ಸುದ್ದಿಲೈವ್/ಶಿವಮೊಗ್ಗ
ದೇಶದಲ್ಲಿ ನಿನ್ನೆ ಒಂದು ಅಚ್ಚರಿ ಫಲಿತಾಂಶ ದೊರೆತಿತ್ತು. ನಾಳೆ ಪರಿಷತ್ ಚುನಾವಣೆಯ ಮತ್ತೊಂದು ಫಲಿತಾಶ ಹೊರಬೀಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆಯನೂರು ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಎಂದೂ ನಡೆಯದ ಪರಿಷತ್ ಚುನಾವಣೆಯಲ್ಲಿ ಲಕ್ಷ್ಮೀ ಕುಣಿದಿದ್ದಾಳೆ. ನಮಗೆ ಎದುರಾಳಿ ಯಾರು ಎಂಬುದು ಗೊಂದಲವಾಗಿದೆ. ರಘುಪತಿ ಭಟ್ಟರೋ ಅಥವಾ ಬಿಜೆಪಿ ಅಭ್ಯರ್ಥಿನೋ ಎಂಬುದು ಗೊಂದಲವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಮೊದಲ ಸುತ್ತಿನಲ್ಲಿ ಗೆಲ್ಲುವ ನಿರೀಕ್ಷೆ ನನಗೆ ಇದೆ. 34 ಸಾವಿರ ಮತ ಪಡೆದವರು ಗೆಲ್ಲಲಿದ್ದಾರೆ. ಇದನ್ನ ನ ಅವು ಮೊದಲ ಸುತ್ತಿನಲ್ಲೇ ಗೆಲ್ಳಿದ್ದೇನೆ. ಆದರೆ ಮತದಾರರು ಅತಿ ಹೆಚ್ಚು ಪ್ರಮಾಣದಲ್ಲಿ ಗೆಲ್ಲಿಸಲಿದ್ದಾರೆ. ಐದು ವರೆ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಳಿದ್ದಾರೆ ಎಂದರು.
ನೌಕರರ ಸಮುದಾಯಗೋಇಗೆ ಕೊಟ್ಟ ಮಾತುಗಳಿಗೆ ಬಗಮದ್ದವಾಗಿ ಗೆದ್ದ ನಂತರ ಕೆಲಸ ಮಾಡುವೆ. ಹಣದ ಬಲದ ಪೈಪೋಟಿ ನಡೆದಿದೆ. ರಘುಪತಿ ಭಟ್ಟರ ಕಡೆಯವರು ಚುನಾವಣೆ ವೇಳೆ ಬೂತ್ ಗೆ ಬಂದು ಕುಳಿತಿದ್ದಾರೆ. ಇದು ನಮಗೆ ಗೆಲ್ಳು ಸಾಧ್ಯವಾಗಲಿದೆ ಎಂದರು.
ಎದುರಾಳಿಯಾಗಿ ರಾಘವೇಂದ್ರ ಕಙಡು ಬಂದಿಲ್ಲ. ಮೋದಿ ಪರ ಮತಕೇಳಲಾಗಿದೆ. ಗೀತ vs ಮೋದಿ ಚುನಾವಣೆಯಾಗಿದ್ದರಿಂದ ಮೋದಿ ಗೆದ್ದಿದ್ದಾರೆ. ಹಣದ ಬಲದಲ್ಲಿ ಆಯ್ಕೆಯಾಗಿದೆ. ಜನಕೊಟ್ಟ ತೀರ್ಮಾನವನ್ನ ಗೌರವಿಸುತ್ತೇವೆ. ಕಾಂಗ್ರೆಸ್ ಗೆ ಮತ ನೀಡಿದ ಎಲ್ಲರಿಗೂ ಧನ್ಯವಾದ ಎಂದರು.
ಶಿವಮೊಗ್ಗದಲ್ಲಿ ಮೋದಿ ಗೆದ್ದರೆ ದೇಶದಲ್ಲಿ ಗೆಲ್ಲಲಿಲ್ಲ. ರಾಮಮಂದಿರ ಉದ್ಘಾಟನೆಯ ತರಾತುರಿಯೂ ಅವರಿಗೆ ಕಷ್ಟವಾಗಿ ಸರ್ಕಾರ ರಚನೆಗೆ ತಿಣಕಾಡುವಂತಾಗಿದೆ. 400 ಸ್ಥಾನಪಡೆಯುವುದಾಗಿ ಅಹಂನಿಂದ ಗೆದ್ದಿದ್ದೇವೆ. ಐಎನ್ ಡಿಎಗೆ ಗೆಲುವಾಗಿದೆ. ಬಿಜೆಪಿ ತನ್ನ ವರ್ಚಸ್ಸನ್ನ ಕಳೆದುಕೊಂಡಿದೆ. ಧರ್ಮಾಧಾರಿತ ಘೋಷಣೆ ಮೂಲಕ ಸರ್ಕಾರರಚನೆಯ ಅವರ ಆಲೋಚನೆಗೆ ಬ್ರೇಕ್ ಬಿದ್ದಿದೆ ಎಂದರು.
ಇದನ್ನೂ ಓದಿ-https://suddilive.in/archives/16276