ಇದು ಸುಲಿಗೆಕೋರ ಸರ್ಕಾರ-ಆರಗ ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ಇದು ಸುಲಿಗೆಕೋರ ಸರ್ಕಾರ ಎಂದು ಶಿವಮೊಗ್ಗದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಧಿಕಾರದ ದಾಹಕ್ಕೆ ಜನರ ಸುಲಿಗೆಗೆ ಮುಂದಾಗಿದೆ.ಇವರ ಜನ ವಿರೋಧಿ ನೀತಿಯಿಂದ ಜನಸಾಮಾನ್ಯರ ಬದುಕು ಕಷ್ಟವಾಗುತ್ತಿದೆ ಎಂದು ಆರೋಪಿಸಿದರು.

ದಿನ ನಿತ್ಯದ ವಸ್ತುಗಳ ಬೆಲೆಯಲ್ಲಿ ತೀವ್ರ ಹೆಚ್ಚಾಗಲಿದೆ.ರೈತರ ಪಹಣಿ ಸೇರಿದಂತೆ ಕಂದಾಯ ಇಲಾಖೆಯ ಶುಲ್ಕಗಳು ಸೇರಿದಂತೆ ಪ್ರತಿಯೊಂದರ ದರ ಹೆಚ್ಚಿಸಿದೆ. ರಾಜ್ಯದಿಂದ ಬಂಡವಾಳ ಹೂಡಿಕೆದಾರರು ಹಿಂದಿರುಗುತ್ತಿದ್ದಾರೆ.ವಿದ್ಯುತ್ ದರ ಹೆಚ್ಚಳದಿಂದ ಉದ್ಯಮಿಗಳು ರಾಜ್ಯ ತೊರೆಯುತ್ತಿದ್ದಾರೆ. ಈ ಕಾಂಗ್ರೆಸ್ ಯಾವಾಗ ತೊಲಗುತ್ತದೆ ಎಂದು ‌ಕಾಯುತ್ತಿದ್ದಾರೆ ಎಂದು ದೂರಿದರು.

ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಸರ್ಕಾರ ಸಹ ಶಿವಮೊಗ್ಗದಲ್ಲಿ ಕೋಮು ಗಲಭೆಯಿಂದ ಬಂಡವಾಳ ಹೂಡಲು ಬಂಡವಾಳ ಶಾಹಿಗಳು ಬರುತ್ತಿಲ್ಲ ಎಂದು ಚಿತ್ರೀಕರಣ ನೀಡಿತ್ತು. ಈಗ ಬಿಜೆಪಿ ಸರದಿಯಾಗಿದೆ.

ಇದನ್ನೂ ಓದಿ-https://suddilive.in/archives/17029

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close