ಸುದ್ದಿಲೈವ್/ಶಿವಮೊಗ್ಗ
ಇಂದು ತರೀಕೆರೆ ರೈಲುನಿಲ್ದಾಣದ ಪ್ಲಾಟ್‍ಫಾರಂ 1ರ ಫುಟ್‍ಓವರ್ ಬ್ರಿಡ್ಜ್‍ನ ಪಿಲ್ಲರ್‍ಗೆ ಸುಮಾರು 30-35 ವರ್ಷದ ಗಂಡಸ್ಸಿನ ಶವ ನೇಣುಬಿಗಿದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದರ ಗುರುತು ಪತ್ತೆಯಾಗಬೇಕಿದೆ,
ತರೀಕೆರೆ ರೈಲ್ವೇ ಪೊಲೀಸ್‍ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ವ್ಯಕ್ತಿಯ ಚಹರೆ ಸುಮಾರು 5.8 ಅಡಿ ಎತ್ತರವಿದ್ದು, ದೃಢಕಾಯ ಶರೀರ, ಗೋಧಿ ಮೈಬಣ್ಣ, ದುಂಡುಮುಖ, ಅಗಲವಾದ ಹಣೆ, ತಲೆಯಲ್ಲಿ 3 ಇಂಚು ಉದ್ದದ ಕಪ್ಪು ಕೂದಲು ಬಿಟ್ಟಿದ್ದು, ಕುರುಚಲು ಗಡ್ಡ, ಮೀಸೆ ಬಿಟ್ಟಿರುತ್ತಾನೆ.
ಮೈಮೇಲೆ ಹಳದಿ ಮತ್ತು ಕೆಂಪು ಗೆರೆಗಳುಳ್ಳ ನೇರಳೆ ಬಣ್ಣದ ಚೆಕ್ಸ್ ಶರ್ಟ್, ಕಾಫಿ ಕಲ್ ಬರ್ಮುಡಾ ಚೆಡ್ಡಿ, ನೀಲಿ ಬಣ್ಣದ ಕಪ್ಪು ಮತ್ತು ಬಿಳಿ ಗೆರೆಗಳುಳ್ಳ ಲುಂಗಿ ಉಟ್ಟಿರುತ್ತಾನೆ.
ಈ ವ್ಯಕ್ತಿಯ ವಾರಸ್ಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್‍ನ್ನು ಖುದ್ದಾಗಿ ಅಥವಾ ದೂ.ಸಂ.: 08182-222974 / 9480802124 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ರೈಲ್ವೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ-https://suddilive.in/archives/16949