ಗಾಂಜಾ ಮಾರಾಟ, ಸೆನ್ ಪೊಲೀಸರ ಖಡಕ್ ದಾಳಿ, ನಾಲ್ವರು ಅರೆಸ್ಟ್!

ಸುದ್ದಿಲೈವ್/ಶಿವಮೊಗ್ಗ

ದಿನಾಂಕ: 16-06-2024 ರಂದು ಮದ್ಯಾಹ್ನ ಶಿವಮೊಗ್ಗ ಟೌನ್ ಸಹ್ಯಾದ್ರಿ ಕಾಲೇಜ್ ಹಿಂಭಾಗದ ಮೊಟಾಳು ಚೌಡಮ್ಮ ದೇವಸ್ಥಾನದ ಹತ್ತಿರದ ಸೇತುವೆಯ ಮೇಲೆ ಮತ್ತೂರು ಕಡೆಗೆ ಹೋಗುವ ಸಾರ್ವಜನಿಕ ಸ್ಥಳದಲ್ಲಿ 04 ಜನ ಆಸಾಮಿಗಳು ಗಾಂಜಾ ಮಾರಾಟ ಮಾಡುತ್ತಿದ್ದು ಅವರನ್ನ ಬಂಧಸಲಾಗಿದೆ.

ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಎಸ್ಪಿ ಮಿಥುನ್ ಕುಮಾರ್ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮಾರೆಡ್ಡಿ, ಮತ್ತು  ಕಾರಿಯಪ್ಪ ಎ.ಜಿ,  ಮಾರ್ಗದರ್ಶನದಲ್ಲಿ ಜಯನಗರ ಪೊಲೀಸ್ ಠಾಣೆಯ ಪಿಐ ಸಿದ್ದೇಗೌಡ ಹೆಚ್.ಎಂ ಮತ್ತು ಸಿಇಎನ್ ಠಾಣೆಯ ಪಿಎಸ್ ಐ ಬಸವರಾಜ ಬಿರಾದಾರ ನೇತೃತ್ವದ ಸಿಬ್ಬಂಧಿಗಳ ತಂಡವವನ್ನ ರಚಿಸಿ ಖಡಕ್ ದಾಳಿ ನಡೆಸಲಾಗಿದೆ.‌

ದಾಳಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ 1] ಸೈಯದ್ ಸಲೇಹ @ ಸಾಲಿಯ @ ಸಾಲು, 28 ವರ್ಷ, ಮಕಾನ್ ಕಟ್ಟೆ ತಡಸ ಗ್ರಾಮ ಭದ್ರಾವತಿ, 2] ಮಹಮದ್ ಮುಸ್ತಪ @ ಸಮ್ಮು, 25 ವರ್ಷ, ಮೊಮ್ಮಿನ ಮೊಹಲ್ಲ ಅನ್ವರ್ ಕಾಲೋನಿ, ಭದ್ರವಾತಿ, 3] ಮುಬಾರಕ್ @ ಡಿಚ್ಚಿ, 27 ವರ್ಷ, ನೆಹರು ನಗರ, ಭದ್ರಾವತಿ ಮತ್ತು 4] ನ್ಯಾಮತ್ ಖಾನ್ 27 ವರ್ಷ, ಜಟ್‌ಪಟ್ ನಗರ ಪಾರ್ಕ್ ಹತ್ತಿರ ಭದ್ರಾವತಿ* ಇವರನ್ನ ಬಂಧಿಸಲಾಗಿದೆ.

ಆರೋಪಿಗಳಿಂದ ಅಂದಾಜು ಮೌಲ್ಯ 1,35,000/- ರೂಗಳ 1 ಕೆಜಿ 65 ಗ್ರಾಂ ತೂಕದ ಒಣ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು, ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ-https://suddilive.in/archives/17040

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close