ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ ಸಿಬಿಐಗೆವಹಿಸಿ-ಪ್ರಣವಾಂದ ಸ್ವಾಮೀಜಿ

ಸುದ್ದಿಲೈವ್/ಶಿವಮೊಗ್ಗ

ವಾಲ್ಮೀಕಿ‌ ಅಭಿವೃದ್ಧಿ ನಿಗಮದ ಲೆಕ್ಕಾಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಮತ್ತು ನಿಗಮದ‌ ಅವ್ಯವಹಾರ ನಡೆದಿರುವ ಬಗ್ಗೆ ಸಿಬಿಐಗೆ ನೀಡುವಂತೆ ಪ್ರಣವಾನಂದ‌ ಸ್ವಾಮೀಜಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದನ್ನು ಎಸ್ ಐಟಿಗೆ ವಹಿಸುವುದು ಸರಿಯಲ್ಲ. ಇಲ್ಲಿಯ ಹಣ ಬೇರೆ ರಾಜ್ಯಕ್ಕೆ ಹೋಗಿರುವುದರಿಂದ ಎಸ್ ಐಟಿ ತನಿಖೆ ಸರಿಯಲ್ಲ ಎಂದು ಆಗ್ರಹಿಸಿದರು.

ಸಚಿವ ನಾಗೇಂದ್ರರ ರಾಜೀನಾಮೆ ಪಡೆಯಬೇಕು. ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತು ಮಾಡಿ ಸಿಬಿಐ ತನಿಖೆ ನಡೆಸಬೇಕು. ಹಿಂದಿನ‌ಬಿಜೆಪಿ ಸರ್ಕಾರದ ಲ್ಲಿ ಕೆ.ಎಸ್. ಈಶ್ವರಪ್ಪನವರ‌ ರಾಜೀನಾಮೆ ಪಡೆಯಲಾಗಿತ್ತು. ಅದೇ ಮಾದರಿಯಲ್ಲಿ ಇಲ್ಲಿಯೂ ಶಿಕ್ಷೆಯಾಗಬೇಕು. ಹಿಂದುಳಿದ ವರ್ಗದವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಉಳಿದ ನಿಗಮಗಳಿಗೆ ಬಿಡುಗಡೆ ಮಾಡಿರುವ ಹಣದ ಮೇಲೆ ನಿಗಾ ಇಡಬೇಕು. ಯಾವುದೇ ನಿಗಮ ದಲ್ಲಿಯೂ ಇಂತಹ ಅವ್ಯವಹಾರ ನಡೆಯದಂತೆ ಎಚ್ಚರ ವಹಿಸುವಂತೆ ಆಗ್ರಹಿಸಿದರು.

ಈಡಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಸಂಪುಟ ಪುನರ್ ರಚನೆಯಲ್ಲಿ ಇನ್ನೊಂದು ಮಂತ್ರಿ ಸ್ಥಾನ ನೀಡಬೇಕೆಂಬ‌ ಒತ್ತಾಯವಿದೆ ಎಂದ ಸ್ವಾಮೀಜಿ, ಪ್ರಜ್ವಲ್ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಭಾವ ಚಿತ್ರಗಳಿಗೆ ಹೊಡೆಯುವ ಕೆಲಸ ಮಾಡುವುದು ಬೇಡ ಎಂದರು.

ರಾಷ್ಟ್ರೀಯ ಈಡಿಗ ಮಹಾಮಂಡಳಿ ವೆಂಕಟೇಶ ಮೂರ್ತಿ, ನೂತನ‌ಕನ್ನಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಇದನ್ನೂ ಓದಿ-https://suddilive.in/archives/15954

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close