡಿ.ಎಸ್.ಅರುಣ್, ಮಾಜಿ ಸಭಾಪತಿ ಡಿ.ಎಸ್.ಶಂಕರ ಮೂರ್ತಿ, ರಾಮಚಂದ್ರ, ಉಪನ್ಯಾಸಕರಾಗಿ ಬಂದ ಸದಾನಂದ, ಡಾ.ರವಿ,  ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/17525

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close