ಸುದ್ದಿಲೈವ್/ಶಿವಮೊಗ್ಗ
ಕುಂಸಿ ಪೊಲೀಸ್ ಠಾಣೆಯ ಮಹಿಳ ಎಎಸ್ಐ ಮನೆಯಲ್ಲಿ 3,50,000 ರೂ. ಮೌಲ್ಯದ 70 ಗ್ರಾಂ ಚಿನ್ನಾಭರಣ ಕಳುವಾಗಿದ್ದು ಈ ಬಗ್ಗೆ ಮಹಿಳಾ ಎಎಸ್ಐ ಅವರ ಪತಿ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂಸಿ ಎಎಸ್ಐ ಅವರ ಮನೆ ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಮನೆ ಮಾಡಿದ್ದು ಡೈಲಿ ಕುಂಸಿ ಠಾಣೆಗೆ ಕರ್ತವ್ಯಕ್ಕಾಗಿ ಓಡಾಡಿಕೊಂಡಿದ್ದಾರೆ. ಪತಿ ಸುರೇಶ್ ಎಂಬುವರು ಜೆಸಿಬಿ ಇಟ್ಟುಕೊಂಡಿದ್ದಾರೆ. ಇವರ ಮಕ್ಕಳಿಬ್ಬರನ್ನ ನೋಡಿಕೊಳ್ಳುವ ಸಲುವಾಗಿ ಮಹಿಳೆಯೊಬ್ವರನ್ನ ಮನೆಗೆಲಸಕ್ಕೆ ದಾದಿ ಯನ್ನ ಇಟ್ಟುಕೊಂಡಿದ್ದರು.
ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ರೆಡಿಯಾಗಲು ಮುಂದಾಗಿದ್ದ ಮಹಿಳ ಎಎಸ್ಐ ತಾವು ಇಟ್ಟಿದ್ದ ಬೀರು ತೆಗೆದಾಗ 70 ಗ್ರಾಂನ ಮುಂಗಟ್ಟಿನ ಬಂಗಾರದ ಲಾಂಗ್ ಚೈನ್ ಇಲ್ಲವಾಗಿತ್ತು. ಇದೇ ವೇಳೆ ಮನೆಗೆಲಸದ ಮಹಿಳೆ ರಾಧ ಎಂಬುವರು ಮೈಗೆ ಹುಷಾರ್ ಇಲ್ಲ ಎಂದು ಹೇಳಿ ಮೇ. 20 ರಂದು ಹೋದ ಮಹಿಳೆ ವಾಪಾಸಾಗಿರಲಿಲ್ಲ.
ಈ ವೇಳೆ ಸುರೇಶ್ ಸಹ ಕೆಲಸ ಮೇಲೆ ಬೇರೆ ಊರಿಗೆ ಹೋಗಿದ್ದರು. ಎಎಸ್ ಐ ಅವರು ಜೂ.1ರಂದು ಕಾರ್ಯಕ್ರಮ ನಿಮಿತ್ತ ಬೀರು ತೆಗೆದಾಗ ಶಾಕ್ ಆಗಿದೆ. ಬೀರುವಿನ ಕೀಯಯನ್ನ ರೂಮಿನಲ್ಲಿಡುತ್ತಿದ್ದರಿಂದ ಈಸಿಯಾಗಿ ಮನೆಗೆಲಸದಾಕೆಯೇ ಬೀರುವಿನ ಕೀ ಬಳಸಿ ಕಳ್ಳತನ ಮಾಡಿರುವುದಾಗಿ ಅನುಮಾನಿಸಲಾಗಿದೆ.
ಇದನ್ನೂ ಓದಿ-https://suddilive.in/archives/16531