ಸುದ್ದಿಲೈವ್/ಶಿವಮೊಗ್ಗ
ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತೆಯಲ್ಲಿ ಇತ್ತೀಚೆಗೆ ಚರ್ಮ ರೋಗ ವಿಭಾಗ ಸಿಮ್ಸ್ ಶಿವಮೊಗ್ಗ ಮತ್ತು ಸಹ್ಯಾದ್ರಿ ಚರ್ಮರೋಗ, ತಜ್ಞರ ಸಂಘದ ವತಿಯಿಂದ ವಿಶ್ವ ತೋನ್ನುರೋಗ ದಿನಾಚರಣೆಯ ಪ್ರಯುಕ್ತ ಅರಿವು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಗಾರದಲ್ಲಿ ಹಿರಿಯೆ ಚರ್ಮರೋಗ ತಜ್ಞರು, ವಿಭಾಗದ ಮುಖ್ಯಸ್ಥರಾದ ಡಾ॥ ದಾದಾಪೀರ್ ಮತ್ತು ವೈದ್ಯಕೀಯ ಅಧೀಕ್ಷಕರಾದ ಡಾ॥ ತಿಮ್ಮಪ್ಪ ಟಿ.ಡಿ ಇವರು ಭಾಗವಹಿಸಿರುತ್ತಾರೆ.
ಹಾಗೂ ಹಿರಿಯ ಚರ್ಮರೋಗ ತಜ್ಞರುಗಳಾದ ಡಾ॥ ಸೀತಾರಾಮ್ ಮತ್ತು ಡಾ॥ ಭರತ್ ಕುಮಾರ್‌ರವರು ಭಾಗವಹಿಸಿ, ತೊನ್ನು ರೋಗದ ಬಗ್ಗೆ ಇರುವ ತಪ್ಪು ಕಲ್ಪನೆ ಹಾಗೂ ಹೊಸ ಚಿಕಿತ್ಸೆಯ ವಿಧಾನಗಳು ಇರುವುದರ ಬಗ್ಗೆ ಮನವರಿಕೆ ಮಾಡಿದರು ಹಾಗೂ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ಹೊಸ ಚಿಕಿತ್ಸೆಯ ವಿಧಾನಗಳು ಲಭ್ಯವಿರುತ್ತದೆ ಎಂದು ತಿಳಿಸಿದರು.
ಜನರಿಗೆ ತೊನ್ನುರೋಗದ ಬಗ್ಗೆ ಅರಿವು ಮೂಡಿಸಲಾಯಿತು. ತೊನ್ನುರೋಗದ ಬಗ್ಗೆ ಇರುವ ಮೌಡ್ಯಗಳು. ತಪ್ಪು ಕಲ್ಪನೆಗಳು, ಕೀಳರಿಮೆಗಳ ಬಗ್ಗೆ ತಿಳುವಳಿಕೆ ಮೂಡಿಸಲಾಯತು.
ಕೊನೆಯದಾಗಿ ಎಲ್ಲಾ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.
ಇದನ್ನೂ ಓದಿ-https://suddilive.in/archives/18073