ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಇಬ್ಬರು ನಾಪತ್ತೆ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ವಿನೋಬನಗರ ಪೋಲಿಸ್ ಠಾಣೆ ವ್ಯಾಪ್ತಿಯ ಶಾಂತಲಾ ಕೋಂ ಬಸವನಗೌಡ ಎಂಬ 44 ವರ್ಷದ ಮಹಿಳೆ ಮೇ 2023 ರಲ್ಲಿ ಮನೆಯಿಂದ ಹೊರಗೆ ಹೋದವರು ಇದುವರೆಗೆ ವಾಪಸ್ ಬಂದಿರುವುದಿಲ್ಲ.
ಈ ಮಹಿಳೆ ಸುಮಾರು 5.4 ಅಡಿ ಎತ್ತರ ದುಂಡುಮುಖ ಕಪ್ಪಕೂದಲು ಗೋಧಿ ಮೈಬಣ ಬಳ್ಳಿ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ.
ಇನ್ನೊಂದು ಪ್ರಕರಣದಲ್ಲಿ ನಗರದ ಸಮೀವುಲ್ಲಾ ಬಿನ್ ಅಬ್ದುಲ್ ಮಜೀದ್ ಎಂಬ 36 ವರ್ಷದ ಪುರುಷ ಮಾರ್ಚ್-2023 ರಲ್ಲಿ ಕಾಣೆಯಾಗಿದ್ದಾರೆ.
ಈವೆರೆಗೂ ಪತ್ತೆಯಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ ಸುಮಾರು 5.4 ಅಡಿ ಎತ್ತರ ದುಂಡುಮುಖ ಕಪ್ಪಕೂದಲು ಗೋಧಿ ಬಣ ಬಿಳಿ ಬಣ್ಣದ ಶರ್ಟ್ ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಕಾಣೆಯಾದವರ ಬಗ್ಗೆ ಸುಳಿವು ಪತ್ತೆಯಾದರೆ ಪಿಐ ವಿನೋಬನಗರ ಪೋಲಿಸ್ ಠಾಣೆ ಶಿವಮೊಗ್ಗ ಅಥವಾ ಪೋಲಿಸ್ ಕಂಟ್ರೋಲ್ ರೂಮ್ ಶಿವಮೊಗ್ಗ ದೂ; 9480803300 / 9480803308 ಸಂಪರ್ಕಿಸಿ ಮಾಹಿತಿಯನ್ನು ನೀಡುವಂತೆ ವಿನೋಬನಗರ ಪೋಲಿಸ್ ಠಾಣೆ ಪೋಲಿಸ್ ಸಬ್ ಇನ್ಸಪೆಕ್ಟರ್ ಶಿವಮೊಗ್ಗ ಅವರು ಪ್ರಕಟಣೆಯಲಿ ತಿಳಿಸಿದ್ದಾರೆ.
ಇದನ್ನೂ ಓದಿ-https://suddilive.in/archives/18083