ಹಾರನಹಳ್ಳಿ ಬಳಿ ಹಿಟ್ ಅಂಡ್ ರನ್ ಪ್ರಕರಣ-ಓರ್ವ ಸಾವು

ಸುದ್ದಿಲೈವ್/ಶಿವಮೊಗ್ಗ

ಹಾರನಹಳ್ಳಿಯಿಂದ‌ ಮೈಸವಳ್ಳಿಗೆ ಹೋಗುವಾಗ ಹಿಟ್ ಅಂಡ್ ರನ್ ಘಟನೆ ನಡೆದೆ ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಸ್ಥಳದಲ್ಲೇ ಸಾವುಕಂಡರೆ, ಆತನ ಜೊತೆ ಇದ್ದ 7 ವರ್ಷದ ಮಗುವಿಗೆ ಕಾಲಿಗೆ ಪೆಟ್ಟಾಗಿದೆ.

ಸತೀಶ್ ನಾಯ್ಕ್ ಎಂಬ ಯುವಕ ಸ್ಥಳದಲ್ಲೇ ಸಾವು ಕಂಡ ದುರ್ದೈವಿ. ಗ್ರಾಮದ ಪರಿಚಯಸ್ಥರ ಮಗನಿಗೆ ಹುಷಾರಿಲ್ಲದ ಕಾರಣ ಆತನಿಗೆ ಹಾರನಹಳ್ಳಿಯಲ್ಲಿ ಕ್ಲೀನಿಕ್ ಗೆ ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿಕೊಂಡು ವಾಪಾಸ್ ಊರಿಗೆ ಬೈಕ್ ನಲ್ಲಿ ಬರುವ ವೇಳೆ ಶಿವು ಎಂಬುವರ ಜಮೀನಿನ ಬಳಿ ರಸ್ತೆ ಅಪಘಾತ ಸಂಭವಿಸಿದೆ.‌

ಕೆಎ 14 ಇಕ್ಯೂ 1374 ಬೈಕ್ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಹಾನಿಗೊಳಗಾಗಿದೆ. ಈ ಬೈಕು ಗ್ರಾಮದ ರಾಜಾನಾಯ್ಕ್ ಎಂಬುವರಿಗೆ ಸೇರಿದ್ದಾಗಿದೆ. ಅಪಘಾತ ಪಡಿಸಿದ ವಾಹನ ಘಟನಾಸ್ಥಳದಲ್ಲಿ ನಿಲ್ಲಿಸದೆ ಹೋದುದರಿಂದ ಇದೊಂದು ಹಿಟ್ ಅಂಡ್ ರನ್ ಪ್ರಕಣವಾಗಿದೆ‌.

ಗಾಯಗೊಂಡ 7 ವರ್ಷ ಮಗುವನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ಸುಮಾರು 12-30 ರ ಸಮಯದಲ್ಲಿ ಸಂಭವಿಸಿದೆ.

ಇದನ್ನೂ ಓದಿ-https://suddilive.in/archives/17439

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close