ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ-ಶಿಕಾರಿಪುರ-ರಾಣೇಬೆನ್ಬೂರು ರೈಲ್ವೆ ಜಮೀನು ಭೂಸ್ವಾಧೀನ ಕಾರ್ಯ, ಪ್ರಸ್ತುತ ರೈಲ್ವೆ ಕಾಮಗಾರಿ, ವಂದೇ ಭಾರತ್ ರೈಲಿಗೆ ಬೇಕಾದ ವ್ಯವಸ್ಥೆ, ಶಿರಸಿ, ಕೊಂಕಣ ರೈಲ್ವೆ ಬಗ್ಗೆ ಸಂಸದ ರಾಘವೇಂದ್ರ ಅವರ ನೇತೃತ್ವದಲ್ಲಿ ಜಿಲ್ಕಾಧಿಕಾರಿ ಕಚೇರಿಯಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಹಲವು ಅಂಸವನ್ನ ಚರ್ಚಿಸಲಾಯಿತು.
ಅಧಿಕಾರಿಗಳು, ತಿಮ್ಲಾಪುರದಲ್ಲಿ ಮರ ಕಟ್‌ಆಗಬೇಕಿದೆ. ಶಿಕಾರಿಪುರ, ಶಿವಮೊಗ್ಗ ನ್ಯಾಮತಿಯಲ್ಲಿ 562 ಎಕರೆ ಖಾಸಗಿ, ಅರಣ್ಯ ಮತ್ತು ಸರ್ಕಾರಿ ಜಮೀನು ಹ್ಯಾಂಡ್ ಓವರ್ ಮಾಡಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಜಮೀನಿನಲ್ಲಿ ಬರುವ ಮರ ತೆರವಿಗೆ ಅರಣ್ಯ ಇಲಾಖೆ ಅನುಮತಿ ಪಡೆಯೋಣ ಮತ್ತು ಕಂದಾಯ ಭೂಮಿಯಲ್ಲಿ ಬರುವ ಮರವನ್ನ ಪೊಲೀಸರ ಸಹಾಯದಿಂದ ಒಂದು ಗಂಟೆಯಲ್ಲಿ ತೆರವು ಮಾಡಲು ಸಂಸದರು ಸೂಚಿಸಿದರು.
ಮಾನಸೂನ್ ಆರಂಭವಾಗಿದೆ. ಆದರೆ ಜಮೀನಿನಲ್ಲಿ ರೈತರಿಗೆ ಭೂಮಿ ಬಿತ್ತಲು ಅವಕಾಶ ನೀಡದಂತೆ ಸೂಚಿಸಲಾಗಿದೆ. ಒಮ್ಮೆ ಬಿತ್ತನೆ ಮಾಡಿದರೆ ಮತ್ತೆ ಭೂಸ್ವಾಧೀನಕ್ಕೆ ಕಾಯಬೇಕಾಗುತ್ತದೆ ಎಂದು ಸೂಚಿಸಲಾಗಿದೆ.
ಎಳನೀರುಕಫ್ಪದಲ್ಲಿ ರೈಲ್ಬೆ ಭೂಸ್ವಾಧೀನಕ್ಕಿಂತ ಹೆಚ್ಚು ಜಮೀನ ಸ್ವಾಧೀನ ಪಡಿಸಲಾಗಿದೆ ಎಂದು ರೈತರ ಆಕ್ಷಪಣೆ ಬಗ್ಗೆ ಬಙದೋಬಸ್ತ್ ಸರ್ವೆ ಮಾಡಿ ರೈತರ ಮನವೊಲಿಸುವ ಕರಗಯಕ್ಕೆ ಸರ್ಚೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ರೈಲ್ವೆ ಎಸ್ ಎಲ್ ಒ(ಭೂಸ್ವಾಧೀನ) ನಜ್ಮಾ ಮಮಾವರು ಮಾತನಾಡಿ, ಈಗಾಗಲೇ ನೀಡಿದ ರೈಲ್ವೆ ಪರಿಹಾರ ನೀಡಿದ ಭೂಮಿ ಬಿಟ್ಟು, ಉಳಿದ 82 ಪಾಯಿಂಟ್ ನ ರೈತರ ಭೂಮಿ ಭೂಸ್ವಾಧೀನ ಆಗಬೇಕಿದೆ. ಇದನ್ನಬೇಗ ಮಾಡಿದರೆ ಬಜೆಟ್ ನಲ್ಲಿ ಹಣ ಕೊಡಿಸಲು ಸಾಧ್ಯ ಎಂದು ಸಂಸದರು ತಿಳಿಸಿದರು. ಬೇಗ ಈ ಪ್ರೋಸೆಸ್ ಮುಗಿಸಲು ಸಂಸದರು ಸಭೆಯಲ್ಲಿ ಸೂಚಿಸಿದರು.
6.62 ಹಾವೇರಿ ಜಿಲ್ಲೆಯ ಭೂಮಿಯಲ್ಲಿ ರೈಲ್ವೆ ಮಾರ್ಗಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹಿರೇಕೆರೂರು, ರಟ್ಟೆಹಳ್ಳಿಯಲ್ಲಿ 18 ಹಳ್ಳಿಗಳಲ್ಲಿ ರೈಲ್ವೆ ಮಾರ್ಗ ಬರಲಿದೆ. ಇಲ್ಲಿ 8 ಮನೆ ಮತ್ತು ಖಾಸಗಿ ಶಾಲೆಗಳು ಹೋಗಲಿದೆ. ಅಲ್ಲಿನ ಶಾಸಕರಿಗೆ ಮನವರಿಕೆ ಮಾಡಲಾಗಿದೆ. ಆದರೆ ರೈತರು ಆಕ್ಷೇಪಿಸುತ್ತಿರುವುದಾಗಿ ಸಭೆಗೆ ತಿಳಿಸಿದರು. ಅಲ್ಲಿನ ಸಂಸದರನ್ನ ಭೇಟಿ ಮಾಡಲು ರಾಘವೇಂದ್ರ ಸೂಚಿಸಿದರು. ಜುಲೈ ತಿಂಗಳ ಕೊನೆಯಲ್ಲಿ ಈ ಕೆಲಸ ಮುಗಿಸಲು ಸೂಚಿಸಲಾಯಿತು.
ಉಷ ನರ್ಸಿಂಗ್ ಹೋಮ್ ಸರ್ಕಲ್ ಡೆವೆಲಪ್ ಮೆಂಟ್
ಎಲ್ 49 ಸವಳಂಗ ರಸ್ತೆಯ ಫ್ಲೈಓವರ್ ಸರ್ವಿಸ್ ರಸ್ತೆ ನಿರ್ಮಿಸಲು ಸೂಚಿಸಲಾಯಿತು. ವಾಟರ್, ಉಷಾ ನರ್ಸಿಂಗ್ ಆಸ್ಪತ್ರೆ ಎಲ್ಲವೂ ಮುಗಿದಿದೆ. ಸರ್ವಿಸ್ ರಸ್ತೆ ನಿರ್ಮಿಸಲು ಸೂಚನೆ ನೀಡಲಾಯಿತು. ಇಲ್ಲಿ ಹಲವು ಸಮಸ್ಯೆಯಾಗಿತ್ತು. ಸರ್ಕಲ್ ಅಭಿವೃದ್ಧಿಯನ್ನ ಪಾಲಿಕೆಯಿಂದ ಅಭಿವೃದ್ದಿ ಮಾಡಲು ಸಂಸದರು ಸೂಚಿಸಿದರು.
ಇಲ್ಲಿಗೆ 2 ಕೋಟಿ ರೂ. ತೆಗೆದಿಡಲಾಗಿದೆ. ಯುಟಿಲಿಟಿ ಶಿಫ್ಟಿಂಗ್ ಆಗಬೇಕಿದೆ. ಇದಕ್ಕೆ ಎರಡು ಕೋಟಿ ರೂ. ಆಗಲಿದೆ. ಇದಕ್ಕೆ ರೈಲ್ವೆಗೆ ಪ್ರಪೋಸಲ್ ನೀಡಲು ಪಾಲಿಕೆ ಇಂಜಿನಿಯರ್ ಗೆ ಸೂಚಿಸಲಾಯಿತು. ಎರಡು ದಿನದಲ್ಲಿ ಪ್ರಪೋಸಲ್ ನೀಡಲಾಗುವುದು.
ಕಡದಕಟ್ಡೆ ರೈಲ್ವೆ ಫ್ಲೈಓವರ್
ಕಡದಕಟ್ಟೆ ರೈಲ್ವೆ ಫ್ಲೈಓವರ್ ತಡವಾಗುತ್ತಿರುವ ಬಗ್ಗೆ ಗುತ್ತಿಗೆದಾರನಿಂದ ಸ್ಪಷ್ಟನೆ ಪಡೆಯಲಾಯಿತು. ಈ ಗುತ್ತಿಗೆದಾರನನ್ನ ಕ್ಲಾಸ್ ತೆಗೆದುಕೊಳ್ಳಲಾಯಿತು. ಮುಂದಿನ ತಿಂಗಳ ಕೊನೆಯಲ್ಲಿ ಎಲ್ಲ ಕೆಲಸವು ಮುಗಿಸಲು ಸೂಚನೆ ನೀಡಲಾಯಿತು. ಇಲ್ಲವಾದಲ್ಲಿ ಗುತ್ತಿಗೆಯನ್ನ ಬದಲಾಯಿಸುವ ಎಚ್ಚರಿಕೆಯನ್ನೂ ನೀಡಲಾಯಿತು. ಸರ್ವಿಸ್ ರಸ್ತೆಯನ್ನೂ ಮುಗಿಸಲು ಸೂಚಿಸಲಾಯಿತು.
ಕೋಟೆಗಂಗೂರು ಕೋಚಿಂಗ್ ಕೇಂದ್ರ
ಕೋಟೆಗಂಗೂರು ಕೋಚಿಂಗ್ ಇಲ್ಲಿ ದೇವಸ್ಥಾನ, ರೈತರ ಜಮೀನು ಭೂಸ್ವಾದೀನಕ್ಕೆ ಸಮಸ್ಯೆಯಾಗುತ್ತಿರುವ ಬಗ್ಗೆ ಅಧಿಕಾರಿಗಳು ಸೂಚಿಸಿದರು. ವಂದೇಭಾರತ್ ರೈಲ್ವೆ ಕೋಚಿಂಗ್ ಕಾನ್ಸೆಪ್ಟ್ ಇಟ್ಟುಕೊಂಡು ಕೋಚಿಂಗ್ ಸೆಂಟರ್ ನಿರ್ಮಿಸಲು ಸೂಚಿಸಲಾಯಿತು.
ಎಂಪಿ ಮಾತು
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ರಾಘವೇಂದ್ರ ತಾಳಗುಪ್ಪದಿಂದ ಶಿರಸಿಗೆ ಸರ್ವೆ ಮುಗಿದಿದೆ. ಕೊಂಕಣ ರೈಲ್ವೆ ಮಾರ್ಗದ ಬಗ್ಗೆಯೂ ಚೀಫ್ ರೈಲ್ವೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ವಂದೇಭಾರತ್ ರೈಲ್ವೆ ತರಲು ರೈಲ್ವೆ ಮಾರ್ಗದ ಉನ್ನತೀಕರಣದ ಬಗ್ಗೆಯೂ ಚರ್ಚಿಸಲಾಗಿದೆ. ಇಂದು ರೈಲ್ವೆ ಮೇಲ್ಸೇತುವೆಯ ಕಾಮಗಾರಿ ವೀಕ್ಷಣೆಗೆ ತೆರಳುತ್ತಿರುವುದಾಗಿ ತಿಳಿಸಿದರು.
ಇದನ್ನೂ ಓದಿ-https://suddilive.in/archives/17217