ಮೂರು ಅಂಶಗಳ ಮೇಲೆ ಚೇತನ ಅಹಿಂಸಾ ಸುದ್ದಿಗೋಷ್ಠಿ

ಸುದ್ದಿಲೈವ್/ಶಿವಮೊಗ್ಗ

ಇಂದು ಅಹಿಂಸಾ ಚೇತನ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಶಿವಮೊಗ್ಗಕ್ಕೆ ಭೇಟಿ ನೀಡಿದ ಹಿನ್ನಲೆಯಲ್ಲಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮೂರು ಅಂಶಗಳ ಮೇಲೆ ತಮ್ಮ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಅಲೆಮಾರಿ ಜನಾಂಗವಾದ ದೊಂಬ್ರು, ಹಮ್ ದೋ ಹಮಾರೆ ಬಾರ ಸಿನಿಮಾ‌ನಿಷೇಧದ ಬಗ್ಗೆ ಹಾಗೂ ಜಾತಿಗಣತಿ ಬಗ್ಗೆ ಅಹಿಂಸಾ ಚೇತನ್ ಆಕ್ಷೇಪಿಸಿದೆ. ಬುಕ್ಲಾಪುರ ಗ್ರಾಮದಲ್ಲಿ ಅಲೆಮಾರಿ ಜನಾಂಗ ಜಮೀನು ನೀಡಿದರೂ ಪುನರ್ ವಸತಿ ನೀಡದೆ ಇರುವುದು ತಡಚಾಗುತ್ತಿರುವ ಬಗ್ಗೆ ಆಕ್ಷೇಪಿಸಿದರು.‌

ಸುದ್ದಿ ಗೋಷ್ಠಿ ನಡೆಸಿದ ಅವರು, ಶಾಸಕ ಅರಗ‌ಜ್ಞಾನೇಂದ್ರ ಶಾಸಕರಾಗಿ ಸಚಿವರಾದರೂ ದೊಂಬ್ರು ಜನಾಂಗದ ಬಗ್ಗೆ ಮರೆತಿದ್ದಾರೆ. ಒಂದು ವರ್ಷ ಸಚಿವರಾಗಿ ಮಧು ಬಂಗಾರಪ್ಪ ಬಂದರೂ ಅಲೆಮಾರಿ ಸಮುದಾಯದ ಪುನರ್ ವಸತಿ ಬಗ್ಗೆ ಕ್ರಮಕೈಗೊಂಡಿಲ್ಲ. ಸಿದ್ದರಾಮಯ್ಯ ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗೆಯಾದರೂ ನಿಗದಿತ ಜನಾಂಗಕ್ಕೆ ಮನೆ ನಿರ್ಮಿಸಿಕೊಡಬೇಕು ಎಂದರು.

ಹಮ್ ದೋ ಹಮಾರೆ ಭಾರ ಸಿನಿಮಾಗೆ ಟೈಟಲ್ ಬದಲಾವಣೆ ಆಗಬೇಕಿತ್ತು. ಕೆಲವರು ಟ್ರೈಲರ್ ನೋಡಿ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. 2021 ಬ್ರಾಹ್ಮಣ್ಯದ ವಿರುದ್ಧ, ಹಂಸಲೇಖಾರ ವಾಕ್ ಸ್ವತಂತ್ರ್ಯ ಹೋರಾಟ ನಡೆಸಿದ್ವಿ. ಹಮಾರೆ ಭಾರ ಸಿನಿಮಾ ಬ್ಯಾನ್ ಮಾಡೋದು ವಾಕ್ ಸ್ವತಂತ್ರ್ಯ ಉಲ್ಲಂಘನೆಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ತರಾಟೆಗೆ ತೆಗೆದುಕೊಂಡರು.

ಈ ಸಿನಿಮಾಕ್ಕೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. ಸಿನಿಮಾ ನೋಡಿ ಕೆಲ ಯುವಕರು ಕೊಲೆ ಮಾಡಿ ಜೈಲಿಗೆ ಹೋಗುತ್ತಾರೆ. ನಾನು ಜೈಲಿಗೆ ಹೋದಾಗ ಯುವಕರು ಈ ಬಗ್ಗೆ ಹೇಳಿದ್ದಾರೆ. ಹಮಾರೆ ಬಾರ ಸಿನಿಮಾ ನೋಡೆದ ರಾಜ್ಯ ಸರ್ಕಾರ ಟ್ರೈಲರ್ ನೋಡಿ ಬ್ಯಾನ್ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಬ್ಯಾನ್ ಮಾಡಿದ ಸರ್ಕಾರವೂ ಸಹ ಕೋಟಿಗಟ್ಟಲೆ ಹಣ ಹಾಕಿ ಸಿನಿಮಾ‌ ಮಾಡಿ ಬ್ಯಾನ್ ಮಾಡಿದರೆ ಹೇಗಿರುತ್ತದೆ. ಹಾಗಾಗಿ ಚಾಕ್ ಸ್ವತಂತ್ರ್ಯ ಹತ್ತಿಕ್ಕಬಾರದು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕಾಶ್ಮೀರ ಫೈಲ್ ಸಿನಿಮಾ ಬ್ಯಾನ್ ಮಾಡಿದ್ದರು. ಇದು ಸರಿಯಲ್ಲ. ನನಗೆ ಹಲವು ಮುಸ್ಲೀಂ ಸಿನಿಮಾಗಳಲ್ಲಿ ಪಾತ್ರ ವಹಿಸಲು ಬಂದಿತ್ತು. ನಾನು ನಟಿಸಿರಲಿಲ್ಲ. ಹಾಗಂತ ಅದನ್ನ ತಿರಸ್ಕರಿಸಲಾಗದು ಎಂದರು.

ಜಾತಿ ಜನಗಣತಿ ಬಿಡುಗಡೆ ಮಾಡದೆ ಇರುವುದು ಅನ್ಯಾಯವಾಗಿದೆ. ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯ ಇದನ್ನ ವಿರೋಧಿಸಿದಾಗ ಅಹಿಂದ ಪರ ನಿಂತಿಲ್ಲ. ಹಾಗಾಗಿ ಅಹಿಂದ ಪರ ನಿಲ್ಲಲು ಸಿದ್ದರಾಮಯ್ಯರಿಗೆ ನೈತಿಕ ಹಕ್ಕಿಲ್ಲ. ಚುನಾವಣೆ ಮುಗಿದರೂ ಜಾತಿಗಣತಿ ಜಾರಿಯಾಗಬೇಕು ಎಂದು ಅವರು ಆಗ್ರಹಿಸಿದರು.

ಹಮಾರೆ ಬಾರ ಸಿನಿಮಾದಲ್ಲಿ ಸೆನ್ಸಾರ್ 11 ಬಾರಿ ಕಟ್ ಆಗಿದೆ. ಹೈಕೋರ್ಟ್ ಸಿನಿಮಾ ಬಿಡುಗಡೆ ಮಾಡಿ ಎಂದರೂ ರಾಜ್ಯ ಸರ್ಕಾರ ಸಿನಿಮಾ‌ನೋಡದೆ ಬ್ಯಾನ್ ಮಾಡಿರುವುದು ಸರಿಯಲ್ಲ.‌ ಏನಾದರೂ ಆಕ್ಷೇಪಣೆ ಇದ್ದರೆ ಸೆನ್ಸರ್ ಬೋರ್ಡ್ ಗೆ ಹಾಕಬಹುದಿತ್ತು.‌ ಸಿನಿಮಾ ನೋಂದಣಿಯನ್ನ‌ ಮಾತ್ರ ಎರಡು ವಾರಕ್ಕೆ ರಾಜ್ಯ ಸರ್ಕಾರ ಬ್ಯಾನ್ ಮಾಡಿದೆ ಎಂದರು.‌

ಹಿಂದುತ್ವದ ಯುಸಿಸಿ ಅಲ್ಲ ಸಂವಿಧಾನ ಪರವಾದ ಯುಸಿಸಿ ಪರವಾಗಿ ನಾನು ಇದ್ದೇನೆ. ಆದರೆ ಒನ್ ನೇಷನ್ ಒನ್ ಎಲೆಕ್ಷನ್ ಪರವಾಗಿ ಇಲ್ಲ. ಜೆಡಿಯು ಇದಕ್ಕೆ ಒಪ್ಪಿದೆ. ಇದು ಸರಿಯಲ್ಲ. ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಜನರ ಪರ ನಿಲ್ತಾರೆ ಎಂಬ ನಂಬಿಕೆ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಿಎಸ್ ಎಸ್ ಅಂಬೇಡ್ಕರ್ ವಾದ ಜಿಲ್ಲಾಪ್ರಧಾನ ಸಂಚಾಲಕ ಟಿ.ಹೆಚ್ ಹಾಲೇಶಪ್ಪ, ಜಿಲ್ಲಾ ಸಂಘಟನಾ ಸಂಚಾಲಕರಾದ, ಶಿವಕುಮಾರ್ ಎಂ ಆರ್ ಅಸ್ತಿ ಹಾಗೂ  ಹಾರೋಗುಳಿಗೆ ವಿಶ್ವನಾಥ್ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/16487

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close