ಶಿಫಾರಸ್ಸು, ನೂಕು ನುಗ್ಗಲು, ವಾಗ್ವಾದ ನಡೆಸಲು ಗಟ್ಟಿ ಇದ್ದರೆ ಸಭೆಗೆ ಅಲೌಡ್!

ಸುದ್ದಿಲೈವ್/ಶಿವಮೊಗ್ಗ

ವಿಐಎಸ್ಎಲ್ ಇಸ್ಪಾತ್ ಭವನದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರ ಸ್ವಾಮಿ ಅವರ ಅಧಿಕಾರಿಗಳೊಂದಿಗೆ ನಡೆಯುವ ಸಭೆಗೆ ಹಾಜರಿಯಾಗಲು ನೂಕು ನುಗ್ಗಲು ಉಂಟಾಗಿದೆ. ಶಿಫಾರಸ್ಸು, ನೂಕುನುಗ್ಗಲು ಉಂಟಮಾಡಲು, ವಾಗ್ವಾದ, ಚರ್ಚೆ ಮಾಡಲು ಸಿದ್ದರಿದ್ದರೆ ಹೆಚ್ ಡಿಕೆ ಸಭೆಗೆ ಅಲೌಡ್ ಎಂಬಂತಾಗಿದೆ.

ಸಂಸದರ ಕ್ಯಾಮರಾಮ್ಯಾನ್, ಜೆಡಿಎಸ್ ನ ಪ್ರಮುಖ ನಾಯಕರನ್ನೇ ಸಭೆಗೆ ಹೋಗದಂತೆ ಭವನದ ಮುಖ್ಯ ದ್ವಾರದಲ್ಲೇ ಕಾರ್ಖಾನೆಯ ಭದ್ರತಾ ಪಡೆ ತಡೆಯಲಾಗಿದೆ. ನಂತರ ಮಾಧ್ಯಮಗಳಿಗೂ ಸಭೆಯಿಂದ ಹೊರಗಿಟ್ಟು ಸಭೆ ನಡೆದಿದೆ. 50 ವರ್ಷದ ಹಿಂದೆ ರಾಜಕುಮಾರ್ ಸಿನಿಮಾ ರಿಲೀಸ್ ಆದಾಗ ನಡೆಯುತ್ತಿದ್ದ ನೂಕು‌ನುಗ್ಗಲು ಉಂಟಾಗಿದೆ.

ಕುಮಾರ ಸ್ವಾಮಿ ಅವರ ಟಿಪಿಯಲ್ಲಿ ಮಾಧ್ಯಮಗಳಿಗೆ ಪ್ರವೇಶವಿಲ್ಲ ಎಂದು ಹಾಕಿದರೆ ಮಾಧ್ಯಮಗಳು ಇವರ ಹಿಂದೆ ಓಡಾಡುವ ದರ್ದು ಇರಲಿಲ್ಲ. ಆದರೆ ಮಾಧ್ಯಮಗಳನ್ನ ಹೊರಗಿಟ್ಟು ಸಭೆ ನಡೆಸಲಾಗಿದೆ. ಹೊರಗಿದ್ದ ನಾಯಕರು, ಸಚಿವರ ಮೀಡಿಯಾ ಪರ್ಸನ್ ಗಳನ್ನ ನಿಧಾನವಾಗಿ ಒಳಬಿಡಲಾಯಿತು. ಆದರೆ ಕೊಬೆಯ ವರೆಗೂ ಮೀಡಿಯಾದವರನ್ನ ಹೊರಗಿಡಲಾಯಿತು.‌

ಕಾಂಟ್ರ್ಯಾಕ್ಟರ್ ಲೇಬರ್ ಯೂನಿಯನ್ ಅಧ್ಯಕ್ಷ ಸುರೇಶ್ ಅವರಿಗೆ ಸಭೆಗೆ ಹಾಜರಾಗಲು ನಿರ್ಬಂಧಿಸಲಾಯಿತು. ನಂತರ ವಾಕ್ ಸಮರದ ನಂತರ ಐದು ಜನರಿಗೆ ಬಿಡುವ ಜಾಗದಲ್ಲಿ ಮೂವರನ್ನ ಬಿಡಲಾಯಿತು. ಭದ್ರತಾ ಪಡೆಯವರ ಜೊತೆ ವಾಗ್ವಾದದಲ್ಲಿ ನಂತರ ಎಲ್ಲರನ್ನೂ ಬಿಡಲಾಯಿತು. ಅಂದರೆ ಜೋರಾಗಿ ಚರ್ಚೆ ನೂಕುನುಗ್ಗಲು ಮಾಡುವವರಿಗೆ ಅವಕಾಶ ಎಂಬುದು ಸಭೆಯಲ್ಲಿ ತಿಳಿದು ಬಂದಿದೆ.

ಇದನ್ನೂ ಓದಿ-https://suddilive.in/archives/18126

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close